ರೈತರ ಸಾಲ ಮನ್ನಾಕ್ಕೆ ಒತ್ತಾಯಿಸಿ ನಾಳೆ ಬೀದಿಗಿಳಿಯಲಿದ್ದಾರೆ ಬಿಎಸ್‌ವೈ
ಬೆಂಗಳೂರು, ಮಾರ್ಚ್ 8: ಕರ್ನಾಟಕ ರೈತರ ಸಾಲ ಮನ್ನಾ ಮಾಡುವಂತೆ ಒತ್ತಾಯಿಸಿ ರಾಜ್ಯ ಬಿಜೆಪಿ ನಾಳೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ.
ರಾಜ್ಯ ಬಿಜೆಪಿ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಎಲ್ಲಾ ಜಿಲ್ಲಾ ಕೇಂದ್ರ ಹಾಗೂ ಹಲವು ಕಡೆಗಳಲ್ಲಿ ಬಿಜೆಪಿ ಪ್ರತಿಭಟನೆ ಆಯೋಜಿಸಿದೆ. 2016-17ನೇ ಆರ್ಥಿಕ ವರ್ಷದ ರಾಜ್ಯ ಬಜೆಟಿನಲ್ಲಿ ರೈತರ ಬೆಳೆ ಸಾಲ ಮನ್ನಾ ಮಾಡಬೇಕು ಎಂದು ಬಿಜೆಪಿ ಒತ್ತಾಯಿಸಲಿದೆ.[ವಿಶೇಷ ಚೇತನರು ಪಡೆದಿದ್ದ ಸಾಲ ಮನ್ನಾ]

ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರಕಾರ ರೈತರ ಬೆಳೆ ಸಾಲ ಮನ್ನಾದ ಶೇಕಡಾ 50 ಹನ ನೀಡುವುದಾದರೆ ನಾವು ಸಾಲ ಮನ್ನಾ ಮಾಡಲಿದ್ದೇವೆ ಎಂದು ಹೇಳಿದೆ. ಹೀಗಾಗಿ ಗುರುವಾರದ ಬಿಜೆಪಿ ಪ್ರತಿಭಟನೆ ಕುತೂಹಲ ಹುಟ್ಟಿಸಿದೆ.
ರೈತರ ಸಾಲ ಮನ್ನಾ ಮಾಡಲು ಒತ್ತಾಯಿಸಿ ಮಾರ್ಚ್ 9 ಕ್ಕೆ ರಾಜ್ಯಾದ್ಯಂತ ಬಿಜೆಪಿ ಪ್ರತಿಭಟನೆ. pic.twitter.com/vDBY88Fozi
— BJP Karnataka (@BJP4Karnataka) March 8, 2017












Click it and Unblock the Notifications