• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನ್ನಡಿಗ ವೈಲ್ಡ್ ಲೈಫ್ 'ಆಸ್ಕರ್' ಗೆಲ್ಲಲು ವೋಟ್ ಮಾಡಿ

By Mahesh
|
Google Oneindia Kannada News

ಚಿಕ್ಕಮಗಳೂರು, ಆ.7: ಲಂಡನ್ನಿನ ವೈಲ್ಡ್‌­ಲೈಫ್‌ ಫೋಟೋ­ಗ್ರಾ­ಫರ್‌ ಆಫ್‌ ದ ಇಯರ್‌ ಡಾಟ್‌ ಕಾಂ ನಡೆ­­ಸುವ 'ಪೀಪಲ್ಸ್‌ ಚಾಯ್ಸ್‌' ಪ್ರಶ­ಸ್ತಿಯ ಅಂತಿಮ ಸುತ್ತಿಗೆ ಶೃಂಗೇ­ರಿಯ ಎಸ್‌.ಎಸ್‌. ರವಿ­ಪ್ರಕಾಶ್‌ ಅವರು ಆಯ್ಕೆಯಾಗಿದ್ದಾರೆ. ರವಿಪ್ರಕಾಶ್ ಅವರ 'ಪ್ಯೂರ್ ಮ್ಯಾಜಿಕ್' ಹೆಸರಿನ ಛಾಯಾಚಿತ್ರ ಅಂತಿಮ ಸುತ್ತು ಪ್ರವೇಶಿಸಿದ್ದು, ನಿಮ್ಮ ಅಮೂಲ್ಯ ಮತಗಳ ಮೂಲಕ ಅವರನ್ನು ಗೆಲ್ಲಿಸಬಹುದಾಗಿದೆ.

ಫೋಟೋ­ಗ್ರಾ­ಫರ್‌ ಆಫ್‌ ದ ಇಯರ್‌ ಪ್ರತಿಷ್ಠಿತ ಪ್ರಶಸ್ತಿಗೆ ಬಿಬಿಸಿ ಮತ್ತು ನ್ಯಾಚುರಲ್‌ ಹಿಸ್ಟರಿ ಮ್ಯೂಸಿಯಂ ಸಹಭಾಗಿತ್ವ ವಹಿಸಿವೆ. ವಿಶ್ವದ 96 ದೇಶದ ಸುಮಾರು 42 ಸಾವಿ­ರಕ್ಕೂ ಹೆಚ್ಚು ಪ್ರವೇಶಗಳು ಬಂದಿದ್ದು, ರವಿಪ್ರಕಾಶ್‌ ಅವರು ಅಂತಿಮ ಸುತ್ತಿಗೆ ಆಯ್ಕೆಯಾದ ಏಕೈಕ ಭಾರತೀಯ ಎನಿಸಿದ್ದಾರೆ.

ಅಂತಿಮ ಸುತ್ತಿಗೆ ಆಯ್ಕೆಯಾದ 50 ಛಾಯಾ­ಚಿತ್ರಗಳನ್ನು ಆನ್‌ಲೈನ್‌ ಮತ­ದಾ­­ನದ ಮೂಲಕ ಪ್ರಶಸ್ತಿಗೆ ಆಯ್ಕೆ ಮಾಡ­ಲಾಗುತ್ತದೆ. ಸೆಪ್ಟೆಂಬರ್‌ 5 ರ­ವ­ರೆಗೆ ಆನ್‌ಲೈನ್‌ ಮತದಾನಕ್ಕೆ ಅವ­ಕಾ­ಶ­ವಿ­­ದೆ. ವಿಜೇತರ ಹೆಸರನ್ನು ಅಕ್ಟೋಬರ್ 21ರಂದು ಪ್ರಕಟಿಸಲಾಗುತ್ತದೆ. ರವಿಪ್ರಕಾಶ್ ಅವರ ಜೇಡನ ಬಲೆಯ ಚಿತ್ರಕ್ಕೆ ವೋಟ್ ಮಾಡಲು [ಇಲ್ಲಿ ಕ್ಲಿಕ್ಕಿಸಿ]

ಮಲೆನಾಡಿನ ಪ್ರತಿಭೆ ರವಿಪ್ರಕಾಶ್

ಮಲೆನಾಡಿನ ಪ್ರತಿಭೆ ರವಿಪ್ರಕಾಶ್

ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಹುಟ್ಟಿ, ಕೊಪ್ಪದಲ್ಲಿ ಬೆಳೆದು ಪ್ರಸ್ತುತ ಬೆಂಗಳೂರಿನ ಟಿಸಿಎಸ್ ಸಾಫ್ಟ್ ವೇರ್ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರವಿಪ್ರಕಾಶ್ ಎಸ್ ಎಸ್ ವೃತ್ತಿಯಿಂದ ಸಾಫ್ಟ್ ವೇರ್ ಇಂಜಿನಿಯರ್.

ರವಿಪ್ರಕಾಶ್ ಅವರು ಹುಟ್ಟೂರಾದ ಶೃಂಗೇರಿಯಲ್ಲಿ ಕ್ಲಿಕ್ ಮಾಡಿದ 'ಪ್ಯೂರ್ ಮ್ಯಾಜಿಕ್' ಚಿತ್ರ ವಿಶ್ವದ 96 ದೇಶದ ಸುಮಾರು 42 ಸಾವಿ­ರಕ್ಕೂ ಹೆಚ್ಚು ಚಿತ್ರಗಳನ್ನು ಹಿಂದಿಕ್ಕಿ ಕೊನೆ ಹಂತ ತಲುಪಿದೆ.

ಛಾಯಾಗ್ರಹಣ ಕ್ಷೇತ್ರದಲ್ಲಿ ಆಸ್ಕರ್

ಛಾಯಾಗ್ರಹಣ ಕ್ಷೇತ್ರದಲ್ಲಿ ಆಸ್ಕರ್

ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಹಾಗೂ ಬಿಬಿಸಿ ವರ್ಲ್ಡ್ ವೈಡ್ ಸಹಭಾಗಿತ್ವ ಪಡೆದುಕೊಂಡಿರುವ ಈ ಫೋಟೋ­ಗ್ರಾ­ಫರ್‌ ಆಫ್‌ ದ ಇಯರ್‌ ಪ್ರಶಸ್ತಿಯನ್ನು ವನ್ಯಜೀವಿ ಛಾಯಾಗ್ರಹಣ ಕ್ಷೇತ್ರದಲ್ಲಿ ಆಸ್ಕರ್ ಎಂದೇ ಕರೆಯಲಾಗುತ್ತದೆ.

ಮ್ಯಾಕ್ರೋ ಫೋಟೋಗ್ರಾಫಿ ಪರಿಣಿತ

ಮ್ಯಾಕ್ರೋ ಫೋಟೋಗ್ರಾಫಿ ಪರಿಣಿತ

ಮಲೆನಾಡಿನ ಪರಿಸರದಲ್ಲಿ ಹುಟ್ಟಿ ಬೆಳೆದ ರವಿಪ್ರಕಾಶ್ ಅವರಿಗೆ ವನ್ಯಜೀವಿ ಛಾಯಾಗ್ರಹಣದ ಜೊತೆ, ಚಿತ್ರದ ಅತಿ ಸೂಕ್ಷ್ಮಗಳನ್ನು ತೋರಿಸಬಲ್ಲ ಮ್ಯಾಕ್ರೋ ಫೋಟೋಗ್ರಾಫಿಯಲ್ಲಿ ಪರಿಣಿತಿ ಪಡೆದುಕೊಂಡಿದ್ದಾರೆ.

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಸಂಸ್ಥೆಯಲ್ಲಿ ಸಾಫ್ಟ್ ವೇರ್ ಉದ್ಯೋಗಿಯಾಗಿ ಬೆಂಗಳೂರಿನಲ್ಲಿ ನೆಲೆಸಿರುವ ರವಿ ಅವರು ವಾರಾಂತ್ಯಗಳಲ್ಲಿ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶ ಅಥವಾ ಊರಿನ ಪರಿಸರದಲ್ಲಿ ಛಾಯಾಗ್ರಾಹಣ ನಡೆಸುತ್ತಾ ಬಂದಿದ್ದಾರೆ.

ಆನ್ ಲೈನ್ ನಲ್ಲಿ ಮತ ಹಾಕಬಹುದಾಗಿದೆ

ಆನ್ ಲೈನ್ ನಲ್ಲಿ ಮತ ಹಾಕಬಹುದಾಗಿದೆ

ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ ಹಾಗೂ ಬಿಬಿಸಿ ವರ್ಲ್ಡ್ ವೈಡ್ ನಡೆಸುವ ವೈಲ್ಡ್ ಲೈಫ್ ಫೊಟೊಗ್ರಫರ್ ಆಫ್ ದಿ ಇಯರ್ ಸ್ಪರ್ಧೆಯನ್ನು ಕಳೆದ 50 ವರ್ಷಗಳಿಂದ ನಡೆಸುತ್ತಾ ಬಂದಿವೆ.

ಆದರೆ, ಪೀಪಲ್ಸ್ ಚಾಯ್ಸ್ ಪ್ರಶಸ್ತಿ ಈ ಬಾರಿಯ ವಿಶೇಷವಾಗಿದೆ. ತೀರ್ಪುಗಾರರು ಅಂತಿಮವಾಗಿ 50 ಛಾಯಾಚಿತ್ರಗಳನ್ನು ಆಯ್ಕೆ ಮಾಡಿದ ಮೇಲೆ ಜನರೇ ನೇರವಾಗಿ ಆನ್ ಲೈನ್ ನಲ್ಲಿ ಮತ ಹಾಕಬಹುದಾಗಿದೆ.

ಚಿತ್ರದಲ್ಲಿ: ಟಿಸಿಎಸ್ 10ಕೆ ಮ್ಯಾರಾಥಾನ್ ಸಂದರ್ಭದಲ್ಲಿ ಪ್ರದರ್ಶನಗೊಂಡ ರವಿಪ್ರಕಾಶ್ ಅವರ ಚಿತ್ರಗಳು
ಹೆಚ್ಚಿನ ಮಾಹಿತಿ ರವಿಪ್ರಕಾಶ್ ಅವರ ವೆಬ್ ತಾಣ ವೀಕ್ಷಿಸಿ

English summary
TCS company Techie Raviprakash S.S a native of Sringeri has captured a spectrum whilst experimenting with macro imaging of a spider and its web. This image is part of our first ever People's Choice Award. He is the only photographer from India selected to the final round. Do Vote for this image
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X