ಡಿಕೆಶಿ ಬಂಧನಕ್ಕೆ ಒಕ್ಕಲಿಗ ಟಚ್: ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ಬಿಜೆಪಿ ಮಾಸ್ಟರ್ ಪ್ಲಾನ್
Recommended Video
ಡಿ.ಕೆ.ಶಿವಕುಮಾರ್ ಅವರನ್ನು ಒಕ್ಕಲಿಗ ಎನ್ನುವ ಕಾರಣಕ್ಕಾಗಿ, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದರೇ ಅಥವಾ ಅಕ್ರಮ ಹಣ ವರ್ಗಾವಣೆ ವಿಚಾರಕ್ಕಾಗಿಯೋ ಎನ್ನುವುದು ಇಲ್ಲಿ ಸಹಜವಾಗಿ ಕಾಡುವ ಪ್ರಶ್ನೆ.
ಆದರೂ, ಡಿಕೆಶಿ ಬಂಧನದ ವಿಚಾರದಲ್ಲಿ 'ರಾಜಕೀಯ ಮೇಲಾಟ' , 'ದ್ವೇಷ ರಾಜಕಾರಣ', 'ಸರಕಾರೀ ಯಂತ್ರಗಳ ದುರ್ಬಳಕೆ' ಮಾಡಿಕೊಂಡಿದೆ ಎನ್ನುವ ಆರೋಪ ಏನು ಬಿಜೆಪಿ ಮೇಲಿದೆಯೋ, ಅದಕ್ಕೆ ಆ ಸಮುದಾಯದ ಲೇಪನವನ್ನು ನೀಡಲು ಕಾಂಗ್ರೆಸ್-ಜೆಡಿಎಸ್ ಒಂದು ಹಂತಕ್ಕೆ ಯಶಸ್ವಿಯಾಗಿದೆ.
ರಾಜ್ಯದ ಪ್ರಬಲ ಸಮುದಾಯವಾಗಿರುವ ಒಕ್ಕಲಿಗರ ಸಿಟ್ಟನ್ನು ಎದುರಿಹಾಕಿಕೊಳ್ಳುವುದು ಬಿಜೆಪಿಗೆ ಬೇಕಾಗಿಲ್ಲ. ಹಾಗಾಗಿ, ಸದ್ಯದ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು, ಬಿಜೆಪಿ ಹೊಸ ತಂತ್ರಗಾರಿಗಕೆಯ ಮೊರೆ ಹೋಗಿದೆ. ಅದು, ಕೂಡಾ, ಒಕ್ಕಲಿಗ ಅಸ್ತ್ರವೇ ಹೊರತು, ಬೇರೆಯಲ್ಲ.
ಬಿಜೆಪಿಯಲ್ಲಿ ಆ ಸಮುದಾಯದ ಹಲವು ಮುಖಂಡರಿದ್ದರೂ, ಸಂಪುಟದಲ್ಲಿ ಎರಡನೇ ಪ್ರಾತಿನಿಧ್ಯ ಆ ಸಮುದಾಯಕ್ಕೆ ಸಿಕ್ಕಿದ್ದರೂ, ಒಕ್ಕಲಿಗ ಸಮುದಾಯದ ನಾಯಕರು ಎಂದಾಗ ಮಂಚೂಣಿಯಲ್ಲಿ ಬರುವ ಹೆಸರು ಗೌಡ್ರ ಕುಟುಂಬ, ನಂತರ ಡಿ.ಕೆ.ಶಿವಕುಮಾರ್. ಅದಾದ ಮೇಲೆ ಅಶೋಕ್. ಇನ್ನೆಷ್ಟೋ ಜನರಿಗೆ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್, ಆ ಸಮುದಾಯದವರು ಎನ್ನುವುದು ತಿಳಿದಿರುವುದೂ ಖಾತ್ರಿಯಿಲ್ಲ.

ಡಿಕೆಶಿ ಬಂಧನದ ವಿಚಾರ, ಅದಕ್ಕೆ ಸಂಬಂಧಿಸಿದ ಹೋರಾಟಗಳು
ಡಿಕೆಶಿ ಬಂಧನದ ವಿಚಾರ ಮತ್ತು ಅದಕ್ಕೆ ಸಂಬಂಧಿಸಿದ ಹೋರಾಟಗಳು ಇನ್ನೂ ಜೀವಂತವಾಗಿದೆ ಎನ್ನುವುದಕ್ಕಿಂತ, ದಿನದಿಂದ ದಿನಕ್ಕೆ ಅದರ ಕಿಚ್ಚು ಹೆಚ್ಚಾಗುತ್ತಾ ಸಾಗುತ್ತಿದೆ. ಮಂಗಳವಾರ (ಸೆ 10) ಸಮುದಾಯದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಅಶ್ವಥ್ ನಾರಾಯಣ್ ಅವರಿಗೆ ಅದರ ಬಿಸಿ ತಟ್ಟಿದೆ. ಒಕ್ಕಲಿಗರು ಎಲ್ಲರಂತಲ್ಲ ಎನ್ನುವ ಹೇಳಿಕೆಯನ್ನು ನೀಡಿ, ಕುಮಾರಸ್ವಾಮಿ, ಇನ್ನಷ್ಟು ತುಪ್ಪ ಸುರಿದಿದ್ದಾರೆ.

ಎದುರಾಗುತ್ತಿರುವ ಉಪಚುನಾವಣೆ
ಉಪಚುನಾವಣೆ ಎದುರಾಗುತ್ತಿರುವುದರಿಂದ ಮತ್ತು ಸರಕಾರದ ಪಾಲಿಗೆ ಇದರ ಫಲಿತಾಂಶ ನಿರ್ಣಾಯಕವಾಗಿರುವುದರಿಂದ, ಒಕ್ಕಲಿಗ ಸಮುದಾಯದ ಸಿಟ್ಟಿನ ವಿರುದ್ದ ಹೋಗುವುದು ಬಿಜೆಪಿಗೆ ಬೇಕಾಗಿಲ್ಲ. ಹಾಗಾಗಿ, ತಮ್ಮ ಪಕ್ಷದ ಪ್ರಮುಖ ಒಕ್ಕಲಿಗ ಸಮುದಾಯದ ಮುಖಂಡರನ್ನು ಬಳಸಿಕೊಂಡು, ಕಾಂಗ್ರೆಸ್ ಮತ್ತು ಜೆಡಿಎಸ್ಸಿಗೆ ತಿರುಗೇಟು ನೀಡಲು ಬಿಜೆಪಿ ಸಜ್ಜಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ.

ಡಾ. ಅಶ್ವಥ್ ನಾರಾಯಣ, ಅಶೋಕ್, ಸಿ.ಟಿ.ರವಿ
ಸಚಿವರುಗಳಾದ ಡಾ. ಅಶ್ವಥ್ ನಾರಾಯಣ, ಅಶೋಕ್, ಸಿ.ಟಿ.ರವಿ, ಸಂಸದರಾದ ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ, ಬಚ್ಚೇಗೌಡ ಅವರನ್ನು ಈ ಪರಿಸ್ಥಿತಿಯನ್ನು ಹ್ಯಾಂಡಲ್ ಮಾಡಲು, ಇವರನ್ನೆಲ್ಲಾ ಮುಂದಕ್ಕೆ ಬಿಡಲು ಬಿಜೆಪಿ ಯೋಜನೆ ರೂಪಿಸುತ್ತಿದೆ ಎನ್ನುವ ಮಾತು ಬಲವಾಗಿ ಕೇಳಿಬರುತ್ತಿದೆ.

ಬಿಜೆಪಿ ವರಿಷ್ಠರು ಸೂಚನೆ
ಅದರಂತೇ, ಈ ಸಮುದಾಯದ ನಾಯಕರನ್ನು ಹೊರತು ಪಡಿಸಿ, ಈ ವಿಚಾರದಲ್ಲಿ, ಬೇರೆಯಾರೂ ಬಹಿರಂಗ ಹೇಳಿಕೆ ನೀಡದಂತೆ ಬಿಜೆಪಿ ವರಿಷ್ಠರು ಸೂಚನೆ ಹೊರಡಿಸುವ ಸಾಧ್ಯತೆಯಿದೆ. ಡಿಕೆಶಿ ಬಂಧನ ವಿರೋಧಿಸುತ್ತಿರುವ ಒಕ್ಕಲಿಗ ಸಮುದಾಯದ ನಾಯಕರನ್ನು, ಬಿಜೆಪಿಯ ಒಕ್ಕಲಿಗ ಸಮುದಾಯದ ನಾಯಕರುಗಳು ಮಾತ್ರ ಟಾರ್ಗೆಟ್ ಮಾಡಬೇಕು. ಆ ಮೂಲಕ, ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾಗಿದೆ.

ಮುಳ್ಳನ್ನು, ಮುಳ್ಳಿನಿಂದಲೇ ತೆಗೆಯಬೇಕು ಎನ್ನುವ ಬಿಜೆಪಿ ವರಿಷ್ಠರ ಪ್ಲಾನ್
ಮುಳ್ಳನ್ನು, ಮುಳ್ಳಿನಿಂದಲೇ ತೆಗೆಯಬೇಕು ಎನ್ನುವ ಬಿಜೆಪಿ ವರಿಷ್ಠರ ಪ್ಲಾನ್ ಏನಿದೆಯೋ, ಅದು ಮುಂದಿನ ದಿನಗಳಲ್ಲಿ ಯಾವರೀತಿ ಕೆಲಸ ಮಾಡಲಿದೆ ಎನ್ನುವುದನ್ನು ಕಾದುನೋಡಬೇಕಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ಸಿಗೆ, ಇದು, ಡಿಕೆಶಿ ಬಂಧನದ ವಿರುದ್ದದ ಹೋರಾಟಕ್ಕಿಂತ, ಮೋದಿ ಮತ್ತು ಅಮಿತ್ ಶಾ ವಿರುದ್ದ ರಣಕಹಳೆ ಊದುವುದು...












Click it and Unblock the Notifications