ಶ್ರಾವಣ ಸೋಮವಾರದಂದು ಕರ್ನಾಟಕದ ಈ ಐದು ದೇವಸ್ಥಾನಗಳಿಗೆ ಭೇಟಿ ನೀಡಿದರೆ ಪುಣ್ಯ ಫಲ
ಇಂದಿನಿಂದ ಶ್ರಾವಣ ಮಾಸ ಆರಂಭ.. ದೇಶದಲ್ಲಿ ಹಬ್ಬಗಳ ಆಚರಣೆಗೆ ಈ ಮಾಸದಿಂದ ಚಾಲನೆ.. ಶ್ರಾವಣ ಬಂದರೆ ನಾಡಿಗೆ ಹರುಷ.. ಈ ಪುಣ್ಯ ಸಮಯದಲ್ಲಿ ಈಶ್ವರನ ಆರಾಧನೆಗೆ ವಿಶೇಷ ಮಹತ್ವ ನೀಡಲಾಗಿದೆ. ಈ ಸಮಯದಲ್ಲಿ ದೇಶದಲ್ಲಿ 12 ಜ್ಯೋತಿರ್ಲಿಂಗ ದರ್ಶನ ಮಾಡಿದರೆ ಪುಣ್ಯ ಲಭಿಸುತ್ತದೆ. ಆದರೆ ದೇಶ ಸುತ್ತಲು ಆಗದವರು ರಾಜ್ಯದಲ್ಲಿನ ಪುಣ್ಯ ಕ್ಷೇತ್ರಗಳ ದರ್ಶನವನ್ನು ಮಾಡಬಹುದು.
ಕರ್ನಾಟಕದಲ್ಲಿ ಈಶ್ವರನ ಸಾನಿಧ್ಯ ಹೊಂದಿರುವ ಕ್ಷೇತ್ರಗಳು ಹಲವು. ಶ್ರಾವಣ ಮಾಸದ ಸೋಮವಾರದ ದಿನ ಈ ಪುಣ್ಯ ಕ್ಷೇತ್ರಗಳ ದರ್ಶನ ಮಾಡಿದರೆ, ಪುಣ್ಯ ಫಲ. ಕರ್ನಾಟದಲ್ಲಿ ಒಂದೂ ಜ್ಯೋತಿರ್ಲಿಂಗ ಇಲ್ಲ ಆದರೆ, ನಮ್ಮ ರಾಜ್ಯದಲ್ಲೂ ಪುರಾಣ ಪ್ರಸಿದ್ಧ ಕ್ಷೇತ್ರಗಳು ಇವೆ. ಶ್ರಾವಣದಲ್ಲಿ ದರ್ಶನ ಮಾಡಬಹುದಾದ ಶಿವನ ಪುಣ್ಯ ಕ್ಷೇತ್ರಗಳ ಪಟ್ಟಿ ಇಲ್ಲಿದೆ.

ಗೋಕರ್ಣ
ರಾವಣ, ಶಿವನಿಂದ ಆತ್ಮಲಿಂಗವನ್ನು ಪಡೆದು, ಲಂಕಾಕ್ಕೆ ಹೊರಟಿದ್ದನು. ಸಾಯಂಕಾಲ ಆಗಿದ್ದರಿಂದ ಸಂಧ್ಯಾವಂದನೆ ಮುಗಿಸಲು ಮುಂದಾಗಿದ್ದ. ಆದರೆ ಶಿವನ ಆ ಒಂದು ಮಾತು ಆತನಿಗೆ ನೆನಪು ಆಗುತ್ತದೆ. ಈ ಲಿಂಗವನ್ನು ಕೆಳಗೆ ಇಡಬಾರದು ಎಂದು. ಆಗ ಅಲ್ಲಿ ಇದ್ದ ಬಾಲಕನ ಕೈಗೆ ಶಿವನ ಲಿಂಗವನ್ನು ರಾವಣ ನೀಡಿದ. ಸಮಯ ಹೆಚ್ಚು ಆದ ಬಳಿಕ ಶಿವನ ಲಿಂಗವನ್ನು ಅಲ್ಲಿಯೇ ಇಟ್ಟನು ಎಂಬ ಪುರಣಾ ಕಥೆ ಇದೆ.
ಭಾರತದಲ್ಲಿರುವ ಜ್ಯೋತಿರ್ಲಿಂಗದಂತೆ ನಮ್ಮ ರಾಜ್ಯದಲ್ಲಿರುವ ಆತ್ಮಲಿಂಗಕ್ಕೂ ಅಷ್ಟೇ ಮಹತ್ವ ನೀಡಲಾಗಿದೆ. ಮಹಾಬಲೇಶ್ವರ ದೇವಸ್ಥಾನ ಇತಿಹಾಸ ಪ್ರಸಿದ್ಧಿಯನ್ನು ಪಡೆದಿದೆ. ಈ ಪುಣ್ಯ ಕ್ಷೇತ್ರದ ದರ್ಶನವನ್ನು ಶ್ರಾವಣ ಮಾಸದಲ್ಲಿ ಮಾಡುವುದರಿಂದ ಪುಣ್ಯ ಫಲ ಲಭಿಸುತ್ತದೆ. ದೇಶದಲ್ಲಿ ಅತ್ಯಂತ ಪ್ರಸಿದ್ಧ ಪಡಿದಿರುವ ಈ ಶೈವ ಕ್ಷೇತ್ರದಲ್ಲಿ ಈಶ್ವರ ದರ್ಶನ ಮಾಡುವುದರಿಂದ ಇಷ್ಟಾರ್ಥಗಳು ನೆರವೇರುವವು.

ಮುರುಡೇಶ್ವರ
ಉತ್ತರ ಕನ್ನಡದಲ್ಲಿ ಹಲವು ಪ್ರವಾಸಿ ತಾಣಗಳಿವೆ. ಅದರಲ್ಲಿ ಮುರುಡೇಶ್ವರ್ ಸಹ ಒಂದು. ಈ ಕ್ಷೇತ್ರ ಸಹ ಪುರಾಣಗಳ ಪುಟದಲ್ಲಿ ಸ್ಥಾನ ಪಡೆದಿದೆ. ತನ್ನ ಗೋಪುರ ಹಾಗೂ ಶಿವನ ದೊಡ್ಡದಾದ ಮೂರ್ತಿಗೆ ಹೆಸರುವಾಸಿ. ಈ ಕ್ಷೇತ್ರದಲ್ಲಿ ಈ ಮಾಸದಲ್ಲಿ ದರ್ಶನವನ್ನು ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ದೇವಸ್ಥಾನದ ಸುತ್ತಲು ಅರಬ್ಬಿ ಸಮುದ್ರ ಹಾಗೂ ಹಚ್ಚ ಹಸಿರಿನ ಪರಿಸರದ ಮಧ್ಯೆ ಈ ದೇವರ ದರ್ಶನ ಮನಸ್ಸಿಗೆ ನವ ಉಲ್ಲಾಸವನ್ನು ನೀಡುತ್ತದೆ.
ಧರ್ಮಸ್ಥಳ
ದಕ್ಷಿಣ ಕನ್ನಡ ಜಿಲ್ಲೆಯ ಹಲವು ಪವಿತ್ರ ಕ್ಷೇತ್ರಗಳು ಇವೆ. ಇದರಲ್ಲಿ ಎಲ್ಲರ ಚಿತ್ತ ಕದ್ದಿರುವ ಕ್ಷೇತ್ರ ಧರ್ಮಸ್ಥಳ ಮಂಜುನಾಥ. ಈ ಕ್ಷೇತ್ರ ಮಂಜುನಾಥನ ಆವಾಸ ಸ್ಥಾನ ಎಂದು ನಂಬಲಾಗಿದೆ. ಈ ಸ್ಥಳವನ್ನು ಶಿವನ ಅಚ್ಚುಮೆಚ್ಚಿನ ಸ್ಥಳಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ನೇತ್ರಾವತಿ ದಂಡೆಯಲ್ಲಿರುವ ಈ ಕ್ಷೇತ್ರದಲ್ಲಿ ಶ್ರಾವಣ ಮಾಸದಲ್ಲಿ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ. ಈ ಕ್ಷೇತ್ರದ ದರ್ಶನವನ್ನು ಮಾಡಿದರೆ ಕಷ್ಟಗಳು ನಿವಾರಣೆ ಆಗುತ್ತವೆ ಎಂಬ ನಂಬಿಕೆ.

ವಿರೂಪಾಕ್ಷ
ವಿಜಯನಗರ ಸಾಮ್ರಾಜ್ಯದ ರಾಜಧಾನಿ ಹಂಪಿಯಲ್ಲಿ ವಿರೂಪಾಕ್ಷನ ಸನ್ನಿಧಾನವಿದೆ. ತುಂಗಭದ್ರಾ ನದಿಯ ದಡದಲ್ಲಿದೆ. ಈ ಕ್ಷೇತ್ರದಲ್ಲಿ ಶಿವನ ರೂಪದಲ್ಲಿ ವಿರೂಪಾಕ್ಷ ದೇವರು ನೆಲೆಸಿದ್ದಾರೆ. ಹೀಗಾಗಿ ಈ ಸ್ಥಳಕ್ಕೂ ತನ್ನದೇ ಆದ ಪಾವಿತ್ರತೆ ಇದೆ. ಶ್ರಾವಣ ಮಾಸದಲ್ಲಿ ದೇವರ ದರ್ಶನ ಮಾಡುವುದರಿಂದಲೇ ಮನುಷ್ಯನಿಗೆ ಒಳಿತಾಗುತ್ತದೆ.
ನಂಜನಗೂಡು
ಮೈಸೂರಿನಿಂದ 23 ಕಿಲೋ ಮಿಟರ್ ದೂರದಲ್ಲಿರುವ ನಂಜನಗೂಡು ಕ್ಷೇತ್ರ ಸಹ ಪುಣ್ಯ ಕ್ಷೇತ್ರ. ಈ ಸ್ಥಳವನ್ನು ದಕ್ಷಿಣ ಕಾಶಿ ಎಂದೇ ಕರೆಯಲಾಗುತ್ತದೆ. ಈ ಸ್ಥಳಕ್ಕೆ ಐತಿಹಾಸಿಕ ಹಿನ್ನೆಲೆ ಇದೆ. ಕಪಿಲಾ ನದಿಯ ದಡದ ಮೇಲೆ ನಿಂತಿರುವ ಈ ಕ್ಷೇತ್ರದಲ್ಲಿ ಸಾಕ್ಷ್ಯಾತ ನಂಜುಂಡೇಶ್ವರ್ ನೆಲೆಸಿದ್ದಾನೆ ಎಂಬ ನಂಬಿಕೆ. ಈ ದೇವಸ್ಥಾನದಲ್ಲಿ ಶ್ರಾವಣ ಮಾಸದಲ್ಲಿ ಭಕ್ತರ ದಂಡೇ ಹರಿದು ಬರುತ್ತದೆ. ಹೀಗಾಗಿ ಈ ಪುಣ್ಯ ಕ್ಷೇತ್ರದ ದರ್ಶನದಿಂದ ಒಳ್ಳೆಯದಾಗುತ್ತದೆ.












Click it and Unblock the Notifications