Karnataka Rails: ವಿಶ್ವಮಾನವ ರೈಲು ಸಂಚಾರ ಅಡಚಣೆ! ವೀಕ್ಲಿ ರೈಲು ಸೇವೆ ವಿಸ್ತರಣೆ, ಅಪ್ಡೇಟ್ ವಿವರ
ಬೆಂಗಳೂರು, ಏಪ್ರಿಲ್ 24: ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಕರ್ನಾಟಕ ಭಾಗದಲ್ಲಿ ವಿವಿಧ ರೈಲುಗಳ ಸೇವೆಯಲ್ಲಿ ಆದ ಬದಲಾವಣೆ, ಅಪ್ಡೇಟ್ ಸಿಕ್ಕಿದೆ. ಕೆಲವೆಡೆ ರೈಲ್ವೆ ಹಳಿ ದುರಸ್ತಿ, ತುರ್ತು ಕಾರ್ಯ ಕೈಗೊಳ್ಳಲಾಗುತ್ತಿದೆ. ನರಸಾಪುರ-ಬೆಂಗಳೂರು ನಡುವೆ ವಿಶೇಷ ರೈಲು ಸೇವೆ ಮುಂದುವರಿಸಲಾಗಿದೆ. ಭಾಗಶಃ ಸ್ಥಗಿತಗೊಂಡಿದ್ದ ರೈಲು ಸೇವೆಗಳನ್ನು ಪುನಾರಂಭಗೊಳಿಸಲಾಗಿದೆ. ವಿಶ್ವಮಾನವ ಎಕ್ಸ್‌ಪ್ರೆಸ್ ರೈಲನ್ನು ನಿಯಂತ್ರಿಸಲಾಗುತ್ತಿದೆ.
ಹೌದು, ಬೆಂಗಳೂರು-ಹುಬ್ಬಳ್ಳಿ ರೈಲ್ವೆ ಮಾರ್ಗದ ಮಧ್ಯೆ ಹಾವೇರಿ ಮತ್ತು ಬ್ಯಾಡಗಿ ಭಾಗದ ನಡುವೆ ಅಗತ್ಯವಿರುವ ರೈಲು ಹಳಿಗಳ ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ. ಹೀಗಾಗಿ ಬೆಳಗಾವಿ - ಮೈಸೂರು ವಿಶ್ವಮಾನವ ದೈನಂದಿನ ಎಕ್ಸ್ ಪ್ರೆಸ್ ರೈಲನ್ನು (17325) ಏಪ್ರಿಲ್ 28, 29 ಹಾಗೂ ಮೇ ತಿಂಗಳ 1, 2, 4, 5, 6, 8, 9, 11, 12, 13, 15 ಮತ್ತು 16 ರಂದು ಮಾರ್ಗಮಧ್ಯೆ 105 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತದೆ. ಪ್ರಯಾಣಿಕರು ಗಮನಿಸುವಂತೆ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಶೇಷ ರೈಲು ಸೇವೆ ವಿಸ್ತರಣೆ
ಬೇಸಿಗೆ ಅವಧಿಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನು ನಿವಾರಿಸಲು, ನರಸಾಪುರ ಮತ್ತು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣಗಳ ನಡುವೆ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲುಗಳ ಸಂಚಾರ ನಡೆಸಲಾಗುತ್ತಿದೆ. ಅಸ್ತಿತ್ತದಲ್ಲಿರುವ ಈ ರೈಲಿನ ಸೇವೆಯ ಅದೇ ದಿನ, ಸಮಯ ಹಾಗೂ ನಿಲುಗಡೆ ಸಹಿತ ಮುಂದುವರೆಸಲು ದಕ್ಷಿಣ ಮಧ್ಯ ರೈಲ್ವೆ ತಿಳಿಸಿದೆ.
* ರೈಲು ಸಂಖ್ಯೆ 07153 ನರಸಾಪುರ-ಎಸ್‌ಎಂವಿಟಿ ಬೆಂಗಳೂರು ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು ಮೇ 9 ರಿಂದ ಜೂನ್ 27 ರವರೆಗೆ ಸೇವೆಯನ್ನು ಮುಂದುವರಿಸಲಿದೆ.
* ರೈಲು ಸಂಖ್ಯೆ 07154 ಎಸ್‌ಎಂವಿಟಿ ಬೆಂಗಳೂರು-ನರಸಾಪುರ ಸಾಪ್ತಾಹಿಕ ವಿಶೇಷ ಎಕ್ಸ್ ಪ್ರೆಸ್ ರೈಲು ಮೇ 10 ರಿಂದ ಜೂನ್ 28 ರವರೆಗೆ ಕಾರ್ಯಾಚರಣೆ ವಿಸ್ತರಣೆ ಮಾಡಲಾಗಿದೆ.
ಹೆಚ್ಚುವರಿ ನಿಲುಗಡೆ ಸಹಿತ ರೈಲು ಸೇವೆ ವಿಸ್ತರಣೆ
ಭುವನೇಶ್ವರ ಮತ್ತು ಯಶವಂತಪುರ ನಡುವಿನ ಸಾಪ್ತಾಹಿಕ ವಿಶೇಷ ರೈಲುಗಳ ಸಂಚಾರವನ್ನು ಯಲಹಂಕದಲ್ಲಿ ಹೆಚ್ಚುವರಿ ನಿಲುಗಡೆಯೊಂದಿಗೆ ವಿಸ್ತರಿಸಲಾಗಿದೆ. ಪ್ರಯಾಣಿಕರ ದಟ್ಟಣೆಯನ್ನು ಗಮನದಲ್ಲಿಟ್ಟುಕೊಂಡು, ಪೂರ್ವ ಕರಾವಳಿ ರೈಲೆಯು ಭುವನೇಶ್ವರ ಮತ್ತು ಯಶವಂತಪುರದ ನಡುವೆ ಸಂಚರಿಸುವ ಸಾಪ್ತಾಹಿಕ ವಿಶೇಷ ರೈಲುಗಳ ಸೇವೆಯನ್ನು ಯಲಹಂಕದಲ್ಲಿ ಹೆಚ್ಚುವರಿ ನಿಲುಗಡೆಯೊಂದಿಗೆ ವಿಸ್ತರಿಸಿದೆ.

ಭುವನೇಶ್ವರ-ಯಶವಂತಪುರ ಸಾಪ್ತಾಹಿಕ ವಿಶೇಷ ರೈಲು (ಸಂಖ್ಯೆ 02811) ಏಪ್ರಿಲ್ 24 ರಿಂದ ಜೂನ್ 28 ರವರೆಗೆ ತನ್ನ ಸೇವೆಯನ್ನು ಮುಂದುವರಿಸಲಿದೆ. ಮರಳಿ ಅದೇ ಯಶವಂತಪುರ-ಭುವನೇಶ್ವರ ಸಾಪ್ತಾಹಿಕ ವಿಶೇಷ ರೈಲು (ಸಂಖ್ಯೆ 02812) ಮೇ 26 ರಿಂದ ಜೂನ್ 30 ರವರೆಗೆ ಲಭ್ಯವಿರುತ್ತದೆ. ಈ ರೈಲುಗಳ ವೇಳಾಪಟ್ಟಿ ಮತ್ತು ಬೋಗಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ರೈಲು (02811) ಯಲಹಂಕ ಜಂಕ್ಷನ್‌ಗೆ ರಾತ್ರಿ 11:18 ಗಂಟೆಗೆ ಆಗಮಿಸಿ, 11:20 ಗಂಟೆಗೆ ನಿರ್ಗಮಿಸಲಿದೆ. ಅದೇ ರೀತಿ ರೈಲು (02812) ಯಲಹಂಕ ರೈಲು ಜಂಕ್ಷನ್‌ಗೆ ಬೆಳಗ್ಗೆ 04:50 ಗಂಟೆಗೆ ಆಗಮಿಸಿ 04:52 ಗಂಟೆಗೆ ಪ್ರಯಾಣ ಮುಂದುವರಿಸಲಿದೆ.
ಭಾಗಶಃ ರದ್ದಾದ ರೈಲುಗಳ ಪುನಾರಂಭ
ಚೆನ್ನೆ ವಿಭಾಗದಲ್ಲಿ ಸುರಕ್ಷತೆ ಮತ್ತು ನಿರ್ವಹಣಾ ಕಾರ್ಯಗಳಿಗಾಗಿ ಈ ಹಿಂದೆ ಭಾಗಶಃ ರದ್ದುಗೊಳಿಸಲಾಗಿದ್ದ ರೈಲು ಸೇವೆಗಳನ್ನು ಪುನಾರಂಭಿಸುವುದಾಗಿ ದಕ್ಷಿಣ ರೈಲ್ವೆ ವಲಯವು ತಿಳಿಸಿದೆ. ಈ ರೈಲುಗಳು ಈಗ ತಮ್ಮ ಮೂಲ ವೇಳಾಪಟ್ಟಿಯ ಪ್ರಕಾರ ಸಂಚರಿಸಲಿವೆ.
ಪುನಾರಂಭಗೊಂಡ ರೈಲುಗಳ ವೇಳಾಪಟ್ಟಿ, ವಿವರ
ಏಪ್ರಿಲ್ 23 ಮತ್ತು 25 ರಂದು ಹೊರಡುವ ಅಶೋಕಪುರಂ-ಡಾ. ಎಂಜಿಆರ್ ಚೆನೈ ಸೆಂಟ್ರಲ್ ಡೈಲಿ ಎಕ್ಸ್‌ಪ್ರೆಸ್ ರೈಲು (16552) ಕಾಟ್ಪಾಡಿವರೆಗೆ ಮಾತ್ರ ಚಲಿಸಲಿದೆ. ರದ್ದುಪಡಿಸಿದ್ದ ಅದೇ ರೈಲು ಏಪ್ರಿಲ್ 23 ಮತ್ತು 25 ರಂದು ಹೊರಡುವ ರೈಲು (12607) ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ - ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ಈ ಹಿಂದೆ ಡಾ. ಎಂಜಿಆರ್ ಚೆನೈ ಸೆಂಟ್ರಲ್ ಮತ್ತು ಕಾಟ್ಪಾಡಿ ನಡುವೆ ಭಾಗಶಃ ರದ್ದುಗೊಳಿಸಲಾಗಿತ್ತು. ಅದೀಗ ಪುನಃ ಸೇವೆ ಆರಂಭಿಸಿದೆ.












Click it and Unblock the Notifications