ವಿಶ್ವ ಲಿಂಗಾಯತ ಸಮಿತಿಯಿಂದ ಸಿದ್ದರಾಮಯ್ಯಗೆ ಪತ್ರ

ಧಾರವಾಡ, ಮಾರ್ಚ್‌ 15: ನಾಗಮೋಹನ್ ದಾಸ್ ವರದಿಯಂತೆ ಲಿಂಗಾಯತ ಪ್ರತ್ಯೇಕ ಧರ್ಮವೆಂದು ಹಾಗೂ ಅಲ್ಪಸಂಖ್ಯಾತ ಧರ್ಮವೆಂದು ಘೋಷಿಸುವಂತೆ ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು ಎಂದು ವಿಶ್ವ ಲಿಂಗಾಯತ ಸಮಿತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಸಮಿತಿಯು, ನಾಗಮೋಹನ್ ದಾಸ್ ಅವರು ನೀಡಿರುವ ವರದಿಯು ಅಕ್ಷರಶಃ ಸತ್ಯವಾಗಿದ್ದು, ಹಲವು ಅಧ್ಯಯನಗಳ ನಂತರ ವರದಿ ನೀಡಿರುವುದು ಕಾಣುತ್ತಿದೆ, ಕೆಲವು ಹಿರಿಯ ಸಾಹಿತಿಗಳು, ಚಿಂತಕರು, ನ್ಯಾಯವಾದಿಗಳುಲ ಇತಿಹಾಸಜ್ಞರು ಇನ್ನೂ ಹಲವು ಮೇಧಾವಿಗಳು ಒಟ್ಟುಗೂಡಿ ನೀಡಿರುವ ವರದಿಯನ್ನು ಕೆಲವು ಜಾತೀವಾದಿಗಳು ತಮ್ಮ ಲಾಭಕ್ಕಾಗಿ ಏಕಪಕ್ಷೀಯ ವರದಿ ಎನ್ನುತ್ತಿರುವುದು ಹೇಯ ಎಂದು ಅವರು ಹೇಳಿದ್ದಾರೆ.

ಲಿಂಗಾಯತ ಸ್ವತಂತ್ರ ಧರ್ಮವೆಂದು ಬಸವಣ್ಣನವರೇ ಧರ್ಮ ಸ್ಥಾಪಕರೆಂದು 1966 ರಲ್ಲಿ ಭಾರತದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ಶ್ರೀ ಪಿ ಬಿ ಗಜೇಂದ್ರಗಡಕರ ಅವರು ತಮ್ಮ ನಿರ್ಣಯದಲ್ಲಿ ಹೇಳಿದ್ದು ಕೂಡಾ ಇದೀಗ ನೀಡಿರುವ ವರದಿಗೆ ಪೂರಕವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

Vishwa Lingayata sabha writes letter to Siddaramaiah

ಚುನಾವಣಾ ನೀತಿ ಜಾರಿಯಾಗುವ ಮುಂಚೆ ಸಂಪುಟ ಸಭೆಯಲ್ಲಿ ವರದಿಗೆ ಒಪ್ಪಿಗೆ ನೀಡಿ, ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕು ಎಂದು ವಿಶ್ವ ಲಿಂಗಾಯತ ಸಮಿತಿಯು ಒತ್ತಾಯಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+