ವೈರಲ್ ವಿಡಿಯೋ: ಈ ಮಗುವಿನ ಕಣ್ಣೀರು ಶಿಕ್ಷಣ ವ್ಯವಸ್ಥೆಗೆ ಛಾಟಿಯೇಟು!
Recommended Video

ಬೆಂಗಳೂರು, ಜೂನ್ 18: ಯಾವಾಗ ನೋಡಿದ್ರೂ ಓದು, ಬರಿ, ಹೋಂವರ್ಕ್ ಮಾಡು.... ನಾವು ಆಟ ಆಡೊದ್ಯಾವಾಗ? ಎಂದು ಪುಟ್ಟ ಮಗುವೊಂದು ಮುಗ್ಧವಾಗಿ ಪ್ರಶ್ನಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
'ಬೆಳಗ್ಗೆ ಏಳು ಡಮ ಡಮ ಅಂತ ರೆಡಿ ಆಗು, ಶಾಲೆಗೆ ಹೋಗು, ಪಾಠ ಕೇಳು, ಮನೆಗೆ ಬಾ, ಅಷ್ಟರಲ್ಲಿ ರಾತ್ರಿಯಾಗುತ್ತೆ, ಮತ್ತೆ ಓದು, ಬರಿ, ಕಂಪ್ಯೂಟರ್ ನೋಡು, ಮಲ್ಕೋ... ನಂಗೆ ಸಾಕಾಗಿದೆ' ಎನ್ನುತ್ತ ಬಿಕ್ಕುತ್ತಿರುವ ಮಗುವಿನ ಈ ವಿಡಿಯೋ ಇಂದಿನ ಶಿಕ್ಷಣ ವ್ಯವಸ್ಥೆಗೆ ಕನ್ನಡಿಯೂ ಹೌದು!
ಮಣಬಾರದ ಬ್ಯಾಗು ಹೊತ್ತು ಶಾಲೆಗೆ ತೆರಳುವ ಪಟ್ಟ ಪುಟ್ಟ ಮಕ್ಕಳನ್ನು ಕಂಡರೆ ಒಮ್ಮೆ ಕರುಣೆ ಉಕ್ಕುತ್ತದೆ. ಆಟವಾಡುತ್ತ, ಕುಣಿದು ಕುಪ್ಪಳಿಸುತ್ತ ಬಾಲ್ಯ ಎಂಬ ಸುವರ್ಣ ಯುಗದ ಸವಿ ಸವಿಯಬೇಕಾದ ಮಕ್ಕಳು ಹೋಂ ವರ್ಕಿನ ಚಿಂತೆಯಲ್ಲೇ ದಿನದೂಡುವಾಗ ಅಯ್ಯೋ ಅನ್ನಿಸುತ್ತೆ!

ಆದರೆ ಇಂದಿನ ಶಿಕ್ಷಣ ವ್ಯವಸ್ಥೆ ಮಕ್ಕಳ ಸರ್ವತೋಮುಖ ಬೆಳವಣಿಗೆಗಿಂತ ಹೆಚ್ಚಾಗಿ ಕೇವಲ 'ಅಂಕ'ಗಳಿಗಷ್ಟೇ ಅವರನ್ನು ಸೀಮಿತಗೊಳಿಸುತ್ತಿದೆ ಎಂಬುದನ್ನು ಈ ವಿಡಿಯೋ ಮೂಲಕ ಮುಗ್ಧ ಮಗು ತೋರಿಸಿಕೊಟ್ಟಿದೆ! ಇಂದಿನ ಶಿಕ್ಷಣ ವ್ಯವಸ್ಥೆ, ಅದನ್ನು ಪೋಷಿಸುತ್ತಿರುವ ಶಿಕ್ಷಕರು, ತಂದೆ-ತಾಯಿಗಳಿಗೆ ಈ ಮುದ್ದು ಪುಟಾಣಿಯ ಅಳು ಒಂದು ಎಚ್ಚರಿಕೆಯೂ ಹೌದು.












Click it and Unblock the Notifications