ಧಾರವಾಡದ ಕರಡಿಗುಡ್ಡದಲ್ಲಿ ಸಿಎಂ ಬೊಮ್ಮಾಯಿಗೆ ಗ್ರಾಮಸ್ಥರ ತರಾಟೆ
ಧಾರವಾಡ, ಏಪ್ರಿಲ್ 26: ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮೃತ್ ದೇಸಾಯಿ ಪರ ಮತಯಾಚನೆಗೆ ಹೋಗಿದ್ದ ಸಿಎಂ ಬಸವರಾಜ ಬೊಮ್ಮಾಯಿಗೆ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ.
ಕರಡಿಗುಡ್ಡ ಗ್ರಾಮದಲ್ಲಿ ಪ್ರಚಾರಕ್ಕೆ ತೆರಳಿರುವ ಸಿಎಂ @BSBommai ಹಾಗೂ ಶಾಸಕ ಅಮೃತ ದೇಸಾಯಿ ಅವರಿಗೆ ಯುವಕರಿಂದ ಛೀಮಾರಿ.
— IYC Karnataka (@IYCKarnataka) April 26, 2023
ಆಡಳಿತಾವಧಿಯಲ್ಲಿ @BJP4Karnataka ಶಾಸಕರು ಹಾಗೂ ಸಚಿವರು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿಲ್ಲ.
ಯುವ ಜನತಗೆ ಉದ್ಯೋಗ ಸೃಷ್ಟಿಸಿಲ್ಲ. pic.twitter.com/9upWZw3A42
ಧಾರವಾಡ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅಮೃತ್ ದೇಸಾಯಿ ಅವರು ಸ್ಪರ್ಧೆ ಮಾಡುತ್ತಿದ್ದಾರೆ. ಇಲ್ಲಿ ಕಾಂಗ್ರೆಸ್‌ನಿಂದ ವಿನಯ್ ಕುಲಕರ್ಣಿಗೆ ಟಿಕೆಟ್ ನೀಡಲಾಗಿದೆ. ಅಮೃತ್ ದೇಸಾಯಿ ಪರ ಬುಧವಾರ ಪ್ರಚಾರ ಕೈಗೊಂಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕರಡಿಗುಡ್ಡ ಗ್ರಾಮದಲ್ಲಿ ಯುವಕರು ತರಾಟೆಗೆ ತೆಗೆದುಕೊಂಡಿದ್ದು ಬೊಮ್ಮಾಯಿ ಅವರು ಪ್ರತಿಭಟನೆಯ ಬಿಸಿ ಅನುಭವಿಸಬೇಕಾಯಿತು.

ಕರಡಿಗುಡ್ಡದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನರೇಂದ್ರ ಮೋದಿ ಬಗ್ಗೆ ಮಾತನಾಡುತ್ತಿದಂತೆ ಯುವಕನೋರ್ವ ಮಾತಿನ ಮಧ್ಯೆ ಇಳಿದು ನೀವು ನಮ್ಮ ಊರಿಗೆ ರಸ್ತೆ ಮಾಡಿಸಿಲ್ಲ ಎಂದು ಹೇಳಿದನು. ಆಗ ಬೊಮ್ಮಾಯಿ ಅವರು ಇಲ್ಲಿ ಯಾರು ನಿನ್ನಂಗೆ ಕೇಳುತ್ತಿಲ್ಲ. ನೀನೊಬ್ಬನೇ ಏಕೆ ಕೇಳುತ್ತೀಯಾ ಸುಮ್ಮನಿರು ಎಂದರು. ಅದಕ್ಕೆ ಯುವಕ ಬೇಸರಗೊಂಡು ಹಿಂಗೆ ಅಂದ್ರೆ ಹೆಂಗ್ರಿ ಎಂದು ಅಸಮಾಧಾನ ವ್ಯಕ್ಯಪಡಿಸಿದನು.
ಇದೇ ಮಾದರಿಯಲ್ಲಿ ಇತ್ತೀಚೆಗೆ ವರುಣಾದಲ್ಲೂ ವಿ ಸೋಮಣ್ಣ ಅವರ ವಿರುದ್ಧ ಎರಡು ಹಳ್ಳಿಗಳಲ್ಲಿ ಯುವಕರು ಮುಗಿಬಿದ್ದಿದ್ದರು, ನೀವು ನಮ್ಮೂರಿಗೆ ಕ್ಷೇತ್ರಕ್ಕೆ ಏನು ಮಾಡಿಲ್ಲ. ಈಗ ಏಕೆ ಮತ ಕೇಳಲು ಬಂದಿದ್ದೀರಿ ಎಂದು ಹೇಳಿದ್ದರು. ಮಾತ್ರವಲ್ಲದೆ ನಿಮ್ಮ ಬಿಜೆಪಿಯವರು ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಹೇಳಿದ್ದಾರೆ. ಈಗ ಇಲ್ಲಿ ಏಕೆ ಬಂದಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದರು.
ಇತ್ತೀಚೆಗೆ ಕಿತ್ತೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮಹಾಂತೇಶ ದೊಡ್ಡಗೌಡರ್ ವಿರುದ್ಧ ಚಿಕ್ಕ ಬಾಗೇವಾಡಿ ಗ್ರಾಮದ ಯುವಕನೋರ್ವ ನಮ್ಮ ಊರಿನ ರಸ್ತೆ ದುರಸ್ತಿಯಾಗಿಲ್ಲ, ನಮ್ಮೂರಿನ ದೇಗುಲದ ಕೆಲಸ ಅರ್ಧಕ್ಕೆ ನಿಂತಿದೆ. ಒಳಚರಂಡಿ ಕೆಲಸಗಳು ಮುಗಿದಿಲ್ಲ. ಹೀಗಿದ್ದು ಯಾವ ಭರವಸೆ ಮೇಲೆ ಇಲ್ಲಿಗೆ ಮತ ಕೇಳಲು ಬಂದಿದ್ದೀರಿ ಎಂದು ಕೇಳಿದ್ದರು.












Click it and Unblock the Notifications