ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Village Accountant; ಗ್ರಾಮಲೆಕ್ಕಿಗರ ಕರ್ತವ್ಯ ಮತ್ತು ಜವಾಬ್ದಾರಿಗಳು

|
Google Oneindia Kannada News

ಬೆಂಗಳೂರು, ನವೆಂಬರ್ 10; ಗ್ರಾಮ ಮಟ್ಟದಲ್ಲಿ ಕಂದಾಯ ಇಲಾಖೆಯ ಅಧಿಕಾರಿ ಎಂದರೆ ಅದು ಗ್ರಾಮಲೆಕ್ಕಿಗರು (village accountant). ಕರ್ನಾಟಕ ಸರ್ಕಾರ ಗ್ರಾಮಲೆಕ್ಕಿಗರ ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿ ಮಾಡಲು ಚಿಂತನೆ ನಡೆಸುತ್ತಿದೆ. ಈ ಕುರಿತು ವರದಿ ನೀಡಲು ಸರ್ಕಾರ ಸಮಿತಿ ನೇಮಿಸಿದೆ.

ಪ್ರಸ್ತುತ ಗ್ರಾಮಲೆಕ್ಕಿಗರ ಹುದ್ದೆಯನ್ನು ದ್ವೀತಿಯ ಪಿಯುಸಿ ಪರೀಕ್ಷೆ ಅಥವಾ CBSE ಅಥವಾ ICSE ನಡೆಸುವ 12ನೇ ತರಗತಿ ಪರೀಕ್ಷೆಯಲ್ಲಿ ಪಡೆದ ಗರಿಷ್ಕ ಅಂಕಗಳ (On merit)ಆಧಾರದ ಮೇಲೆ, ಆಯಾಯ ಮೀಸಲಾತಿ ಪ್ರವರ್ಗಕ್ಕೆ ಸಂಬಂಧಿಸಿದಂತೆ ಆಯ್ಕೆ ಮಾಡಲಾಗುತ್ತಿದೆ.

Village Accountant; ಕಂದಾಯ ಇಲಾಖೆಯ ಗ್ರಾಮಲೆಕ್ಕಿಗರ ಕಾರ್ಯಗಳುVillage Accountant; ಕಂದಾಯ ಇಲಾಖೆಯ ಗ್ರಾಮಲೆಕ್ಕಿಗರ ಕಾರ್ಯಗಳು

ಕೋವಿಡ್ ಸಾಂಕ್ರಾಮಿಕದ ಪರಿಸ್ಥಿತಿಯಲ್ಲಿ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಪಡೆದ ಶೇಕಡ 50ರಷ್ಟು ಹಾಗೂ ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಪಡೆದ ಶೇಕಡ 50ರಷ್ಟು ಅಂಕಗಳನ್ನು ಪರಿಗಣಿಸಿ, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಂಕಗಳನ್ನು ನೀಡಲಾಗಿತ್ತು. ಇದೇ ಕಾರಣಕ್ಕೆ ದ್ವಿತೀಯ ಪರೀಕ್ಷೆಯ ಅಂಕಗಳ ಆಧಾರದ ಮೇಲೆ ನೇಮಕಾತಿ ಬೇಡ ಎಂದು ನಿರ್ಧರಿಸಲಾಗಿದೆ.

ಗ್ರಾಮ ಲೆಕ್ಕಿಗರ ನೇಮಕಾತಿಯಲ್ಲಿ ಬದಲಾವಣೆ, ಸ್ಪರ್ಧಾತ್ಮಕ ಪರೀಕ್ಷೆ?ಗ್ರಾಮ ಲೆಕ್ಕಿಗರ ನೇಮಕಾತಿಯಲ್ಲಿ ಬದಲಾವಣೆ, ಸ್ಪರ್ಧಾತ್ಮಕ ಪರೀಕ್ಷೆ?

ಗ್ರಾಮಲೆಕ್ಕಿಗರ ಕಾರ್ಯಗಳು ಏನು? ಎಂಬುದು ಹಲವರ ಪ್ರಶ್ನೆಯಾಗಿದೆ. ಪಂಚಾಯಿತಿ ಮಟ್ಟದಲ್ಲಿ ಲಭ್ಯವಿರುವ ಗ್ರಾಮಲೆಕ್ಕಿಗರನ್ನು ಸದ್ಯ ಜಿಲ್ಲಾಧಿಕಾರಿಗಳ ನೇತೃತ್ವದ ಸಮಿತಿ ಆಯ್ಕೆ ಮಾಡುತ್ತದೆ. ಗ್ರಾಮಲೆಕ್ಕಿಗರ ಜವಾಬ್ದಾರಿ ಮತ್ತು ಕರ್ತವ್ಯಗಳ ಮಾಹಿತಿ ಇಲ್ಲಿದೆ....

7th Pay Commission: 7ನೇ ವೇತನ ಆಯೋಗ ರಚನೆ; ಸರ್ಕಾರಿ ನೌಕರರ ನಿರೀಕ್ಷೆಗಳು 7th Pay Commission: 7ನೇ ವೇತನ ಆಯೋಗ ರಚನೆ; ಸರ್ಕಾರಿ ನೌಕರರ ನಿರೀಕ್ಷೆಗಳು

ಲೆಕ್ಕಪತ್ರಗಳು, ಇತರ ದಾಖಲೆ

ಲೆಕ್ಕಪತ್ರಗಳು, ಇತರ ದಾಖಲೆ

ಗ್ರಾಮಲೆಕ್ಕಿಗರನ್ನು ಒಂದು ಹಳ್ಳಿಗೆ ಅಥವ ಹಳ್ಳಿಗಳ ಗುಂಪಿಗೆ ನೇಮಕ ಮಾಡಲಾಗುತ್ತದೆ. ಅವರು ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಅಡಿಯಲ್ಲಿ ಅಥವ ಯಾವುದೇ ಕಾನೂನಿನ ಅಡಿಯಲ್ಲಿ ನಿಗದಿಪಡಿಸಿದ ಕರ್ತವ್ಯಗಳನ್ನು ಜಾರಿಯಲ್ಲಿರುವ ಇತರೆ ಕಾನೂನಿನ ಅನ್ವಯ ನಿರ್ವಹಣೆ ಮಾಡುತ್ತಾರೆ.

ಸರ್ಕಾರ ನಿಗದಿ ಮಾಡಿರುವ ಎಲ್ಲಾ ವಹಿಗಳು, ಲೆಕ್ಕಪತ್ರಗಳು, ಇತರೆ ದಾಖಲೆಗಳನ್ನು ಅವರು ನಿರ್ವಹಣೆ ಮಾಡಬೇಕು. ಕಂದಾಯ ಇಲಾಖೆಯ ತಾಲೂಕಿನ ಉನ್ನತ ಅಧಿಕಾರಿಗಳು ಅಥವ ಜಿಲ್ಲೆಯ ಉನ್ನತ ಅಧಿಕಾರಿಗಳು ಕೇಳಿದ ಸಂದರ್ಭದಲ್ಲಿ ಗ್ರಾಮದ ಅಭ್ಯುದಯಕ್ಕಾಗಿ ಸಂಬಂಧಿಸಿದ ದಾಖಲೆಗಳನ್ನು ಕೇಂದ್ರ ಅಥವ ರಾಜ್ಯ ಸರ್ಕಾರದ ಉಪಯೋಗಕ್ಕೆ ನಿರ್ವಹಿಸಬೇಕಾಗುತ್ತದೆ.

ವರದಿ ಮತ್ತು ನೋಟಿಸ್ ತಲುಪಿಸುವುದು

ವರದಿ ಮತ್ತು ನೋಟಿಸ್ ತಲುಪಿಸುವುದು

ಗ್ರಾಮಲೆಕ್ಕಿಗ ಕಂದಾಯ ಇಲಾಖೆಯ ಕಾರ್ಯಕ್ರಮಗಳನ್ನು ಗ್ರಾಮ ಮಟ್ಟದಲ್ಲಿ ತಲುಪಿಸುವ ಕಾರ್ಯವನ್ನು ಮಾಡುತ್ತಾರೆ. ಸರ್ಕಾರದ ನೋಟಿಸ್, ವರದಿ ಇತ್ಯಾದಿಗಳನ್ನು ಸಾರ್ವಜನಿಕರಿಗೆ ಜಾರಿ ಮಾಡುವುದು ಸಹ ಇವರ ಕರ್ತವ್ಯವಾಗಿರುತ್ತದೆ.

ಕರ್ನಾಟಕ ಭೂ ಕಂದಾಯ ನಿಯಮಗಳು 1966 ನಿಯಮ 28ರ ಅಡಿ ವ್ಯವಸ್ಥಾಪನಾ ಅಧಿಕಾರಿಯವರು ಗ್ರಾಮ ಲೆಕ್ಕಾಧಿಕಾರಿಗಳಿಂದ ಪ್ರಧಾನ ಬೆಳೆಗಳನ್ನು ಪ್ರತಿನಿಧಿಸುವ ಹಳ್ಳಿಗಳಿಂದ ಅಗತ್ಯ ಮಾಹಿತಿಯನ್ನು ಸಂಗ್ರಹಿಸಬೇಕು.

ಭೂ ದಾಖಲೆಗಳನ್ನು ಸಿದ್ಧಪಡಿಸಬೇಕು

ಭೂ ದಾಖಲೆಗಳನ್ನು ಸಿದ್ಧಪಡಿಸಬೇಕು

ನಿಯಮ 40ರ ಅಡಿ ಗ್ರಾಮಲೆಕ್ಕಿಗರು ನಮೂನೆ 16ರಲ್ಲಿ ಪ್ರಾಥಮಿಕ ಭೂ ದಾಖಲೆಗಳನ್ನು ಸಿದ್ಧಪಡಿಸಿ ಮತ್ತು ಕೇಳಿದಾಗ ಅದನ್ನು ಸಲ್ಲಿಸಬೇಕು ಹಾಗೂ ಪೂರ್ಣಗೊಂಡ ವರದಿಯನ್ನು ಕಂದಾಯ ನಿರೀಕ್ಷಕರು ಅಥವ ಇತರ ಅಧಿಕಾರಿಗೆ ಕಳಿಸಬೇಕು.

ಚಾವಡಿಯಲ್ಲಿ ಪ್ರಾಥಮಿಕ ದಾಖಲೆಗಳನ್ನು ಪ್ರಚುರಪಡಿಸಿ ಕಂದಾಯ ನಿರೀಕ್ಷಕರು/ ಇತರ ಅಧಿಕಾರಿಯವರ ಭೇಟಿಯ ದಿನಾಂಕವನ್ನು ತಿಳಿಸಿ ನೋಟಿಸ್ ಪ್ರಚುರಪಡಿಸಬೇಕು. ನಮೂದುಗಳನ್ನು ಪರಿಶೀಲಿಸಲು ಮತ್ತು ವಿಚಾರಣೆಗೆ ಹಾಜರಾಗಲು ಭೂ ಮಾಲೀಕರನ್ನು ಆಹ್ವಾನಿಸಬೇಕು.

ತಹಶೀಲ್ದಾರ್‌ಗೆ ಸಲ್ಲಿಕೆ ಮಾಡಬೇಕು

ತಹಶೀಲ್ದಾರ್‌ಗೆ ಸಲ್ಲಿಕೆ ಮಾಡಬೇಕು

ನಿಯಮ 61ರ ಅಡಿ ಗ್ರಾಮಲೆಕ್ಕಿಗರು ಹಕ್ಕುಗಳ ದಾಖಲೆಯನ್ನು ಸ್ವೀಕರಿಸಿದ ಕೂಡಲೇ ಹಕ್ಕುಗಳ ಸಂಬಂಧಿತ ಪ್ರಾಥಮಿಕ ದಾಖಲೆಯನ್ನು ತಹಶೀಲ್ದಾರ್‌ಗೆ ಕಳುಹಿಸಬೇಕು.

ನಿಯಮ 62ರ ಅಡಿ ತಹಶೀಲ್ದಾರ್ ಅಥವ ಅಧಿಸೂಚನೆಯ ಮೂಲಕ ಸರ್ಕಾರದಿಂದ ಅಧಿಕಾರ ಪಡೆದ ಯಾವುದೇ ಅಧಿಕಾರಿ, ಭೂಮಿಯಲ್ಲಿ ಹಕ್ಕುಗಳನ್ನು ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಮಾಹಿತಿ ಪಡೆದಾಗ ನಮೂನೆ 19-ಎಯಲ್ಲಿ ನಿರ್ದಿಷ್ಟಪಡಿಸಿದಂತೆ ತಂತ್ರಾಶ ಬಳಸಿ ಉತ್ತರಾಧಿಕಾರ, ವಾರಸುದಾರಿಕೆ ಅಥವ ಆನುವಂಶಿಕತೆ ಮತ್ತು ಇತರೆ ಸಂದರ್ಭಗಳಲ್ಲಿ ನಮೂನೆ-20ಎ ನೋಟಿಸ್‌ಗಳನ್ನು ಹೊರಡಿಸಬೇಕು.

English summary
Village Accountant (VA) posts will come under Karnataka revenue department. Here are the list of role and responsibilities of village accountant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X