Vijayapura: ವಿಜಯಪುರದಲ್ಲಿ ಭೂಕಂಪ! 3.5 ತೀವ್ರತೆಯಲ್ಲಿ ಭೂಮಿ ಕಂಪನ, ಜನರಲ್ಲಿ ಆತಂಕ

ವಿಜಯಪುರ: ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲಿ ಇಂದು ಮಂಗಳವಾರ (ಸೆಪ್ಟೆಂಬರ್ 29) ರಂದು ಮಧ್ಯಾಹ್ನ 12.26 ಗಂಟೆಗೆ ಭೂಕಂಪ ಉಂಟಾಗಿದೆ. 3.5 ತೀವ್ರತೆಯಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ವರದಿಯಲ್ಲಿ ತಿಳಿಸಲಾಗಿದೆ.

ಈ ಭೂಕಂಪದ ಕೇಂದ್ರ ಬಿಂದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ದಿಂಡವಾರ ಗ್ರಾಮ ಪಂಚಾಯತಿಯ ನೈಋತ್ಯ ದಿಕ್ಕಿಗೆ ಸುಮಾರು 1.1 ಕಿ.ಮೀ ದೂರದಲ್ಲಿ, 10 ಕಿ.ಮೀ ಆಳದಲ್ಲಿ ಪತ್ತೆಯಾಗಿದೆ ಎಂದು ಕೇಂದ್ರ ತಿಳಿಸಿದೆ. ಇನ್ನೂ ಇಂಗಳೇಶ್ವರದಿಂದ 3.0 ಕಿ.ಮೀ, ರಬಿನಾಳ ಗ್ರಾಮದಿಂದ 5.3 ಕಿ.ಮೀ ಹಾಗೂ ವಿಜಯಪುರ ನಗರದಿಂದ 40.0 ಕಿ.ಮೀ ದೂರದಲ್ಲಿ ಭೂಕಂಪನದ ಅನುಭವವಾಗಿದೆ.

Vijayapura Earthquake

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ (KSNDMC) ಪ್ರಕಾರ, ರಿಕ್ಟರ್ ಮಾಪಕದಲ್ಲಿ ಇಂದು ಮಧ್ಯಾಹ್ನ 12:26:12ಕ್ಕೆ ಸರಿಯಾಗಿ ತೀವ್ರತೆ 3.5 ರಷ್ಟು ದಾಖಲಾಗಿದೆ. ಇದು ಸಾಧಾರಣ ಭೂಕಂಪನವಾಗಿದೆ ಎಂದು ಮಾಹಿತಿ ನೀಡಿದೆ.

ಆತಂಕ ಪಡುವ ಅಗತ್ಯವಿಲ್ಲ: KSNDMC ನಿರ್ದೇಶಕ

ಭೂಕಂಪನದಿಂದ ಜನರು ಆತಂಕಗೊಂಡಿದ್ದಾರೆ. ಆದರೆ ಭೂಮಿ ಕಂಪಿಸಿದ ತೀವ್ರತೆಯು ಅತ್ಯಂತ ಕಡಿಮೆ ಇದೆ. ಕೇಂದ್ರ ಬಿಂದುವಿನಿಂದ ಸುತ್ತ ಮುತ್ತಲಿನ 50-60 ಕಿ.ಮೀ ವ್ಯಾಪ್ತಿಯ ಪ್ರದೇಶದಲ್ಲಿ ಸಣ್ಣ ಪ್ರಮಾಣದ ಕಂಪನ ಅನುಭವ ಆಗಿರಬಹುದು. ಇಷ್ಟು ಪ್ರಮಾಣದ ಕಂಪನಿಂದ ಸಾರ್ವಜನಿಕರಿಗೆ ಅಥವಾ ಕಟ್ಟಡಗಳಿಗೆ ಯಾವುದೇ ರೀತಿಯ ಹಾನಿ ಆಗುವುದಿಲ್ಲ. ಈ ಪ್ರದೇಶವು 'ಸೆಸ್ಮಿಕ್ ಝೋನ್ III' ವ್ಯಾಪ್ತಿಯಲ್ಲಿದ್ದು, ಸಾರ್ವಜನಿಕರು ಯಾವುದೇ ಯಾವುದೇ ಆತಂಕಕ್ಕೆ ಒಳಗಾಗಬೇಕಿಲ್ಲ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕರು ವರದಿಯಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+