ಕೊಲ್ಲೂರು ಮೂಕಾಂಬಿಕಾ ಪ್ರಸಾದವನ್ನು ಜೈಲಿಗೆ ತಂದು ದರ್ಶನ್ ಗೆ ನೀಡಿದ ವಿಜಯಲಕ್ಷ್ಮೀ

ಬೆಂಗಳೂರು, ಜುಲೈ 29: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ ನಲ್ಲಿ ನಟ ದರ್ಶನ್‌ ಜೈಲು ಸೇರಿದ್ದು, ಪತಿ ದರ್ಶನ್‌ ಬಿಡುಗಡೆಗಾಗಿ ವಿಜಯಲಕ್ಷ್ಮೀ ಅವರು ಕಾನೂನು ಹೋರಾಟದ ಜೊತೆಗೆ ದೇವರ ಮೊರೆ ಹೋಗಿದ್ದಾರೆ.

ನಟ ದರ್ಶನ್‌ ಜೈಲು ಸೇರಿ ಬರೋಬ್ಬರಿ 35 ದಿನಗಳೆ ಕಳೆದಿದ್ದು, ದರ್ಶನ್‌ ಗಾಗಿ ವಿಜಯಲಕ್ಷ್ಮಿ ಅವರು ಮೂಕಾಂಬಿಕಾ ದೇವಿಯ ಎದುರು ವಿಶೇಷ ಪೂಜೆ ಮಾಡಿಸಿದ್ದರು. ಅಲ್ಲದೆ ನವ ಚಂಡಿಕಾ ಹೋಮವನ್ನು ಕೂಡ ಮಾಡಿಸಲಾಗಿತ್ತು. ಈಗ ವಿಜಯಲಕ್ಷ್ಮೀ ಬೆಂಗಳೂರಿಗೆ ಮರಳಿದ್ದಾರೆ. ಕೊಲ್ಲೂರು ಮೂಕಾಂಬಿಕಾ ಪ್ರಸಾದವನ್ನು ವಿಜಯಲಕ್ಷ್ಮೀ ಜೈಲಿಗೆ ತಂದು ದರ್ಶನ್ ಅವರಿಗೆ ನೀಡಿದ್ದಾರೆ.

Vijayalakshmi Darshan Visits Jail And Gave Prasad to Husband

ದರ್ಶನ್‌ ಜೈಲು ಸೇರಿದ ಬಳಿಕ ವಿಜಯಲಕ್ಷ್ಮೀ ಆರನೇ ಬಾರಿಗೆ ಪತಿಯ ಭೇಟಿಗಾಗಿ ಬಂದಿದ್ದಾರೆ. ಮೊನ್ನೆಯಷ್ಟೇ ದರ್ಶನ್‌ ಸಹೋದರ ಮೈಸೂರು ಚಾಮುಡೇಶ್ವರಿ ವಿಶೇಷ ಪೂಜೆ ಸಲ್ಲಿಸಿದ್ರೆ, ಇತ್ತ ವಿಜಯಲಕ್ಷ್ಮೀ ಅವರು ಇತ್ತೀಚೆಗೆ ಕೊಲ್ಲೂರಿಗೆ ತೆರಳಿದ್ದರು. ಮೂಕಾಂಬಿಕಾ ದೇವಿಯ ಎದುರು ವಿಶೇಷ ಪೂಜೆಯನ್ನು ಅವರು ಮಾಡಿಸಿದ್ದರು. ಅಲ್ಲದೆ ನವ ಚಂಡಿಕಾ ಹೋಮವನ್ನು ಕೂಡ ಮಾಡಿಸಲಾಗಿತ್ತು. ಕೊಲ್ಲೂರು ಮೂಕಾಂಬಿಕಾ ದೇವಿ ಪ್ರಸಾದವನ್ನ ಪತಿಗಾಗಿ ತಂದು ವಿಜಯಲಕ್ಷ್ಮೀ ಅವರು ತಂದು ನೀಡಿದ್ದಾರೆ.

ಇನ್ನೂ ನಟ ದರ್ಶನ್ ಅವರು ಹೊರಗೆ ಬರಲು ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಕೇಸ್ ತುಂಬಾನೇ ಗಂಭೀರ ಆಗಿದೆ. ದರ್ಶನ್‌ ಸಹ ಜೈಲಿನಿಂದಲೇ ದೊಡ್ಡ ದೊಡ್ಡ ನಾಯಕರನ್ನ ದೂರವಾಣಿ ಕರೆ ಮೂಲಕ ಸಂಪರ್ಕಿಸುತ್ತಿದ್ದಾರೆ ಎನ್ನಲಾಗಿದೆ. ಇತ್ತ ವಿಜಯಲಕ್ಷ್ಮೀ ಹಾಗೂ ದರ್ಶನ್‌ ಸಹೋದರ ಕಾನೂನು ಹೋರಾಟ ಮೂಲಕ ಹಲವು ನಾಯಕರ ಜೊತೆಗೂ ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಇನ್ನು ರೇಣುಕಾಸ್ವಾಮಿ ಕೊಲೆ ಕೇಸ್‌ ನಲ್ಲಿ ಚಾರ್ಜ್​ಶೀಟ್ ಸಲ್ಲಿಕೆ ಆಗಿಲ್ಲ. ಈ ಎಲ್ಲಾ ಕಾರಣದಿಂದ ಅವರಿಗೆ ಜಾಮೀನಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಶೀಘ್ರವೇ ಪೊಲೀಸರು ಕೋರ್ಟ್​ ಎದುರು ಚಾರ್ಜ್​ಶೀಟ್ ಸಲ್ಲಿಕೆ ಮಾಡಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+