Spandana: ವಿಧಾನಸಭೆ ಚುನಾವಣೆಯಲ್ಲಿ ಸಹೋದರನ ಪರ ಪ್ರಚಾರ ಮಾಡಿದ್ದ ವಿಜಯ ರಾಘವೇಂದ್ರ ಪತ್ನಿ ಸ್ಪಂದನಾ: ಪಕ್ಷ, ಕ್ಷೇತ್ರ ತಿಳಿಯಿರಿ

ಬೆಂಗಳೂರು, ಆಗಸ್ಟ್‌ 07: ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರು ಭಾನುವಾರ ರಾತ್ರಿ ನಿಧನರಾಗಿದ್ದಾರೆ. ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ವಿಹಾರಕ್ಕೆ ತೆರಳುತ್ತಿದ್ದಾರೆ ಅವರಿಗೆ ಹೃದಯಾಘಾತವಾಗಿದೆ. ಸ್ಪಂದನಾರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದೆ. ಅವರು ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಥೈಲ್ಯಾಂಡ್‌ನಲ್ಲಿ ಅಂತಿಮ ವಿಧಿವಿಧಾನಗಳು ಮುಗಿದ ನಂತರ ಸ್ಪಂದನಾ ಅವರ ಮೃತ ದೇಹವನ್ನು ಬುಧವಾರ ಬೆಂಗಳೂರಿಗೆ ತರಲಾಗುವುದು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

Vijay Raghavendras wife Spandana campaigned for her brother in the Karnataka Assembly elections

ಸ್ಪಂದನಾರ ರಾಜಕೀಯದ ನಂಟು

ನಿವೃತ್ತ ಪೊಲೀಸ್ ಅಧಿಕಾರಿ ಬಿಕೆ ಶಿವರಾಮ್‌ ಅವರ ಮಗಳು ಸ್ಪಂದನಾ ಬೆಂಗಳೂರಿನಲ್ಲಿ ಹುಟ್ಟಿ ಬೆಳೆದಿದ್ದಾರೆ. ಅವರ ತಂದೆ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನವರು. ಶಿವರಾಮ್‌ ಅವರು ಕರ್ನಾಟಕದ ಖ್ಯಾತ ಪೊಲೀಸ್‌ ಅಧಿಕಾರಿಗಳಲ್ಲಿ ಒಬ್ಬರಾಗಿದ್ದಾರೆ. ಬಿಕೆ ಶಿವರಾಮ್‌ ಅವರು ಕಾಂಗ್ರೆಸ್‌ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಬಿಕೆ ಹರಿಪ್ರಸಾದ್‌ ಅವರ ಕಿರಿಯ ಸಹೋದರ.

ಸ್ಪಂದನಾ ಸಹೋದರ ಹಾಗೂ ಬಿಕೆ ಶಿವರಾಮ್‌ ಅವರ ಪುತ್ರ ರಕ್ಷಿತ್ ಶಿವರಾಮ್ ಅವರು ಕಾಂಗ್ರೆಸ್ ಯುವ ಮುಖಂಡರಾಗಿದ್ದಾರೆ. ಅವರಿಗೆ 39 ವರ್ಷ ವಯಸ್ಸಾಗಿದ್ದು, ಪ್ರಸ್ತುತ ಬೆಳ್ತಂಗಡಿಯಲ್ಲಿ ವಾಸಿಸುತ್ತಿದ್ದಾರೆ.

ರಾಜಕೀಯದಲ್ಲಿ ಸ್ಪಂದನಾ ಅವರು ಅಷ್ಟೇನೂ ಸಕ್ರಿಯವಾಗಿಲ್ಲ. ಆದರೆ, 2023 ರ ಕರ್ನಾಟಕ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಅವರು ಸಹೋದರ ರಕ್ಷಿತ್‌ ಶಿವರಾಮ್ ಪರವಾಗಿ ಪ್ರಚಾರ ಮಾಡಿದರು. ರಕ್ಷಿತ್‌ ಅವರು ಬೆಳ್ತಂಗಡಿಯಿಂದ ಸ್ಪರ್ಧಿಸಿದ್ದರು. ಆದರೆ, ಭಾರತೀಯ ಜನತಾ ಪಕ್ಷದ (ಬಿಜೆಪಿ) ಹರೀಶ್ ಪೂಂಜಾ ವಿರುದ್ಧ 18,216 ಮತಗಳಿಂದ ಸೋತರು.

Vijay Raghavendras wife Spandana campaigned for her brother in the Karnataka Assembly elections

ಈ ವರ್ಷದ ಮೇ ತಿಂಗಳಲ್ಲಿ ನಡೆದ ವಿಧಾನಸಭಾ ಚುನಾವಣೆಗೂ ಮುನ್ನ ಬೆಳ್ತಂಗಡಿಯ ಕುತ್ಲೂರು ಗ್ರಾಮ ಸೇರಿದಂತೆ ಹಲವು ಹಳ್ಳಿಗಳಲ್ಲಿ ಸ್ಪಂದನಾ ಅವರು ಪ್ರಚಾರ ನಡೆಸಿದ್ದರು.

ಸ್ಪಂದನಾ ಅವರ ತಂದೆ ಬಿಕೆ ಶಿವರಾಮ್‌ ಅವರು ರಾಜಕೀಯಕ್ಕೆ ಪ್ರವೇಶಿಸಲು 2007 ರಲ್ಲಿ ಸೇವೆಯಿಂದ ಸ್ವಯಂ ನಿವೃತ್ತಿ ಘೋಷಿಸಿದರು. ಅವರು ಕಾಂಗ್ರೆಸ್‌ ಪಕ್ಷದಲ್ಲಿ ಸಕ್ರಿಯರಾಗಿದ್ದಾರೆ.

Vijay Raghavendras wife Spandana campaigned for her brother in the Karnataka Assembly elections

ಬಿ.ಕೆ.ಶಿವರಾಂ ಅವರು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಕರ್ನಾಟಕದ ಹಾಲಿ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರ ಕಿರಿಯ ಸಹೋದರ. ಹರಿಪ್ರಸಾದ್ ಅವರು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಪ್ರಧಾನ ಕಾರ್ಯದರ್ಶಿಯಾಗಿದ್ದು, ಕಾಂಗ್ರೆಸ್‌ನಿಂದ ರಾಜ್ಯಸಭಾ ಸಂಸದರಾಗಿದ್ದರು ಮತ್ತು ಈ ಹಿಂದೆ ಸಚಿವರಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+