ವಾರಾಹಿ ಯೋಜನೆಗೆ ಇಂದು ಲೋಕಾರ್ಪಣೆ ಭಾಗ್ಯ
ಉಡುಪಿ, ಮೇ 4 : 1980ರಲ್ಲಿ ಆರಂಭವಾಗಿದ್ದ ಕರ್ನಾಟಕದ ಅತ್ಯಂತ ಹಳೆಯ ನೀರಾವರಿ ಯೋಜನೆಯಲ್ಲಿ ಒಂದಾದ ವಾರಾಹಿ ಯೋಜನೆಯ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಯೋಜನೆಯನ್ನು ಉದ್ಘಾಟಿಸಲಿದ್ದಾರೆ.
ಸಿದ್ದಾಪುರದಲ್ಲಿ ಇಂದು ಮಧ್ಯಾಹ್ನ 12 ಗಂಟೆಗೆ ನಡೆಯುವ ಸಮಾರಂಭದಲ್ಲಿ ಸಿದ್ದರಾಮಯ್ಯ ಅವರು ಬರೋಬ್ಬರಿ 600 ಕೋಟಿ ರೂ. ವೆಚ್ಚದ ಯೋಜನೆಗೆ ಚಾಲನೆ ನೀಡಲಿದ್ದಾರೆ. 1979 ಮಾರ್ಚ್ 23ರಂದು ಈ ಯೋಜನೆಗೆ ಸರ್ಕಾರ ಒಪ್ಪಿಗೆ ನೀಡಿತ್ತು. ಅಂದಿನ ಮುಖ್ಯಮಂತ್ರಿ ಗುಂಡೂರಾವ್ ಅವರು 1980 ಡಿಸೆಂಬರ್ 30ರಂದು ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು.

ಯೋಜನೆ ವಿವರ : ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಗುಡ್ಡೆಕೊಪ್ಪದಲ್ಲಿ ಹುಟ್ಟುವ ವಾರಾಹಿ ನದಿ 88 ಕಿ.ಮೀ ಪಶ್ಚಿಮಾಭಿಮುಖವಾಗಿ ಹರಿದು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗಂಗೊಳ್ಳಿ ಸಮೀಪ ಅರಬ್ಬಿ ಸಮುದ್ರ ಸೇರುತ್ತದೆ. [ಕರ್ನಾಟಕದಲ್ಲಿ ಮತ್ತೊಂದು ಪರಮಾಣು ಸ್ಥಾವರ ನಿರ್ಮಾಣ?]
ಈ ನದಿಗೆ ಸಿದ್ದಾಪುರದ ಹೊರಿಯಬ್ಬೆ ಸಮೀಪ ಅಣೆಕಟ್ಟು ಕಟ್ಟಲಾಗಿದ್ದು, ಆ ನೀರನ್ನು ಕರ್ನಾಟಕ ವಿದ್ಯುತ್ ನಿಗಮದ ವಾರಾಹಿ ಭೂಗರ್ಭ ಜಲ ವಿದ್ಯುತ್ ಯೋಜನೆಗೆ ಬಳಸುವುದು ಯೋಜನೆಯ ಉದ್ದೇಶವಾಗಿದೆ. ವಿದ್ಯುತ್ ಉತ್ಪಾದನೆ ಬಳಿಕ ಹೊರ ಬರುವ ನೀರನ್ನು ಕುಂದಾಪುರದ 33 ಮತ್ತು ಉಡುಪಿ ತಾಲೂಕಿನ 35 ಗ್ರಾಮಗಳಿಗೆ ನೀರಾವರಿಗಾಗಿ ಬಳಸಲಾಗುತ್ತದೆ.

ವಿಳಂಬವೇಕೆ? : ನಿಧಾನಗತಿಯ ಕಾಮಗಾರಿ, ಯೋಜನೆಯಲ್ಲಿನ ಮಾರ್ಪಾಡುಗಳಿಂದಾಗಿ ಯೋಜನೆ ವಿಳಂಬವಾಗಿದೆ. 2003-04ರಲ್ಲಿ ಕರ್ನಾಟಕ ನೀರಾವರಿ ನಿಗಮಕ್ಕೆ ಯೋಜನೆಯನ್ನ ಹಸ್ತಾಂತರ ಮಾಡಲಾಗಿತ್ತು. ಕೆಲವು ವಿತರಣಾ ನಾಲೆಗಳ ಕಾಮಗಾರಿಗಳು ಇನ್ನೂ ಬಾಕಿ ಉಳಿದಿದೆ.












Click it and Unblock the Notifications