ಕೊಳ್ಳೇಗಾಲ: ಜಾತ್ರೆಯಲ್ಲಿ ಜೀವಂತ ವ್ಯಕ್ತಿ ಬಲಿ!

ಕೊಳ್ಳೇಗಾಲ ತಾಲೂಕಿನ ಗುಂಡೇಗಾಲ ಗ್ರಾಮದಲ್ಲಿ ಒಂದು ತಿಂಗಳ ಕಾಲ ನಡೆಯುವ ವಳಗರೆ ಹುಚ್ಚಮ್ಮನ ಜಾತ್ರೆಯಲ್ಲಿ ಒಂದು ದಿನ ಈ ವಿಶಿಷ್ಟ ಬಲಿಹಬ್ಬ ನಡೆಯುತ್ತದೆ. ಇಕ್ಕಡಹಳ್ಳಿ ಗ್ರಾಮದಲ್ಲಿ ವಳಗೆರೆ ಹುಚ್ಚಮ್ಮ ದೇವಿಯ ವಕ್ಕಲಿನವರು ವಾಸವಿದ್ದು, ಆ ವಕ್ಕಲಿನ ಒಬ್ಬ ವ್ಯಕ್ತಿ ಮೂರು ದಿನಗಳ ಕಾಲ ಉಪವಾಸ ವ್ರತ ಆಚರಣೆಯನ್ನು ಕೈಗೊಂಡು ಗುಂಡೇಗಾಲ ಗ್ರಾಮದ ದೇವಾಲಯಕ್ಕೆ ರಾತ್ರಿ ಬರುತ್ತಾನೆ. ದೇವಾಲಯದ ಪೂಜಾರಿ ಕಾಲಿನಿಂದ ಒದ್ದಾಗ ಬಲಿ ವ್ಯಕ್ತಿ ಸ್ಥಳದಲ್ಲೇ ಜ್ಞಾನ ತಪ್ಪುತ್ತಾನೆ.[ಮೂಢನಂಬಿಕೆ ಮಸೂದೆ: ಮಠಾಧೀಶರ ಮಹತ್ವದ ನಿರ್ಣಯಗಳು]
ಬಲಿಕೊಟ್ಟ ಬಳಿಕ ಆತನ ಮುಖವನ್ನು ಅರಿಶಿನ ಕುಂಕುಮಗಳಿಂದ ಮುಚ್ಚಿ, ಮಾರನೇ ದಿನ ಬೀದಿ ಬೀದಿಗಳಲ್ಲಿ ಶವವನ್ನು ಮೇಲಕ್ಕೆ ಎಸೆಯುತ್ತಾ ಮೆರವಣಿಗೆ ನಡೆಸಲಾಗುತ್ತದೆ. ಬೆಳಗ್ಗೆ ಪುನಃ ದೇವಾಲಯದ ಪೂಜಾರಿಯ ಸತ್ತ ವ್ಯಕ್ತಿಯ ಮೇಲೆ ತೀರ್ಥ ಪ್ರೋಕ್ಷಣೆ ಮಾಡಿದಾಗ ಶವವಾಗಿದ್ದ ವ್ಯಕ್ತಿ ಎಚ್ಚರಗೊಳ್ಳುತ್ತಾನೆ.
ಪ್ರಕೃತಿ ವಿಕೋಪದಿಂದ ಪಾರಾಗಲು ಈ ವಿಶಿಷ್ಟ ನರಬಲಿ ಹಬ್ಬವನ್ನು ಇಲ್ಲಿನ ಜನ ಶತಮಾನಗಳಿಂದಲೂ ಆಚರಿಸಿಕೊಂಡು ಬಂದಿದ್ದಾರೆ. ಈ ಹಬ್ಬ 8-10 ವರ್ಷಗಳಿಗೊಮ್ಮೆ ನಡೆಯುತ್ತಿದ್ದು ಗ್ರಾಮದ ಎಲ್ಲಾ ಕೋಮಿನ ಜನರು ಒಂದಾಗಿ ಆಚರಿಸುತ್ತಿದ್ದಾರೆ. ಏ. 13 ರಿಂದ ಮೇ. 13ರವರೆಗೆ ಈ ಹಬ್ಬ ನಡೆಯುತ್ತಿದ್ದು, ಏ. 28 ರಂದು ಈ ಬಲಿ ಕಾರ್ಯಕ್ರಮ ನಡೆದಿದ್ದು, ಸಾವಿರಾರು ಜನ ಈ ಕಾರ್ಯಕ್ರಮವನ್ನು ವೀಕ್ಷಿಸಲು ಹಳ್ಳಿಗೆ ಆಗಮಿಸಿದ್ದರು.
ಒಂದು ತಿಂಗಳ ಹಬ್ಬ ಇದಾಗಿರುವುದರಿಂದ ಈ ಅವಧಿಯಲ್ಲಿ ರುಚಿಕಟ್ಟಾದ ಅಡುಗೆಗೆ ನಿಷೇಧವಿದ್ದು,ಕೆಲವೊಂದು ಪಂಗಡದವರು ಮಾಂಸಹಾರವನ್ನು ತ್ಯಜಿಸಿದ್ದಾರೆ.ಇನ್ನೂ ಕೆಲವರು ಪಾದರಕ್ಷೆ ಬಳಸದೆ ಬರಿಗಾಲಲ್ಲಿ ನಡೆಯುವ ಮೂಲಕ ಶ್ರದ್ಧೆಯಿಂದ ಈ ಹಬ್ಬವನ್ನು ಆಚರಿಸುತ್ತಿದ್ದಾರೆ.












Click it and Unblock the Notifications