ಬಿಜೆಪಿ ವಿರುದ್ಧ ಸಿಡಿದೆದ್ದ ಸೋಮಣ್ಣ, ಯತ್ನಾಳ್: ಮಾಜಿ ಡಿಸಿಎಂ ಹೇಳಿದ್ದೇನು?
ಕಲಬುರಗಿ, ನವೆಂಬರ್25: ರಾಜ್ಯ ವಿಧಾನಸಭಾ ಚುಣಾವಣೆಯ ಸೋಲಿನ ಬಳಿಕ ಬಿಜೆಪಿ ಪಾಳಯದಲ್ಲಿ ಅಸಮಾಧಾನ ಭುಗಿಲೆದಿದ್ದು, ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿದ ಬಳಿಕ ಮಾಜಿ ವಿ ಸೋಮಣ್ಣ ಹಾಗೂ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಬಹಿರಂಗವಾಗಿ ಅಸಮಾಧಾನಗೊಂಡಿದ್ದು, ಈ ಕುರಿತು ಮಾಜಿ ಡಿಸಿಎಂ ಅಶ್ವಥ್ ನಾರಾಯಣ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾಜಿ ಡಿಸಿಎಂ ಅಶ್ವಥ್ ನಾರಾಯಣ ಮಾತನಾಡಿ, ಪಕ್ಷ ಅಂದ ಮೇಲೆ ಕೆಲವು ವೈಯಕ್ತಿಕ ವ್ಯತ್ಯಾಸಗಳು ಬಂದೇ ಬರುತ್ತವೆ. ಇದೆಲ್ಲವನ್ನು ಅರಗಿಸಿಕೊಂಡು ಮುಂದೆ ಹೋಗುವ ಶಕ್ತಿ ಬಿಜೆಪಿಗೆ ಇದೆ. ಬಸವನಗೌಡ ಪಾಟೀಲ್ ಯತ್ನಾಳ್ ಯಾವತ್ತೂ ಪಕ್ಷದ ಪರ ಬದ್ಧವಾಗಿರುವ ವ್ಯಕ್ತಿ. ಪ್ರಜಾಪ್ರಭುತ್ವಕ್ಕೆ ಅತೀ ಹೆಚ್ಚು ಗೌರವ ಕೊಡುವ ಏಕೈಕ ಪಕ್ಷ ನಮ್ಮದು. ಒಳ್ಳೆಯತನಕ್ಕೆ ಯಾವತ್ತು ಅವಕಾಶ ಕೊಡುವಂತಹ ಪಕ್ಷ ನಮ್ಮ ಬಿಜೆಪಿ. ನಾನಾಗಲಿ ಯತ್ನಾಳ್ ಅವರಾಗಲಿ ಸೋಮಣ್ಣ ಅವರಾಗಲಿ ಎಲ್ಲರೂ ಪಕ್ಷಕ್ಕಾಗಿ ದುಡಿಯುತ್ತೇವೆ ಎಂದು ಹೇಳಿದರು.

ಮಾಜಿ ಸಚಿವ ವಿ ಸೋಮಣ್ಣ ಅವರು ಪಕ್ಷದ ವಿರುದ್ಧ ಅಸಮಾಧಾನಗೊಂಡಿರುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ವಿ.ಸೋಮಣ್ಣ ನಮ್ಮ ಪಕ್ಷದ ಹಿರಿಯ ನಾಯಕರು. ನಮ್ಮ ಪಕ್ಷದಲ್ಲಿ ಅವರಿಗೆ ಸಂಪೂರ್ಣ ಗೌರವ ಇದೆ, ಅವರನ್ನು ವಿಶ್ವಾಸದಿಂದ ಕೈ ಹಿಡಿದುಕೊಂಡು ಕರೆದುಕೊಂಡು ಹೋಗುವ ಕೆಲಸ ಬಿಜೆಪಿಯಿಂದ ಆಗುತ್ತದೆ. ಚುನಾವಣೆ ಅಂದ ಮೇಲೆ ಸೋಲು ಗೆಲುವು ಸಹಜ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಸೋಮಣ್ಣ ಅವರು ಪದೇ ಪದೇ ಹೇಳುತ್ತಿದ್ದಾರೆ.
ಸೋಮಣ್ಣ ಇಂದು, ಮುಂದು ಎಂದೆಂವಿದೂ ನಮ್ಮ ಜೊತೆಯೇ ಇರುತ್ತಾರೆ. ಅವರ ನೋವು, ಅವರ ಅಳಲು ದೂರ ಮಾಡುವ ಕೆಲಸ ಬಿಜೆಪಿ ಮಾಡುತ್ತದೆ. ಜಾತಿ ಗಣತಿ ಸಮೀಕ್ಷೆ ವೈಜ್ಞಾನಿಕವಾಗಿ ಆಗಿಲ್ಲ. ಅದು ಜನಪರ ಗಣತಿ ಅಲ್ಲ. ರಾಜಕೀಯ ಪ್ರೇರಿತವಾದ ಸಮೀಕ್ಷೆಯಾಗಿದೆ. ಸಮಾಜದಲ್ಲಿ ಗೊಂದಲ ನಿರ್ಮಾಣ ಮಾಡುವುದಕ್ಕಾಗಿಯೇ ಸಿದ್ದರಾಮಯ್ಯ ರಾಜಕೀಯ ಪ್ರೇರಿತವಾಗಿ ಈ ಸಮೀಕ್ಷೆ ನಡೆಸಿದ್ದಾರೆ. ಸಮಾಜ ಈ ಸಮೀಕ್ಷೆಯನ್ನು ಖಂಡಿಸಬೇಕು ಎಂದರು ಜಾತಿ ಗಣತಿಗೆ ವಿರೋಧ ವ್ಯಕ್ತಪಡಿಸಿದರು.
ಪಕ್ಷ ಅಂದಮೇಲೆ, ಭಿನ್ನಾಭಿಪ್ರಾಯ, ಅಸಮಾಧಾನ ಇದ್ದೆ ಇರುತ್ತೆ, ಎಲ್ಲವನ್ನು ಸರಿಪಡಿಸಿಕೊಂಡು ಹೋಗುತ್ತೇವೆ ಎಂದು ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ. ಬಸನಗೌಡ ಪಾಟೀಲ್, ವಿ ಸೋಮಣ್ಣ ಪಕ್ಷದ ಹಿರಿಯ ನಾಯಕರು ಒಳ್ಳೆಯತನಕ್ಕೆ ಯಾವತ್ತು ಅವಕಾಶ ಕೊಡುವಂತಹ ಪಕ್ಷ ನಮ್ಮ ಬಿಜೆಪಿ. ನಾನಾಗಲಿ ಯತ್ನಾಳ್ ಅವರಾಗಲಿ ಸೋಮಣ್ಣ ಅವರಾಗಲಿ ಎಲ್ಲರೂ ಪಕ್ಷಕ್ಕಾಗಿ ದುಡಿಯುತ್ತೇವೆ ಎಂದರು.
ವಿ.ಸೋಮಣ್ಣ ಅವರಿಗೆ ಸಂಪೂರ್ಣ ಗೌರವ ಇದೆ, ಅವರನ್ನು ವಿಶ್ವಾಸದಿಂದ ಕೈ ಹಿಡಿದುಕೊಂಡು ಕರೆದುಕೊಂಡು ಹೋಗುವ ಕೆಲಸ ಬಿಜೆಪಿಯಿಂದ ಆಗುತ್ತದೆ. ಚುನಾವಣೆ ಅಂದ ಮೇಲೆ ಸೋಲು ಗೆಲುವು ಸಹಜ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಸೋಮಣ್ಣ ಪದೇ ಪದೇ ಹೇಳುತ್ತಿದ್ದಾರೆ. ಸೋಮಣ್ಣ ಇಂದು, ಮುಂದು ಎಂದೆಂದೂ ನಮ್ಮ ಜೊತೆಯೇ ಇರುತ್ತಾರೆ. ಅವರ ನೋವು, ಅವರ ಅಳಲು ದೂರ ಮಾಡುವ ಕೆಲಸ ಬಿಜೆಪಿ ಮಾಡುತ್ತೆ ಎಂದು ಹೇಳಿದರು












Click it and Unblock the Notifications