ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್‌ನಲ್ಲಿ ಅಸಮಾಧಾನದ ಬೆಂಕಿ, ಬಿಜೆಪಿ ಏನು ಮಾಡುತ್ತಿದೆ?

By Manjunatha
|
Google Oneindia Kannada News

Recommended Video

ಸರ್ಕಾರ ರಚಿಸಲು ಕರ್ನಾಟಕ ಬಿಜೆಪಿಗೆ ಇದು ರೈಟ್ ಟೈಮ್ | Oneindia Kannada

ಬೆಂಗಳೂರು, ಜೂನ್ 08: ಸಚಿವ ಸಂಪುಟ ವಿಸ್ತರಣೆ ಶುರುವಾಗುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಅಸಮಾಧಾನ ಹೊಗೆ ಆಡುತ್ತಿದೆ. ಖಾತೆ ಹಂಚಿಕೆ ವೇಳೆಗಾಗಲೇ ಬೆಂಕಿಯೇ ಹೊತ್ತಿಕೊಂಡಿದೆ.

ಸಚಿವ ಸ್ಥಾನ ಸಿಗದ ಪ್ರಮುಖರಾದ ಎಚ್.ಎಂ.ರೇವಣ್ಣ, ಎಂಬಿ ಪಾಟೀಲ್, ಸತೀಶ್ ಜಾರಕಿಹೊಳಿ, ಎಂಟಿಬಿ ನಾಗರಾಜು, ಸುಧಾಕರ್ ಅವರುಗಳು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಪಕ್ಷಕ್ಕೆ ರಾಜೀನಾಮೆ ನೀಡುವ ಮಾತುಗಳನ್ನೂ ಆಡಿದ್ದಾರೆ.

ಪರಂಗೆ ಸಂಪುಟ ಬಿಸಿ ತುಪ್ಪ, ಸ್ವಲ್ಪ ಆಯ ತಪ್ಪಿದರೂ ಬಿಜೆಪಿಗೆ ಕಪ್! ಪರಂಗೆ ಸಂಪುಟ ಬಿಸಿ ತುಪ್ಪ, ಸ್ವಲ್ಪ ಆಯ ತಪ್ಪಿದರೂ ಬಿಜೆಪಿಗೆ ಕಪ್!

ಕಾಂಗ್ರೆಸ್‌ ಮನೆಗೆ ಈಗ ಬೆಂಕಿ ಬಿದ್ದಿದೆ. ಆದರೆ ಅತಿ ದೊಡ್ಡ ಪಕ್ಷವಾದರೂ ಸ್ವಲ್ಪದರಲ್ಲೇ ಅಧಿಕಾರ ಕಳೆದುಕೊಂಡ ಬಿಜೆಪಿ ಈ ಸಮಯದಲ್ಲಿ ಏನು ಮಾಡುತ್ತಿದೆ ಎಂಬುದು ಕುತೂಹಲ. ಪರಿಸ್ಥಿತಿಯ ಲಾಭವನ್ನು ಬಿಜೆಪಿ ತೆಗೆದುಕೊಂಡಲ್ಲಿ ಬಿಜೆಪಿಗೆ ಮತ್ತೆ ಅಧಿಕಾರ ಸಿಗುವುದು ಕಷ್ಟವೇನಲ್ಲ. ಅದಕ್ಕೆ ಬೇಕಿರುವುದು 8 ಶಾಸಕರ ಬೆಂಬಲವಷ್ಟೆ.

ಪ್ರಯತ್ನಿಸಿದರೆ ಸರ್ಕಾರ ರಚನೆ ಗ್ಯಾರೆಂಟಿ

ಪ್ರಯತ್ನಿಸಿದರೆ ಸರ್ಕಾರ ರಚನೆ ಗ್ಯಾರೆಂಟಿ

ಬಹುಮತ ಸಾಬೀತು ಮಾಡುವ ಸಮಯದಲ್ಲಿ ಬಿಜೆಪಿಯು ಕೆಲವು ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಸಂಪರ್ಕಿಸಿ ಬೆಂಬಲ ಯಾಚಿಸಿತ್ತು. ಈಗಿನ ಸ್ಥಿತಿಯಲ್ಲಿ ಆಮೀಷ ಒಡ್ಡುವ ಪರಿಸ್ಥಿತಿಯೂ ಇಲ್ಲ, ಕರೆದರೆ ಓಡಿಬರುವ ಸ್ಥಿತಿಯಲ್ಲಿದ್ದಾರೆ ಕೆಲವು ನಾಯಕರು. ಆದರೆ ಬಿಜೆಪಿ ಆ ಪ್ರಯತ್ನ ಮಾಡುತ್ತಿಲ್ಲವೇ ಎಂಬುದು ಪ್ರಶ್ನೆ.

ಎರಡೆರಡು ಖಾತೆಗೆ ರೇವಣ್ಣ ಪಟ್ಟು ಎಚ್‌ಡಿಕೆಗೆ ಪೀಕಲಾಟಎರಡೆರಡು ಖಾತೆಗೆ ರೇವಣ್ಣ ಪಟ್ಟು ಎಚ್‌ಡಿಕೆಗೆ ಪೀಕಲಾಟ

ಸದಾನಂದಗೌಡರ ಆ ಮಾತು

ಸದಾನಂದಗೌಡರ ಆ ಮಾತು

ಇತ್ತೀಚೆಗಷ್ಟೆ ಸದಾನಂದಗೌಡ ಅವರು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ, ಅವಕಾಶ ಸಿಕ್ಕರೆ ಮತ್ತೆ ಬಿಜೆಪಿ ಸರ್ಕಾರ ರಚಿಸುತ್ತದೆ ಎಂದಿದ್ದರು. ಮೊನ್ನೆಯಷ್ಟೆ ಈಶ್ವರಪ್ಪ ಅವರು ಅಸಮಾಧಾನಗೊಂಡ ಶಾಸಕರನ್ನು ಬಿಜೆಪಿಗೆ ಬಹಿರಂಗವಾಗಿಯೇ ಆಹ್ವಾನಿಸಿದ್ದರು.

ಎಂಬಿ.ಪಾಟೀಲ್ ಬೆಂಬಲಿಗರಿಂದ ಉಪ ಮುಖ್ಯಮಂತ್ರಿಗೆ ಘೇರಾವ್ ಎಂಬಿ.ಪಾಟೀಲ್ ಬೆಂಬಲಿಗರಿಂದ ಉಪ ಮುಖ್ಯಮಂತ್ರಿಗೆ ಘೇರಾವ್

ಎಚ್‌.ಎಂ.ರೇವಣ್ಣಗೆ ಗಾಳ

ಎಚ್‌.ಎಂ.ರೇವಣ್ಣಗೆ ಗಾಳ

ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಬಿಜೆಪಿ ತೆರೆಮರೆಯ ಪ್ರಯತ್ನ ಮಾಡುತ್ತಿದೆ. ಕಾಂಗ್ರೆಸ್‌ ಮೇಲೆ ಕೆಂಡಾಮಂಡಲವಾದ ಎಚ್‌.ಎಂ.ರೇವಣ್ಣ ಅವರನ್ನು ಬಿಜೆಪಿ ನಾಯಕರು ತಮ್ಮ ತೆಕ್ಕೆಗೆ ಹಾಕಿಕೊಳ್ಳುವ ಪ್ರಯತ್ನ ಮಾಡಿದ್ದರು. ಈ ಸುದ್ದಿಯನ್ನು ರೇವಣ್ಣ ಅವರು ತಳ್ಳಿ ಹಾಕಲಿಲ್ಲ. ಆದರೆ ಇಲ್ಲಿ ವಿಶೇಷವೆಂದರೆ ರೇವಣ್ಣ ಸೋತ ಅಭ್ಯರ್ಥಿ ಅವರಿಂದ ಬಿಜೆಪಿ ಈ ಸಮಯದಲ್ಲಿ ಆಗುವ ಲಾಭವೇನು ಎಂಬುದು ಪ್ರಶ್ನೆ.

ಹೈಕಮಾಂಡ್ ಜೊತೆ ಮಾತುಕತೆ

ಹೈಕಮಾಂಡ್ ಜೊತೆ ಮಾತುಕತೆ

ಬಿಜೆಪಿ ಹೈಕಮಾಂಡ್ ರಾಜ್ಯದ ಬೆಳವಣಿಗೆಗಳನ್ನು ಗಮನಿಸುತ್ತಿದ್ದು. ಅದರ ಲೆಕ್ಕಾಚಾರವೇ ಬೇರೆ ಇದೆ. ಅವಕಾಶ ಸಿಕ್ಕರೂ ಸರ್ಕಾರ ರಚಿಸದೆ ಲೋಕಸಭೆ ಚುನಾವಣೆ ವೇಳೆಗೆ ರಾಜ್ಯದಲ್ಲೂ ವಿಧಾನಸಭೆ ಚುನಾವಣೆ ನಡೆಯುವಂತೆ ನೋಡಿಕೊಂಡಲ್ಲಿ ಬಹುಮತ ಗ್ಯಾರೆಂಟಿ ಎಂಬ ಲೆಕ್ಕಾಚಾರ ಬಿಜೆಪಿ ಹೈಕಮಾಂಡ್‌ಗೆ ಇದೆ.

ಸಣ್ಣ ಮೀನುಗಳು ಬೇಡ ತಿಮಿಂಗಲಗಳಿಗೇ ಗಾಳ

ಸಣ್ಣ ಮೀನುಗಳು ಬೇಡ ತಿಮಿಂಗಲಗಳಿಗೇ ಗಾಳ

ಶಾಸಕರ ಬೆಂಬಲ ಈಗ ಸುಲಭವಾಗಿ ಸಿಕ್ಕರೂ ಸಹ ಈ ಸದ್ಯಕ್ಕೆ ಬಿಜೆಪಿ ಸರ್ಕಾರ ರಚಿಸಬಹುದಷ್ಟೆ ಆದರೆ ಮುಂದೊಂದು ದಿನ ಅದಕ್ಕೆ ನಾಯಕತ್ವದ ಕೊರತೆ ಕಾಡುವ ಸಾಧ್ಯತೆ ಇಲ್ಲದಿಲ್ಲ. ಹಾಗಾಗಿ ಬಿಜೆಪಿಯು ದೊಡ್ಡ ಮುಖಂಡರಿಗೆ ಗಾಳ ಹಾಕುತ್ತಿದೆ ಎನ್ನಲಾಗಿದೆ. ಬಿಜೆಪಿಯು ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್‌ ಮೇಲೆ ಮೃಧು ಧೋರಣೆ ತಳೆದಿದ್ದು ಅವರನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ ಎಂಬ ಮಾತು ಹರಿದಾಡುತ್ತಿದೆ. ಆದರೆ ಇದು ಕಷ್ಟಸಾಧ್ಯ.

ಸುಲಭವಾಗಿ ಸರ್ಕಾರ ರಚಿಸುವ ಅವಕಾಶ

ಸುಲಭವಾಗಿ ಸರ್ಕಾರ ರಚಿಸುವ ಅವಕಾಶ

104 ಸ್ಥಾನಗಳನ್ನು ಗೆದ್ದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ ಕೂಡ ಅಧಿಕಾರದಿಂದ ದೂರ ಉಳಿದಿರುವ ಬಿಜೆಪಿಗೆ ಸರ್ಕಾರ ರಚಿಸಲು ಈಗ ಬೇಕಿರುವುದು 8 ಶಾಸಕರ ಬೆಂಬಲವಷ್ಟೆ. ಪ್ರಸ್ತುತ ಕಾಂಗ್ರೆಸ್ ಒಂದರಲ್ಲೇ 10ಕ್ಕೂ ಹೆಚ್ಚು ಪ್ರಮುಖ ನಾಯಕರೇ ಅಸಮಾಧಾನಗೊಂಡಿದ್ದು ಬಿಜೆಪಿ ಪ್ರಯತ್ನ ಮಾಡಿದರೆ ಸರ್ಕಾರ ರಚಿಸುವುದು ಕಷ್ಟವೇನಲ್ಲ.

English summary
Many Congress MLAs were upset about cabinet expansion. Some were threatened to leave the party. Being a big party BJP may take the advantage of the situation and form the government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X