UPSC Reults 2024: ಹಾವೇರಿ ವೈದ್ಯನಿಗೆ 41ನೇ ಸ್ಥಾನ: ಕರ್ನಾಟಕ ಅಮೋಘ ಸಾಧನೆ, ಪಾಸಾದವರ ಪಟ್ಟಿ ಇಲ್ಲಿದೆ
ಬೆಂಗಳೂರು, ಏಪ್ರಿಲ್ 24: ಕೇಂದ್ರ ಲೋಕಸೇವಾ ಆಯೋಗ (UPSC) ನಡೆಸಿದ ಪರೀಕ್ಷೆಗಳಲ್ಲಿ ಕರ್ನಾಟಕದ ರಾಜ್ಯವು ಮಹತ್ವದ ಸಾಧನೆ ಮಾಡಿದೆ. 2024 ನಾಗರಿಕ ಸೇವಾ ಪರೀಕ್ಷೆಯಲ್ಲಿ ರಾಜ್ಯದ ಅನೇಕ ಅಭ್ಯರ್ಥಿಗಳು ಉನ್ನತ ಶ್ರೇಣಿ ಪಡೆದು ಉತ್ತೀರ್ಣವಾಗಿದ್ದಾರೆ. ಈ ಮೂಲಕ ರಾಜ್ಯಕ್ಕೆ ಅತ್ಯುತ್ತಮ ಹೆಸರು ತಂದಿದ್ದಾರೆ. ಕರ್ನಾಟಕದಲ್ಲಿ ನಾಗರಿಕ ಸೇವಾ ಪರೀಕ್ಷೆ ಬರೆದವರ ಪೈಕಿ ಆರ್. ರಂಗ ಮಂಜು (UPSC 24 ನೇ ಶ್ರೇಣಿ) ಅವರು ಅಗ್ರಸ್ಥಾನದಲ್ಲಿದ್ದಾರೆ.
ನಂತರದ ಸ್ಥಾನದಲ್ಲಿ ಹಾವೇರಿ ಜಿಲ್ಲೆಯ ವೈದ್ಯ ಡಾ. ಸಚಿನ್ ಬಸವರಾಜ್ ಗುತ್ತೂರ್ ತಮ್ಮ ನಾಲ್ಕನೇ ಪ್ರಯತ್ನದಲ್ಲಿ 41 ನೇ ಸ್ಥಾನ ಪಡೆದಿದ್ದಾರೆ. ಈ ಯಶಸ್ವಿ ಅಭ್ಯರ್ಥಿಗಳ ಯಶಸ್ಸು ಹೆಮ್ಮೆ ಮಾತ್ರವಲ್ಲದೇ, ಶೈಕ್ಷಣಿಕ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕರ್ನಾಟಕದ ಸಾಧನೆಯನ್ನು ಒತ್ತಿ ಹೇಳುತ್ತದೆ. ರಾಜ್ಯದ ಎಲ್ಲ ಅಭ್ಯರ್ಥಿಗಳು UPSC ಪರೀಕ್ಷೆಯಲ್ಲಿ ಅಸಾಧಾರಣ ಬದ್ಧತೆ ತೋರಿದಿದ್ದಾರೆ. ಉತ್ತಮ ಅಂಕಗಳನ್ನು ಪಡೆದು ಮುಂದೆ ದೇಶದ ಆಡಳಿತದ ಭಾಗವಾಗಲಿದ್ದಾರೆ.

UPSCಯಲ್ಲಿ ವಿಭೋರ್ ಮೆಂದಿರಟ್ಟ (389 ನೇ ಶ್ರೇಣಿ), ಬಿಎಂ ಮೇಘನಾ (425 ನೇ ಶ್ರೇಣಿ) ಮತ್ತು ಪ್ರತಿವಾ ಲಾಮಾ (461 ನೇ ಶ್ರೇಣಿ) ಅವರು ಸಹ ಅಗ್ರಹ 500 ರಲ್ಲಿ ತಮ್ಮ ಸ್ಥಾನ ಪಡೆದಿದ್ದಾರೆ. ಇವರ ಈ ಸಾಧನೆಯಿಂದ ದೇಶದ ಕರ್ನಾಟಕ ರಾಜ್ಯವು ನಾಗರಿಕ ಸೇವೆಗಳಿಗೆ ಅರ್ಹರನ್ನು, ಉತ್ತಮ ಅಭ್ಯರ್ಥಿಗಳನ್ನು ಉತ್ಪಾದಿಸಿದಂತಾಗಿದೆ. ಇದರಿಂದ ದೇಶಾದ್ಯಂತ ಈ ರಂಗದಲ್ಲಿ ಕರ್ನಾಟಕದ ಶಕ್ತಿ ಸಾಮರ್ಥ್ಯ ಜಗಜ್ಜಾಹೀರಾಗಿದೆ.
ಇನ್ನಷ್ಟು ಕರ್ನಾಟಕದ ಅಭ್ಯರ್ಥಿಗಳು ಉತ್ತಮ ಶ್ರೇಣಿ ಪಡೆದವರಿದ್ದಾರೆ. ರಾಹುಲ್ ಸಿ. ಯರತ್ನೇಲಿ 462ನೇ ಸ್ಥಾನ ಹೊಂದಿದ್ದಾರೆ. ಪರಮಿತ ಮಾಲಕರ್ 477 ನೇ ಸ್ಥಾನ, ಡಾ. ಭಾನುಪ್ರಕಾಶ್ 523ನೇ ಸ್ಥಾನ, ಅಭಿಶಿಲ್ ಜೈಶ್ವಾಲ್ (538 ನೇ) ಮತ್ತು ಎ. ಮಧು (544 ನೇ) ಸ್ಥಾನ ಪಡೆದು ಉತ್ತಮ ಅಭ್ಯರ್ಥಿಗಳ ಸಾಲಿಗೆ ಸೇರಿದ್ದಾರೆ. ಇನ್ನೂ ವರುಣ್ ಕೆ. ಗೌಡ 565 ನೇ ಸ್ಥಾನ ಪಡೆದರೆ, ಭರತ್ ಸಿ. ಯಾರಮ್ 567 ಹಾಗೂ ಸ್ವಪ್ನಿಲ್ ಭಾಗಲ್ 620 ನೇ ರ್ಯಾಂಕ್ ಪಡೆದು ರಾಜ್ಯದ ಕೀರ್ತಿ ಪತಾಕೆ ಹಾರಿಸಿದ್ದಾರೆ.
ಮುಂದುವರಿದು ನೋಡುವುದಾದರೆ, ಸಂಪ್ರೀತ್ ಸಂತೋಷ್ 652 ನೇ ಸ್ಥಾನ, ನಿಖಿಲ್ ಎಂ.ಆರ್ ಅವರು 724ನೇ ಶ್ರೇಣಿ ಪಡೆದಿದ್ದಾರೆ. ಟಿ. ವಿಜಯ್ ಕುಮಾರ್ 894 ನೇ ರ್ಯಾಂಕ್, ಹನುಮಂತಪ್ಪ ನಂದಿ 910 ನೇ ಸ್ಥಾನ ಗಳಿದರೆ, ಧನ್ಯಾ ಕೆ.ಎಸ್ ಅವರು 982 ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಮೋಹನ್ ಪಾಟೀಲ್ 984 ನೇ ಸ್ಥಾನದಲ್ಲಿದ್ದಾರೆ. ಈ ಮೂಲಕ ಉಪಿಎಸ್‌ಸಿಯಲ್ಲಿ ಪ್ರಬಲ ಸ್ಪರ್ಧಾಳಗಳಾಗಿದ್ದಾರೆ.
UPSC ಯಶಸ್ವಿ ಅಭ್ಯರ್ಥಿಗಳ ಪಟ್ಟಿ, ರ್‍ಯಾಂಕ್ ವಿವರ
ಆರ್.ರಂಗ ಮಂಜು - 24ನೇ ರ್‍ಯಾಂಕ್
ಡಾ. ಸಚಿನ್ ಬಸವರಾಜ್ ಗುತ್ತೂರು - 41ನೇ ರ್‍ಯಾಂಕ್
ಅನುಪ್ರಿಯಾ ಸಕ್ಯಾ - 120ನೇ ಶ್ರೇಣಿ
ಬಿಎಂ ಮೇಘನಾ - 425ನೇ ಸ್ಥಾನ
ಮಾಧವಿ ಆರ್ - 446 ನೇ ರ್‍ಯಾಂಕ್
ಡಾ. ಭಾನು ಪ್ರಕಾಶ್ ಜೆ- 523 ನೇ ರ್‍ಯಾಂಕ್
ವರುಣ್ ಕೆ. ಗೌಡ - 565 ನೇ ಸ್ಥಾನ
ಭಾರತ್ ಸಿ ಯಾರಮ್ - 567 ನೇ ರ್‍ಯಾಂಕ್
ನಿಖಿಲ್ ಎಂ.ಆರ್ - 724 ನೇ ರ್‍ಯಾಂಕ್
ಟಿ.ವಿಜಯ್ ಕುಮಾರ್ - 894 ನೇ ಸ್ಥಾನ
ಹನುಮಂತಪ್ಪ ನಂದಿ - 910 ನೇ ಸ್ಥಾನ
ವಿಶಾಖ ಕದಮ್ - 962 ನೇ ಶ್ರೇಣಿ
ಸಂದೀಪ್ ಸಿಂಗ್ - 981 ನೇ ರ್‍ಯಾಂಕ್
ಮೋಹನ್ ಪಾಟೀಲ್ - 984 ನೇ ರ್‍ಯಾಂಕ್












Click it and Unblock the Notifications