ಕನ್ನಡದಲ್ಲಿ ರೈಲು ಟಿಕೆಟ್ ಬುಕ್ಕಿಂಗ್ ಆ್ಯಪ್: ಶೇ 3 ಬೋನಸ್‌ನೊಂದಿಗೆ ಹಲವು ಸೌಕರ್ಯ, ಸೌಲಭ್ಯಗಳು- ಏನೇನಿವೆ ತಿಳಿಯಿರಿ
ಬೆಂಗಳೂರು, ಜನವರಿ 18: ಕಾಯ್ದಿರಿಸದ ರೈಲು ಟಿಕೆಟ್ ಬುಕ್ಕಿಂಗ್ ಅನ್ನು ಇಂದಿನಿಂದ ಕನ್ನಡದಲ್ಲಿ ಮಾಡಬಹುದು. ಕನ್ನಡ ಭಾಷೆಯಲ್ಲಿರುವ ಈ ಅಪ್ಲಿಕೇಶನ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿದೆ ಎಂದು ನೈಋತ್ಯ ರೈಲ್ವೆ ಹೇಳಿದೆ.
ಈ ಅಪ್ಲಿಕೇಶನ್ ಮೂಲಕ ಟಿಕೆಟ್ ಬುಕಿಂಗ್, ರದ್ದತಿಗಳು, ಪಿಟಿಎಫ್‌ಎಂ ಮತ್ತು ಸೀಸನ್ ಟಿಕೆಟ್‌ಗಳನ್ನು ಖರೀದಿಸಬಹುದು.
ಈಗ 'ಯುಟಿಎಸ್ ಮೊಬೈಲ್
ಆ್ಯಪ್' ಕನ್ನಡದಲ್ಲಿಯೂ ಲಭ್ಯ. ಈ ಕೂಡಲೇ ಡೌನ್ ಲೋಡ್ ಮಾಡಿ ಎಂದು ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಟ್ವೀಟ್ ಮಾಡಿದ್ದಾರೆ. ಟ್ವೀಟ್ ಜೊತೆ ಗೂಗಲ್ ಫ್ಲೇ ಸ್ಟೋರ್‌ನ ಲಿಂಕ್ ಅನ್ನೂ ನೀಡಿದೆ.
ಈಗ 'ಯುಟಿಎಸ್ ಮೊಬೈಲ್ ಆಪ್' ಕನ್ನಡದಲ್ಲಿಯೂ ಲಭ್ಯ. ಈ ಕೂಡಲೇ ಡೌನ್ ಲೋಡ್ ಮಾಡಿ.https://t.co/10Ap1ErCj6 #IndianRailways #DigitalIndia #Kannada @SWRRLY pic.twitter.com/2e6hBWUORB
— DRM Mysuru (@DrmMys) January 18, 2023
'ಕಾಯ್ದಿರಿಸದ ರೈಲು ಟಿಕೆಟ್‌ಗಳನ್ನು ಖರೀದಿಸಲು ಯು ಟಿ ಎಸ್ ಆ್ಯಪ್ ಬಳಸಿ. ರೈಲ್ವೆ ಬುಕಿಂಗ್ ಕೌಂಟರ್‌ಗಳಲ್ಲಿ ಸರತಿಯಲ್ಲಿ ನಿಲ್ಲುವುದನ್ನು ತಪ್ಪಿಸಿ. ಆರ್ -ವಾಲೆಟ್ ರಿಚಾರ್ಜ್ ಮೇಲೆ ಶೇ 3 ಬೋನಸ್ ಪಡೆಯಿರಿ' ಎಂದು ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರು ಟ್ವೀಟಿಸಿದ್ದಾರೆ.
ಕಾಯ್ದಿರಿಸದ ರೈಲು ಟಿಕೆಟ್‌ಗಳನ್ನು ಖರೀದಿಸಲು
— DRM Mysuru (@DrmMys) January 18, 2023
ಯು ಟಿ ಎಸ್ ಆ್ಯಪ್ ಬಳಸಿ…
ರೈಲ್ವೆ ಬುಕಿಂಗ್ ಕೌಂಟರ್‌ಗಳಲ್ಲಿ ಸರತಿಯಲ್ಲಿ ನಿಲ್ಲುವುದನ್ನು ತಪ್ಪಿಸಿ !
ಆರ್ -ವಾಲೆಟ್ ರಿಚಾರ್ಜ್ ಮೇಲೆ 3% ಬೋನಸ್ ಪಡೆಯಿರಿ.#DigitalIndia #IndianRailways @SWRRLY pic.twitter.com/DnaH3y0k20
ನೀವು ಆನ್‌ಲೈನ್‌ಗೆ ಹೋಗುವಾಗ ಸಾಲಿನಲ್ಲಿ ಏಕೆ ಕಾಯಬೇಕು. ನಿಮ್ಮ ಮೊಬೈಲ್ ಫೋನ್‌ನಲ್ಲಿ ಕಾಯ್ದಿರಿಸದ ಟಿಕೆಟ್‌ಗಳನ್ನು ಕಾಯ್ದಿರಿಸಲು ಜಗಳ ಮುಕ್ತ ಮಾರ್ಗ.

ಆ್ಯಪ್ ಸ್ಟೋರ್‌ಗಳಲ್ಲಿ ಲಭ್ಯವಿರುವ UTS ಮೊಬೈಲ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ. R-Wallet ರೀಚಾರ್ಜ್‌ನಲ್ಲಿ ಶೇ 3 ಬೋನಸ್ ಪಡೆಯಿರಿ ಎಂದು ಹುಬ್ಬಳ್ಳಿ ರೈಲ್ವೆ ವ್ಯವಸ್ಥಾಪಕರು ತಿಳಿಸಿದ್ದಾರೆ.
ಆಫ್‌ನಲ್ಲಿರುವ ಆಯ್ಕೆಗಳು...
ಸಾಮಾನ್ಯ ಬುಕ್ಕಿಂಗ್
ತ್ವರಿತ ಬುಕ್ಕಿಂಗ್
ಪ್ಲಾಟ್‌ಫಾರ್ಮ್ ಬುಕ್ಕಿಂಗ್
ಸೀಸನ್ ಬುಕ್ಕಿಂಗ್
ಕ್ಯೂ ಆರ್ ಬುಕ್ಕಿಂಗ್
ಆಪ್ ಮೂಲಕ ಈ ಸೇವೆಗಳು
ಟಿಕೆಟ್ ರದ್ದುಗೊಳಿಸಿ
ಬುಕ್ಕಿಂಗ್ ಇತಿಹಾಸ ತಿಳಿಯಿರಿ
ಟಿಕೆಟ್ ತೋರಿಸಿ
ಆರ್ ಬುಕ್ಕಿಂಗ್
ಪ್ರೊಪೈಲ್
ಲೆನದೇನ

ರೈಲ್ವೆ ಸಂಬಂಧಿತ ಎಲ್ಲ ರೀತಿಯ ವಿಚಾರಣೆಗಾಗಿ 139 ಕ್ಕೆ ಕರೆ ಮಾಡಲು ನೈರುತ್ಯ ರೈಲ್ವೆ ಹೇಳಿದೆ. ಒಂದುರೈಲುಒಂದೇಸಹಾಯವಾಣಿ139 ಯೋಜನೆ ಅಡಿಯಲ್ಲಿ ಈ ಸಹಾಯವಾಣಿ ಇದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.
ನೈಋತ್ಯ ರೈಲ್ವೆಯು ಭಾರತದ 19 ರೈಲ್ವೆ ವಲಯಗಳಲ್ಲಿ ಒಂದಾಗಿದೆ, ಕರ್ನಾಟಕದ ಹುಬ್ಬಳ್ಳಿಯಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ. SWR ಅನ್ನು 2003 ರಲ್ಲಿ ದಕ್ಷಿಣ ರೈಲ್ವೆ, ದಕ್ಷಿಣ ಮಧ್ಯ ರೈಲ್ವೇ ಮತ್ತು ಮಧ್ಯ ರೈಲ್ವೆಗಳಿಂದ ವಿಂಗಡಿಸಿ ರಚಿಸಲಾಗಿದೆ.
ನೈಋತ್ಯ ರೈಲ್ವೆ ವಲಯವು 1 ಏಪ್ರಿಲ್ 2003 ರಂದು ದಕ್ಷಿಣ ರೈಲ್ವೆಯಿಂದ ಮೈಸೂರು ಮತ್ತು ಬೆಂಗಳೂರು ವಿಭಾಗಗಳನ್ನು ದಕ್ಷಿಣ ಮಧ್ಯ ರೈಲ್ವೆಯಿಂದ ಹುಬ್ಬಳ್ಳಿ ವಿಭಾಗದೊಂದಿಗೆ ವಿಭಜಿಸುವ ಮೂಲಕ ಅಸ್ತಿತ್ವಕ್ಕೆ ಬಂದಿತು. ಇದು ಹುಬ್ಬಳ್ಳಿಯಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. ಹುಬ್ಬಳ್ಳಿ, ಮೈಸೂರು ಮತ್ತು ಬೆಂಗಳೂರು ಎಂಬ ಮೂರು ವಿಭಾಗಗಳನ್ನು ಒಳಗೊಂಡಿದೆ. ಕಲಬುರಗಿಯಲ್ಲಿ ನಾಲ್ಕನೇ ವಿಭಾಗವನ್ನು ಹುಬ್ಬಳ್ಳಿ, ಸಿಕಂದರಾಬಾದ್, ಗುಂತಕಲ್ ಮತ್ತು ಸೊಲ್ಲಾಪುರ ವಿಭಾಗಗಳಿಂದ ವಿಂಗಡಿಸಿ ನಾಲ್ಕನೇ ವಿಭಾಗ ಮಾಡಲಾಯಿತು. ಪ್ರಸ್ತುತ ಕಲಬುರಗಿಯಲ್ಲಿನ ವಿಭಾಗೀಯ ಕಛೇರಿಯು ಕಾರ್ಯನಿರ್ವಹಣೆಯ ನಿರ್ಬಂಧಗಳ ಕಾರಣದಿಂದಾಗಿ ಸ್ಥಗಿತಗೊಂಡಿದೆ.












Click it and Unblock the Notifications