ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನ್ ಲಾಕ್ 2 ಘೋಷಣೆಗೆ ಮುನ್ನ ಎದುರಾದ ಹೊಸ ಆತಂಕ

|
Google Oneindia Kannada News

ರಾಜ್ಯದಲ್ಲಿ ಸದ್ಯ ವೀಕೆಂಡ್ ಕರ್ಫ್ಯೂ ಜಾರಿಯಲ್ಲಿದೆ. ಅನ್ ಲಾಕ್ - 1ರಲ್ಲಿ ಏನೇನು ವಿನಾಯತಿ ಇತ್ತೋ, ವೀಕೆಂಡ್ ಕರ್ಫ್ಯೂನಲ್ಲೂ ಇದೆ. ಅಗತ್ಯ ವಸ್ತುಗಳನ್ನು ಖರೀದಿಸಲು ಸಾರ್ವಜನಿಕರಿಗೆ ಮಧ್ಯಾಹ್ನ ಎರಡರ ವರೆಗೂ ಅವಕಾಶ ಕಲ್ಪಿಸಲಾಗಿದೆ.

ಸೋಮವಾರದಿಂದ (ಜೂನ್ 21) ಅನ್ ಲಾಕ್ 2 ಆರಂಭವಾಗಲಿದೆ. ಇನ್ನಷ್ಟು ವಿನಾಯತಿ ಸಿಗುವ ಸಾಧ್ಯತೆ ದಟ್ಟವಾಗಿದೆ. ಶನಿವಾರ (ಜೂನ್ 19) ಸಂಜೆಯ ಹೊತ್ತಿಗೆ ಅನ್ ಲಾಕ್ 2 ಮಾರ್ಗಸೂಚಿ ಹೊರಬೀಳುವ ಸಾಧ್ಯತೆಯಿದೆ.

 ಮುಂದಿನ 6-8 ವಾರಗಳಲ್ಲಿ ಕೊರೊನಾ ಮೂರನೇ ಅಲೆ; ಏಮ್ಸ್‌ ಕೊಟ್ಟ ಸೂಚನೆಗಳು... ಮುಂದಿನ 6-8 ವಾರಗಳಲ್ಲಿ ಕೊರೊನಾ ಮೂರನೇ ಅಲೆ; ಏಮ್ಸ್‌ ಕೊಟ್ಟ ಸೂಚನೆಗಳು...

ಲಾಕ್ ಡೌನ್ ಮುಂದುವರಿದಿರುವ ಹನ್ನೊಂದು ಜಿಲ್ಲೆಗಳಲ್ಲೂ ಅನ್ ಲಾಕ್ ಆಗಲಿದೆ. ಆದರೆ, ದಕ್ಷಿಣ ಕನ್ನಡ ಮತ್ತು ಮೈಸೂರು ಜಿಲ್ಲೆಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಹೊಸ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿಲ್ಲ.

ಆದರೂ, ಸೋಮವಾರದಿಂದ ಬಹುತೇಕ ರಾಜ್ಯ ಅನ್ ಲಾಕ್ ಆಗುವ ಸಾಧ್ಯತೆ ದಟ್ಟವಾಗಿದೆ. ಈ ನಡುವೆ, ಸರಕಾರಕ್ಕೆ ಹೊಸ ಎಚ್ಚರಿಕೆ ಎದುರಾಗಿರುವುದರಿಂದ, ನಿರೀಕ್ಷಿತ ಪ್ರಮಾಣದಲ್ಲಿ ಅನ್ ಲಾಕ್ ಆಗಲಿದೆಯಾ ಅಥವಾ ಸೀಮಿತ ಪ್ರಮಾಣದಲ್ಲಿ ಅನ್ ಲಾಕ್ ಆಗಲಿದೆಯಾ ಎನ್ನುವ ಪ್ರಶ್ನೆ ಎದುರಾಗಿದೆ.

ಲಸಿಕೆ ಪಡೆದ ಆರೋಗ್ಯ ಕಾರ್ಯಕರ್ತರು ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಗಣನೀಯ ಇಳಿಕೆ ಲಸಿಕೆ ಪಡೆದ ಆರೋಗ್ಯ ಕಾರ್ಯಕರ್ತರು ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಗಣನೀಯ ಇಳಿಕೆ

 ಸಚಿವರ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಮಾರ್ಗಸೂಚಿ ಪ್ರಕಟ

ಸಚಿವರ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಮಾರ್ಗಸೂಚಿ ಪ್ರಕಟ

"ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಕೊರೊನಾ ಇಳಿಮುಖವಾಗುತ್ತಿದೆ. ಕೆಲವೊಂದು ವಿನಾಯತಿಗಳನ್ನು ನೀಡಬೇಕಾದ ಅನಿವಾರ್ಯತೆಯಿದೆ. ಸೂಕ್ತ ಮುನ್ನೆಚ್ಚರಿಕೆ ವಹಿಸುವಂತೆ ಸಾರ್ವಜನಿಕರಿಗೆ ಸೂಚಿಸಿ, ಸಚಿವರ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿ ಮಾರ್ಗಸೂಚಿ ಪ್ರಕಟಿಸಲಾಗುವುದು"ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ಆದರೆ..

 ಕೊರೊನಾ ಮೂರನೇ ಅಲೆಯ ಎಚ್ಚರಿಕೆಯನ್ನು ಸರಕಾರಕ್ಕೆ ಈಗಾಗಲೇ ನೀಡಲಾಗಿದೆ

ಕೊರೊನಾ ಮೂರನೇ ಅಲೆಯ ಎಚ್ಚರಿಕೆಯನ್ನು ಸರಕಾರಕ್ಕೆ ಈಗಾಗಲೇ ನೀಡಲಾಗಿದೆ

ಕೊರೊನಾ ಮೂರನೇ ಅಲೆಯ ಎಚ್ಚರಿಕೆಯನ್ನು ಸರಕಾರಕ್ಕೆ ಈಗಾಗಲೇ ನೀಡಲಾಗಿದೆ. ಮಹಾರಾಷ್ಟ್ರದ ಮೂಲಕ ಇದು ರಾಜ್ಯಕ್ಕೆ ಪ್ರವೇಶಿಸಬಹುದು ಮತ್ತು ಆರು ತಿಂಗಳಲ್ಲಿ ಸೋಂಕು ರೂಪಾಂತರಗೊಳ್ಳಲಿದೆ ಎಂದು ತಜ್ಞರು ಹೇಳಿರುವುದು ಸರಕಾರಕ್ಕೆ ಹೊಸ ತಲೆನೋವಾಗಿ ಪರಿಣಮಿಸಿದೆ.

 ಸಿದ್ದ ಉಡುಪು ಕಾರ್ಖಾನೆಗಳಿಗೆ ಶೇ. ಐವತ್ತರಷ್ಟು ಕಾರ್ಯ ನಿರ್ವಹಿಸಲು ಅನುಮತಿ

ಸಿದ್ದ ಉಡುಪು ಕಾರ್ಖಾನೆಗಳಿಗೆ ಶೇ. ಐವತ್ತರಷ್ಟು ಕಾರ್ಯ ನಿರ್ವಹಿಸಲು ಅನುಮತಿ

ಈ ಹೊಸ ಎಚ್ಚರಿಕೆಯಿಂದಾಗಿ ಅನ್ ಲಾಕ್ ಎರಡರಲ್ಲಿ ನೀಡಲು ನಿರ್ಧರಿಸಲಾಗಿದ್ದ ಕೆಲವೊಂದು ವಿನಾಯತಿಗಳನ್ನು ಸರಕಾರ ಹಿಂದಕ್ಕೆ ಪಡೆಯಲಿದೆಯೇ ಎನ್ನುವುದು ಕಾದು ನೋಡಬೇಕಿದೆ. ಕಾರ್ಖಾನೆಗಳಿಗೆ ನೂರಕ್ಕೆ ನೂರು, ಸಿದ್ದ ಉಡುಪು ಕಾರ್ಖಾನೆಗಳಿಗೆ ಶೇ. ಐವತ್ತರಷ್ಟು ಸಿಬ್ಬಂದಿಗಳೊಂದಿಗೆ ಕಾರ್ಯ ನಿರ್ವಹಿಸಲು ಅನುಮತಿ ನೀಡುವ ಸಾಧ್ಯತೆಯಿತ್ತು.

Recommended Video

ವಿಶ್ವನಾಥ್ ನಾಲಿಗೆ ಸರಿ ಇಲ್ಲ ಎಂದ Renukacharya | Oneindia Kannada
 ಪರೀಕ್ಷಾ ಪ್ರಮಾಣವನ್ನು ಹೆಚ್ಚಿಸಲು ಆರೋಗ್ಯ ಇಲಾಖೆ ಯೋಜನೆ

ಪರೀಕ್ಷಾ ಪ್ರಮಾಣವನ್ನು ಹೆಚ್ಚಿಸಲು ಆರೋಗ್ಯ ಇಲಾಖೆ ಯೋಜನೆ

ಕೋವಿಡ್ ಮೂರನೇ ಅಲೆಯನ್ನು ಎದುರಿಸಲು ಸರಕಾರ ಸಿದ್ದತೆ ಮಾಡಿಕೊಳ್ಳುತ್ತಿದೆ. ಪರೀಕ್ಷಾ ಪ್ರಮಾಣವನ್ನು ಹೆಚ್ಚಿಸಲು ಆರೋಗ್ಯ ಇಲಾಖೆ ಯೋಜನೆ ರೂಪಿಸಿಕೊಂಡಿದೆ. ಪ್ರಮುಖವಾಗಿ ಗಡಿಭಾಗದಲ್ಲಿ ಹೆಚ್ಚು ಪರೀಕ್ಷೆ ಮಾಡಲು ಸಿದ್ದತೆಯನ್ನು ಮಾಡಿಕೊಂಡಿದ್ದಾರೆ. ಹೊಸ ಸೋಂಕು ವೇಗವಾಗಿ ಹರಡುವ ಸಾಧ್ಯತೆ ಇರುವುದರಿಂದ, ಹೆಚ್ಚಿನ ಅಲ್ ಲಾಕ್ ರಿಯಾಯತಿ ಸಿಗುವ ಸಾಧ್ಯತೆ ಕಮ್ಮಿಯಾದರೂ ಆಗಬಹುದು.

English summary
Karnataka Unlock 2.0 Guidelines: Decision on further relaxations today, says CM BS Yediyurappa
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X