• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೇಂದ್ರ ಸರ್ಕಾರದಿಂದ ನಮ್ಮ ಫೋನ್ ಟ್ಯಾಪ್ ; ದಿನೇಶ್ ಗುಂಡೂರಾವ್

|
   ಕೇಂದ್ರ ಸರ್ಕಾರದಿಂದ ನಮ್ಮ ಫೋನ್ ಟ್ಯಾಪ್ ; ದಿನೇಶ್ ಗುಂಡೂರಾವ್

   ಬೆಂಗಳೂರು, ಆಗಸ್ಟ್ 16 : "ಕೇಂದ್ರ ಸರ್ಕಾರ ನಮ್ಮ ಫೋನ್ ಟ್ಯಾಪ್ ಮಾಡುತ್ತಿದೆ. ಇಂದಿಗೂ ನಮ್ಮ ಫೋನ್ ಕದ್ದಾಲಿಕೆ ನಡೆಯುತ್ತಿದೆ" ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪಿಸಿದರು.

   ಬೆಂಗಳೂರಿನಲ್ಲಿ ಶುಕ್ರವಾರ ಮಾತನಾಡಿದ ಅವರು, " ಕೇಂದ್ರ ಸರ್ಕಾರ ಇಂದಿಗೂ ನಮ್ಮ ಫೋನ್ ಕದ್ದಾಲಿಕೆ ಮಾಡುತ್ತಿದೆ. ಆರೋಪ ಮಾಡುತ್ತಿರುವುದು ಬಿಜೆಪಿಯವರು. ಸರ್ಕಾರ ನಿಮ್ಮದೇ ಇದೆ, ತನಿಖೆ ಮಾಡಿಸಿ" ಎಂದು ಒತ್ತಾಯಿಸಿದರು.

   ಪೋನ್ ಕದ್ದಾಲಿಕೆ: ಕುಮಾರಸ್ವಾಮಿ ವಿರುದ್ಧ ವಿಶ್ವನಾಥ್ ಗರಂ

   "ನಮ್ಮ ಸರ್ಕಾರದ ಜನಪರ ಕಲ್ಯಾಣ ಯೋಜನೆಗಳನ್ನು ಕಡಿತಗೊಳಿಸುವುದು ಸರಿಯಲ್ಲ. ಬಡಜನರ ಯೋಜನೆ ಕಡಿತಕ್ಕೆ ಕೈಹಾಕಿರುವುದು ತಪ್ಪು . ಸರ್ಕಾರ ಇಂತಹ ಕೆಲಸವನ್ನು ಮಾಡಬಾರದು. ಶೇ 50ರಷ್ಟು ತಾಲೂಕು ಬರಪೀಡಿತವಾಗಿವೆ. ಅನ್ನಭಾಗ್ಯ ಯೋಜನೆ ಬಡ ಕುಟುಂಬಕ್ಕೆ ಆಧಾರವಾಗಿದೆ" ಎಂದರು.

   ಟೆಲಿಫೋನ್ ಕದ್ದಾಲಿಕೆ ಪ್ರಕರಣ: ಸಂಕಷ್ಟದಲ್ಲಿ ಕುಮಾರಸ್ವಾಮಿ

   "ಅನ್ನಭಾಗ್ಯ ಯೋಜನೆ ರದ್ಧು ಪಡಿಸಿದರೆ ನಾವು ಸುಮ್ಮನಿರುವುದಿಲ್ಲ. ಅನ್ನಭಾಗ್ಯ, ಇಂದಿರಾ ಕ್ಯಾಂಟೀನ್ ಯೋಜನೆ ರದ್ದುಪಡಿಸಿದರೆ ಅದು ಸರ್ಕಾರದ ಜನವಿರೋಧಿ ಕ್ರಮವಾಗಲಿದೆ. ಯೋಜನೆಯನ್ನು ಮುಂದುವರೆಸಲು ಕೇಂದ್ರ ಸರ್ಕಾರದಿಂದ ಅನುದಾನ ತರಿಸಿಕೊಳ್ಳಿ" ಎಂದು ದಿನೇಶ್ ಗುಂಡೂರಾವ್ ಸಲಹೆ ನೀಡಿದರು.

   ಫೋನ್ ಕದ್ದಾಲಿಕೆ ಆರೋಪ: ಕುಮಾರಸ್ವಾಮಿ ಸ್ಪಷ್ಟನೆ

   ಸಂಪುಟ ವಿಸ್ತರಣೆ ಆಗದ ಬಗ್ಗೆ ಮಾತನಾಡಿದ ದಿನೇಶ್ ಗುಂಡೂರಾವ್, "ಒಬ್ಬರೇ ತಿರುಗಾಡಿ ಸರಿ ಮಾಡುತ್ತೇವೆ ಅಂದರೆ ಸಾಧ್ಯವಾಗುವುದಿಲ್ಲ. ಸಂಪುಟವಿಲ್ಲದೆ ಆಡಳಿತ ನಡೆಸಿದ್ದು ಇದೇ ಮೊದಲು 30 ವರ್ಷದಲ್ಲಿ ದಾಖಲೆಯನ್ನು ಮಾಡಿದ್ದೀರಿ" ಎಂದು ಯಡಿಯೂರಪ್ಪಗೆ ಟಾಂಗ್ ನೀಡಿದರು.

   "ದೆಹಲಿಗೆ ಭೇಟಿ ನೀಡಿ ಪ್ರಧಾನಿ ಭೇಟಿ ಮಾಡಿದ್ದೀರಿ. ಆದರೆ ಇನ್ನೂ ಕಚೇರಿಯಿಂದ ಒಂದು ಮಾಹಿತಿ ಹೊರ ಬಿದ್ದಿಲ್ಲ ಪ್ರಧಾನಿ ಭೇಟಿಯಾದರೆ ಸಾಲದು. ಹೆಚ್ಚಿನ ಅನುದಾನವನ್ನು ತನ್ನಿ. ನೀವು ಪ್ರಧಾನಿ ಅವರನ್ನು ರಾಜ್ಯಕ್ಕೆ ಕರೆತರಬೇಕಿತ್ತು" ಎಂದು ಹೇಳಿದರು.

   English summary
   KPCC president Dinesh Gundu Rao alleged that Union government tapping our phone. BJP govt should conduct probe on it and take action he demanded.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X