Uninstall Phonepe: ಫೋನ್‌ಪೆ ಸಿಇಒ ಸಮೀರ್ ನಿಗಮ್‌ ವಿರುದ್ಧ ಸಿಟ್ಟಿಗೆದ್ದ ಕನ್ನಡಿಗರು

ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ಮಸೂದೆ ತರಲು ಹೊರಟಿದ್ದ ಕರ್ನಾಟಕ ಸರ್ಕಾರವನ್ನು ಟೀಕಿಸಿದ್ದ ಪೋನ್‌ಪೆ ಸಂಸ್ಥೆಯ ಸಿಇಒ ಸಮೀರ್ ನಿಗಮ್ ವಿರುದ್ಧ ಕನ್ನಡಿಗರು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದು, ಫೋನ್‌ಪೆ ಅಪ್ಲಿಕೇಷನ್‌ ಅನ್ನು ಮೊಬೈಲ್‌ನಿಂದ ತೆಗೆದುಹಾಕುತ್ತಿದ್ದಾರೆ.

ಕರ್ನಾಟಕ ಸರ್ಕಾರ ಖಾಸಗಿ ವಲಯದಲ್ಲಿ ಮೀಸಲಾತಿ ತರುವ ಮಸೂದೆ ತರುವ ನಿರ್ಧಾರ ಹೊರಬೀಳುತ್ತಿದ್ದಂತೆ ಹಲವು ಕಂಪನಿಗಳು ವಿರೋಧ ವ್ಯಕ್ತಪಡಿಸಿವೆ, ತಾತ್ಕಾಲಿಕವಾಗಿ ಮಸೂದೆ ತಡೆಹಿಡಿದಿದ್ದು, ಶೀಘ್ರದಲ್ಲೇ ಮಸೂದೆ ಜಾರಿ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Uninstall Phonepe Trends After CEO Criticises Karnataka Quota Bill

ಫೋನ್‌ಪೆ ಸಿಇಒ ಸಮೀರ್ ಟ್ವೀಟ್ ಮಾಡಿ, ಕರ್ನಾಟಕ ಸರ್ಕಾರದ ನಿರ್ಧಾರವನ್ನು ಟೀಕಿಸಿದ್ದಾರೆ. ನನಗೆ 46 ವರ್ಷ. 15ಕ್ಕಿಂತ ಹೆಚ್ಚು ವರ್ಷಗಳ ಕಾಲ ರಾಜ್ಯದಲ್ಲಿ ಎಂದಿಗೂ ವಾಸಿಸಲಿಲ್ಲ. ನನ್ನ ತಂದೆ ಭಾರತೀಯ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದರು. ದೇಶದಾದ್ಯಂತ ಅವರಿಗೆ ಪೋಸ್ಟಿಂಗ್ ಮಾಡಲಾಗಿದೆ. ಅವರ ಮಕ್ಕಳು ಕರ್ನಾಟಕದಲ್ಲಿ ಉದ್ಯೋಗಕ್ಕೆ ಅರ್ಹರಲ್ಲವೇ? ನಾನು ಕಂಪನಿಗಳನ್ನು ನಿರ್ಮಿಸುತ್ತೇನೆ. ಭಾರತದಾದ್ಯಂತ 25000+ ಉದ್ಯೋಗಗಳನ್ನು ಸೃಷ್ಟಿಸಿದೆ! ನನ್ನ ಮಕ್ಕಳು ತಮ್ಮ ತವರು ನಗರದಲ್ಲಿ ಉದ್ಯೋಗಕ್ಕೆ ಅರ್ಹರಲ್ಲವೇ? ಇದು ಅವಮಾನ ಎಂದು ಹೇಳಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ "ಕರ್ನಾಟಕ ಎಂದರೆ ಕನ್ನಡ ಮಾತನಾಡುವ ಜನರು ಮಾತ್ರ ಮೀಸಲಾತಿ ಪಡೆಯುವುದೇ? ನಾನು ಭಾರತದಲ್ಲಿ ಎಲ್ಲಿ ಬೇಕಾದರೂ ಕೆಲಸ ಮಾಡಬಹುದು. ನಾನು ಬಯಸುವ ಯಾವುದೇ ಭಾಷೆಯನ್ನು ನಾನು ಕಲಿಯಬಲ್ಲೆ. ಭಾರತದ ಸಂವಿಧಾನ ನನಗೆ ಈ ಹಕ್ಕುಗಳನ್ನು ನೀಡಿದೆ. ಇದು ನನ್ನ ಆಯ್ಕೆ. ನೀವು ಅಳಬಹುದು" ಎಂದು ವ್ಯಂಗ್ಯವಾಗಿ ಟ್ವಿಟ್ ಮಾಡಿದ್ದು ಕನ್ನಡಿಗರನ್ನು ಕೆರಳಿಸಿದೆ.

ಇಲ್ಲಿನ ನೆಲ, ನೀರು, ಸೌಲಭ್ಯಗಳನ್ನು ಪಡೆದುಕೊಂಡು, 15 ವರ್ಷಗಳಿಂದ ರಾಜ್ಯದಲ್ಲಿ ಇದ್ದರೂ ಕನ್ನಡವನ್ನು ಕಲಿಯುವ ಪ್ರಯತ್ನ ಕೂಡ ಮಾಡದೇ ಈಗ ಕನ್ನಡಿಗರನ್ನೇ ಅವಮಾನಿಸಿದ್ದಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ.

ಅನ್‌ಇನ್‌ಸ್ಟಾಲ್ ಫೋನ್‌ಪೆ ಅಭಿಯಾನ

ಸಮೀರ್ ನಿಗಮ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಕನ್ನಡಿಗರು ತಾವು ಬಳಸುವ ಫೋನ್‌ಪೆ ಅಪ್ಲಿಕೇಶನ್ ಅನ್ನು ಅನ್‌ಇನ್‌ಸ್ಟಾಲ್ ಮಾಡುವಂತೆ ಅಭಿಯಾನ ಆರಂಭಿಸಿದ್ದಾರೆ. ಎಕ್ಸ್‌ನಲ್ಲಿ ಅಭಿಯಾನ ಆರಂಭಿಸಿದ್ದು ಸದ್ಯ ಟ್ರೆಂಡಿಂಗ್‌ ಆಗಿದೆ.

ಸಾವಿರಾರು ಕನ್ನಡಿಗರು ಫೋನ್‌ಪೆ ಅನ್‌ಇನ್‌ಸ್ಟಾಲ್‌ ಮಾಡುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದು, ನಮಗೆ ಬೇಕಾದ ಆಪ್ ಬಳಸುವ ಸ್ವಾತಂತ್ರವನ್ನು ಸಂವಿಧಾನ ನಮಗೆ ಕೊಟ್ಟಿದೆ ಎಂದು ಸಮೀರ್ ಟ್ವೀಟ್‌ಗೆ ಉತ್ತರ ಕೊಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+