ಏಕರೂಪ ನಾಗರಿಕ ಸಂಹಿತೆ ದೇಶ ಒಡೆಯಲು ಮಾತ್ರ: ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು ಮೇ 2:'ಸಮಾಜ ಮತ್ತು ದೇಶವನ್ನು ಒಡೆಯುವುದು ಬಿಜೆಪಿಯ ಉದ್ದೇಶ. ಸಮಾಜದ ಬೆಳವಣಿಗೆಗೆ ಯಾವತ್ತೂ ಬಿಜೆಪಿ ಕೆಲಸ ಮಾಡಿಲ್ಲ. ಪಕ್ಷದ ಪ್ರಣಾಳಿಕೆಯು ದೇಶವನ್ನು ಒಡೆಯುವ ಗುರಿಯನ್ನು ಹೊಂದಿರುವ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೆ ತರುವುದಾಗಿ ಭರವಸೆ ನೀಡುತ್ತದೆ. ಇದು ಕೇಸರಿ ಪಕ್ಷದ ಪರ ಧ್ರುವೀಕರಣಕ್ಕಾಗಿ ಮಾತ್ರ ರಚನೆಯಾದ ಪ್ರಣಾಳಿಕೆ' ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಆರೋಪಿಸಿದರು.

ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಖರ್ಗೆ, ಲೋಕಸಭೆಯಲ್ಲಿ ನಮ್ಮ ಪಕ್ಷ ಈ ವಿಷಯವನ್ನು ಪ್ರಸ್ತಾಪಿಸುತ್ತದೆ. ಮೋದಿ ಸರ್ಕಾರ ನಾಲ್ಕು ಕಾರ್ಮಿಕ ಕಾನೂನುಗಳನ್ನು ಮಾರ್ಪಡಿಸಿದೆ ಎಂದು ಟೀಕಿಸಿದರು. ಇದರಿಂದ ಕಾರ್ಮಿಕ ವರ್ಗದವರಿಗೆ ತೊಂದರೆಯಾಗುತ್ತಿದೆ. ಕೇಂದ್ರ ಸರ್ಕಾರ ಅವರಿಗೆ ಸಾಮಾಜಿಕ ಭದ್ರತೆಯ ಪರಿಕಲ್ಪನೆಯನ್ನು ಕಡೆಗಣಿಸಿದೆ ಎಂದರು.

Uniform Civil Code will only break the country: Mallikarjuna Kharge

ಬಿಜೆಪಿ ಪ್ರಣಾಳಿಕೆಯಲ್ಲಿ ಏನಿದೆ?

ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ಉನ್ನತ ಮಟ್ಟದ ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ಕರ್ನಾಟಕದಲ್ಲಿ ಏಕರೂಪ ನಾಗರಿಕ ಸಂಹಿತೆ ( Uniform Civil Code) ಜಾರಿಗೊಳಿಸುವುದಾಗಿ ಬಿಜೆಪಿ ಹೇಳಿದೆ.

ಏನಿದು ಏಕರೂಪ ನಾಗರಿಕ ಸಂಹಿತೆ?

ವಕೀಲರಾದ ಅನುರಾಗ್ ಅವರು ವಿವರಿಸುವಂತೆ, 'ಇಸ್ಲಾಂನಲ್ಲಿ ವಿಚ್ಛೇದನಕ್ಕೆ ಸಂಬಂಧಿಸಿದಂತೆ ಪುರುಷರಿಗೆ ಹೆಚ್ಚಿನ ಹಕ್ಕುಗಳಿವೆ. ಮಹಿಳೆಯರ ಹಕ್ಕುಗಳು ಬಹಳ ಸೀಮಿತವಾಗಿವೆ. ಇಸ್ಲಾಂನಲ್ಲಿ ಪ್ರೌಢಾವಸ್ಥೆಯ ವಯಸ್ಸು ಮತ್ತು ವಿವಾಹದ ನಿಯಮಗಳು ಇತರ ಧರ್ಮಗಳಿಗಿಂತ ಭಿನ್ನವಾಗಿವೆ. ಏಕರೂಪ ನಾಗರಿಕ ಸಂಹಿತೆ ಜಾರಿಯಾದರೆ, ಮದುವೆ ಮತ್ತು ಭೂಮಿ-ಆಸ್ತಿ ಮತ್ತು ಉಯಿಲಿಗೆ ಸಂಬಂಧಿಸಿದಂತೆ ಒಂದೇ ಕಾನೂನನ್ನು ಎಲ್ಲರೂ ಪಾಲಿಸಬೇಕಾಗುತ್ತದೆ. ಪ್ರಸ್ತುತ, ಧರ್ಮಗಳ ವಿವಿಧ ಕಾನೂನುಗಳಿವೆ, ಅದರ ಪ್ರಕಾರ ನ್ಯಾಯಾಲಯಗಳಲ್ಲಿ ಪ್ರಕರಣಗಳು ನಡೆಯುತ್ತಿವೆ. ಏಕರೂಪ ನಾಗರಿಕ ಸಂಹಿತೆ ಜಾರಿಯಾದರೆ ವೈಯಕ್ತಿಕ ಕಾನೂನುಗಳು ಕೊನೆಗೊಳ್ಳುತ್ತವೆ'. ಇದಕ್ಕೆ ಸದ್ಯ ತೀವ್ರ ವಿರೋಧ ವ್ಯಕ್ತವಾಗಿದೆ. ಜೊತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ.

''ದಿನದ 8 ರಿಂದ 12 ಗಂಟೆ ಕೆಲಸದ ಸಮಯವನ್ನು ಬಂಡವಾಳಶಾಹಿಗಳು ಮತ್ತು ಕಾರ್ಪೊರೇಟ್‌ಗಳಿಗೆ ಅನುಕೂಲವಾಗುವಂತೆ ವಿಸ್ತರಿಸಲಾಗಿದೆ. ಕೆಲಸದ ಸಮಯವನ್ನು ಹೆಚ್ಚಿಸಲಾಗಿದೆ. ಮಹಿಳೆಯರಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ಅವಕಾಶವಿದೆ. ಮಹಿಳೆಯರ ಸುರಕ್ಷತೆಯನ್ನು ಪರಿಗಣಿಸಿ ಈ ಹಿಂದೆ ಅನುಮತಿ ನೀಡಿರಲಿಲ್ಲ. ಸರ್ಕಾರ ಬಲವಂತವಾಗಿ ಇಂತಹ ಕಾನೂನು ತರುತ್ತಿದೆ. ಏಕರೂಪ ನಾಗರಿಕ ಸಂಹಿತೆ ದೇಶ ಒಡೆಯಲು ಮಾತ್ರ' ಎಂದು ಖರ್ಗೆ ಆರೋಪಿಸಿದರು.

Uniform Civil Code will only break the country: Mallikarjuna Kharge

ಪಿಎಫ್ ಹಣದ ಮೇಲಿನ ಬಡ್ಡಿ ದರವನ್ನು 9ರಿಂದ ಶೇ.8.75ಕ್ಕೆ ಇಳಿಸಲಾಗಿದೆ.ಇದಲ್ಲದೆ ಕಾರ್ಮಿಕರ ಶ್ರಮದ ಹಣವನ್ನು ಷೇರುಪೇಟೆಯಲ್ಲಿ ಹೂಡಿಕೆ ಮಾಡಲಾಗಿದೆ ಎಂದು ಹೇಳಿದರು. "ಅವರ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಏಕೆ ಹೂಡಿಕೆ ಮಾಡಲಾಗುತ್ತಿದೆ? ಷೇರುಪೇಟೆ ಕುಸಿದರೆ ಯಾರು ಹೊಣೆ? ಕೇಂದ್ರ ಜಾರಿಗೆ ತಂದಿರುವ ನಾಲ್ಕು ಕಾನೂನುಗಳು ಕಾರ್ಮಿಕರ ವಿರುದ್ಧವಾಗಿದೆ. ಇದರ ವಿರುದ್ಧ ಸಂಸತ್ತಿನಲ್ಲಿ ಹೋರಾಟ ನಡೆಸಿದ್ದೇವೆ. ಆದರೆ ಸರ್ಕಾರ ಅದನ್ನು ವಾಪಸ್ ತೆಗೆದುಕೊಂಡಿಲ್ಲ' ಎಂದರು.

"ಶ್ರೀಮಂತರ ಆದಾಯವು 70% ಹೆಚ್ಚಾಗಿದೆ, ಆದರೆ ಕಾರ್ಮಿಕರ ವೇತನ ಕೇವಲ 5% ಹೆಚ್ಚಾಗಿದೆ. ಕೇಂದ್ರದ ಆದೇಶವನ್ನು ರಾಜ್ಯದಲ್ಲಿ ಬಿಜೆಪಿ ಸರಕಾರ ಪಾಲಿಸುತ್ತಿದೆ. ಕಾಂಗ್ರೆಸ್ ಸರ್ಕಾರ ರಾಜಸ್ಥಾನದಲ್ಲಿ ಕೇಂದ್ರ ಜಾರಿಗೊಳಿಸಿರುವ ಕಾರ್ಮಿಕ ವಿರೋಧಿ ಕಾನೂನನ್ನು ಅಂಗೀಕರಿಸಿಲ್ಲ ಅಥವಾ ಜಾರಿಗೊಳಿಸಿಲ್ಲ" ಎಂದು ಅವರು ಹೇಳಿದರು.

ಕಾರ್ಮಿಕರಿಗೆ ಇಎಸ್‌ಐ ಆಸ್ಪತ್ರೆ ಸೌಲಭ್ಯ, ಸಾಮಾಜಿಕ ಭದ್ರತೆ ಮತ್ತು ಆರೋಗ್ಯ ವಿಮಾ ಯೋಜನೆ ಸೇರಿದಂತೆ ಕಾರ್ಮಿಕ ಸಚಿವರಾಗಿದ್ದಾಗ ತಾವು ಜಾರಿಗೆ ತಂದ ಜನಪರ ಯೋಜನೆಗಳನ್ನು ಈ ಸಮಯದಲ್ಲಿ ಮೆಲುಕು ಹಾಕಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+