ದಲಿತ ನಾಯಕರ ವಿರೋಧದ ನಡುವೆಯೂ ಎಂಎಲ್ಸಿ ಆದ ಸುಧಾಮ್ ದಾಸ್; ಮೂವರಿಂದ ಪ್ರಮಾಣ ವಚನ
ಬೆಂಗಳೂರು, ಆಗಸ್ಟ್ 31: ಕಾಂಗ್ರೆಸ್ ನ ದಲಿತ ನಾಯಕರ ವಿರೋಧದ ನಡುವೆಯೂ ಹೆಚ್ ಪಿ ಸುದಾಮ್ ದಾಸ್ ಅವರು ವಿಧಾನ ಪರಿಷತ್ ನ ನೂತನ ಸದಸ್ಯರಾಗಿ ಗುರುವಾರ ವಿಧಾನಸೌಧದಲ್ಲಿ ಪ್ರಮಾಣ ವಚನ ಮಾಡಿದ್ದರು.
ವಿಧಾನಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ ಸರಳ ಸಮಾರಂಭದಲ್ಲಿ ಕರ್ನಾಟಕ ವಿಧಾನ ಪರಿಷತ್ ನ ನೂತನ ಸದಸ್ಯರಾಗಿ ಉಮಾಶ್ರೀ, ಎಮ್ ಆರ್ ಸೀತಾರಾಮ್ ಮತ್ತು ಹೆಚ್ ಪಿ ಸುದಾಮ್ ದಾಸ್ ಅವರು ಪ್ರಮಾಣವಚನ ಸ್ವೀಕರಿಸಿದರು. ಈ ವೇಳೆ ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರುಗಳಾದ ಹೆಚ್ ಕೆ ಪಾಟೀಲ್, ಬೋಸರಾಜು ಸೇರಿದಂತೆ ಹಲವು ಶಾಸಕರುಗಳು, ನೂತನ ಶಾಸಕರುಗಳ ಕುಟುಂಬ ಸದಸ್ಯರು ಮತ್ತು ಅಭಿಮಾನಿಗಳು ಉಪಸ್ಥಿತರಿದ್ದರು.

ಈ ವೇಳೆ ನೂತನ ಪರಿಷತ್ ಸದಸ್ಯ ಸುಧಾಮ್ ದಾಸ್ ಮಾತನಾಡಿ, ನನಗೆ ಬಹಳ ಸಂತೋಷ ಆಗುತ್ತಿದೆ. ನನ್ನ ಮೇಲೆ ಭರವಸೆ ಇಟ್ಟು ಪಕ್ಷ ಆಯ್ಕೆ ಮಾಡಿದೆ, ಇದು ಗುರುತರವಾದ ಜವಾಬ್ದಾರಿ ಅಂತ ಪರಿಗಣಿಸಿದ್ದೇನೆ. ಉನ್ನತ ವ್ಯಕ್ತಿಗಳು ಅಲಂಕರಿಸಿದ ಸ್ಥಾನದಲ್ಲಿ ನನಗೆ ಅವಕಾಶ ಸಿಕ್ಕಿದೆ. ಈ ಸ್ಥಾನಕ್ಕೆ ಸಂಪೂರ್ಣವಾಗಿ ನ್ಯಾಯ ಒದಗಿಸುತ್ತೇನೆ. ಸರ್ಕಾರಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಅನುಭವ ಇಲ್ಲಿ ಉಪಯೋಗಿಸಿಕೊಳ್ಳುತ್ತೇನೆ. ಇನ್ನೂ ಕೆಲ ಸಚಿವರು ಅಸಮಾಧಾನ ವ್ಯಕ್ತಪಡಿಸಿದ ವಿಚಾರವಾಗಿ ಮಾತನಾಡಿ, ಇದು ಸಹಜ ಅಲ್ವಾ? ಖಂಡಿತ ಈಗ ಎಲ್ಲರೂ ಆಶೀರ್ವಾದ ಮಾಡಿದ್ದಾರೆ ಈಗ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರು.
ಇನ್ನೂ ಈ ವೇಳೆ ಉಮಾಶ್ರೀ ಮಾತನಾಡಿ, ನಮ್ಮ ಪಕ್ಷದ ವರಿಷ್ಠರು, ಸಿಎಂ ಸಿದ್ದರಾಮಯ್ಯ, ಮಲ್ಲಿಕಾರ್ಜುನ್ ಖರ್ಗೆ, ಡಿಸಿಎಂ ಡಿ ಕೆ ಶಿವಕುಮಾರ್ ಅವ್ರು ಎಲ್ಲರೂ ಕೂಡಿ ಆಶೀರ್ವಾದ ಮಾಡಿದ್ದಾರೆ ಎಲ್ಲರಿಗೂ ಕೃತಜ್ಞತೆ ಅರ್ಪಿಸುತ್ತಿದ್ದೇನೆ. ಸಿದ್ದರಾಮಯ್ಯನವ್ರನ್ನ ಎಲ್ಲಾರು ಪ್ರೀತಿಸ್ತಾರೆ, ಗೌರವಿಸುತ್ತಾರೆ. ಸಿದ್ದರಾಮಯ್ಯನವ್ರ ಕಾಲದಲ್ಲೇ ಸ್ಥಾನ ಸಿಕ್ಕಿರೋದು ನನ್ನ ಸಂತೋಷ ಎಂದು ಹೇಳಿದರು.
ಗೃಹಲಕ್ಷ್ಮೀ ಯೋಜನೆ ಜಾರಿ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಮ್ಮ ಈ ಸರ್ಕಾರ ನುಡಿದಂತೆ ನಡೆದ ಸರ್ಕಾರ. ಚುನಾವಣಾ ಪೂರ್ವದಲ್ಲಿ ಗ್ಯಾರಂಟಿ ಯೋಜನೆಯನ್ನ ಹೇಳಿದ್ವಿ ಪ್ರತಿಯೊಂದು ಯೋಜನೆಯನ್ನ ಹಂತಹಂತವಾಗಿ ಜಾರಿ ಮಾಡುತ್ತಿದ್ದೇವೆ. ಬುಧವಾರ ಗೃಹಲಕ್ಷ್ಮೀ ಯೋಜನೆ ಜಾರಿಯಾಗಿದೆ. ಇದು ಬಹಳ ಅನುಕೂಲಕರವಾದ ಯೋಜನೆ, ಯಾವುದೇ ಮಹಿಳೆಗೆ 2000 ಸಾವಿರ ಸಿಗುತ್ತೆ ಅಂದ್ರೆ ಬಹಳ ಅನುಕೂಲವಾಗುತ್ತದೆ. ಗೃಹಜ್ಯೋತಿ ಕೂಡ ಅಷ್ಟೇ ಅನೂಕೂಲ ಆಗುತ್ತೆ. ಮುಂದೆ ಯುವಕರಿಗೆ ಕೂಡ ಯೋಜನೆ ತರುತ್ತೇವೆ.
ಇನ್ನೂ ವಿಧಾನ ಪರಿಷತ್ ಸ್ಥಾನಕ್ಕೆ ತೃಪ್ತಿಯೇ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ನೂತನ ಪರಿಷತ್ ಸದಸ್ಯ ಉಮಾಶ್ರೀ ಮಾತನಾಡಿ, ಸ್ಥಾನದಲ್ಲಿ ಸಣ್ಣದು ದೊಡ್ಡದು ಎಂಬುದು ಇಲ್ಲ ಕೊಟ್ಟಿರೋ ಸ್ಥಾನವನ್ನ ಸರ್ಮಥವಾಗಿ ನಿಭಾಯಿಸಬೇಕು ಎಂದು ಹೇಳಿದರು.












Click it and Unblock the Notifications