ಅಜ್ಜಯ್ಯನ ಜಾತ್ರೆಗೆ ಉಕ್ಕಡಗಾತ್ರಿ ಸಂಪೂರ್ಣ ಸಜ್ಜು: ಒಂದು ವಾರ ನಡೆಯುವ ಜಾತ್ರೆಯ ಸಂಪೂರ್ಣ ವಿವರ
ಅಜ್ಜಯ್ಯನ ಜಾತ್ರೆಗೆ ಭಾಗವಹಿಸುವ ಭಕ್ತಾದಿಗಳಿಗೂ ವಿಶೇಷ ವ್ಯವಸ್ಥೆಯನ್ನ ಕಲ್ಪಸಲಾಗಿದೆ.
ದಾವಣಗೆರೆ,ಫೆಬ್ರವರಿ20: ದಕ್ಷಿಣ ಭಾರತದ ಕಾಶಿ ಕ್ಷೇತ್ರವೆನಿಸಿಕೊಂಡಿರುವ ಉಕ್ಕಡಗಾತ್ರಿ ಶ್ರೀ ಕರಿಬಸವೇಶ್ವರಸ್ವಾಮಿ ಗದ್ದಿಗೆಯ ಮಹಾಶಿವರಾತ್ರಿ ಜಾತ್ರಾ ಮಹೋತ್ಸವ ನಡೆಯಲಿದ್ದು, ಅಜ್ಜಯ್ಯನ ಜಾತ್ರೆಗೆ ಉಕ್ಕಡಗಾತ್ರಿ ಸಂಪೂರ್ಣ ಸಜ್ಜಾಗಿದೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿ ಉಕ್ಕಡಗಾತ್ರಿಯಲ್ಲಿ ಅಜ್ಜಯ್ಯನ ಜಾತ್ರೆಗೆ ಸಂಪೂರ್ಣ ಸಿದ್ದತೆ ನಡೆದಿದ್ದು, ಒಂದು ವಾರಗಳ ಕಾಲ ನಡೆಯುವ ಜಾತ್ರೆಗೆ ರಾಜ್ಯದೆಲ್ಲೆಡೆಯಿಂದ ಸಾವಿರರು ಭಕ್ತರು ಹರಿದುದ ಬರುತ್ತಿದ್ದಾರೆ. ಅಜ್ಜಯ್ಯನ ಜಾತ್ರೆಗೆ ಭಾಗವಹಿಸುವ ಭಕ್ತಾದಿಗಳಿಗೂ ದರ್ಶನದ ವ್ಯವಸ್ಥೆ ಮಾಡಲಾಗಿದೆ.
ಇನ್ನೂ ಅಜ್ಜಯ್ಯನ ಜಾತ್ರೆ ಹಿನ್ನೆಲೆ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ಇರುಮುಡಿ ಹೊತ್ತು ಮಾಲಾಧಾರಿಗಳು ಅಜ್ಜಯ್ಯನ ಸನ್ನಿದಿಗೆ ಬಂದು ಹರಕೆ ಸಲ್ಲಿಸುತ್ತಾರೆ.
ಇನ್ನೂ ಶ್ರೀ ಕರಿಬಸವೇಶ್ವರ ಗದ್ದಿಗೆ ಟ್ರಸ್ಟ್ ಕಮಿಟಿ, ಅಜ್ಜಯ್ಯನ ಜಾತ್ರೆಗೆ ಬರುವ ಭಕ್ತಾಧಿಗಳು ಉಳಿದುಕೊಳ್ಳಲು ತುಂಬಾಭದ್ರಾ ನಿಲಯ, ಶ್ರೀ ಕರಿಬಸವೇಶ್ವರ ಗದ್ದಿಗೆ ಕಲ್ಯಾಣ ಮಂಟಪ್ಪ ಹಾಗೂ ಶ್ರೀ ಕರಿಬಸವೇಶ್ವರ ಪ್ರೌಢ ಶಾಲೆಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ.

ಜಾತ್ರೆಗೆ ಆಗಮಿಸುವ ಭಕ್ತಾಧಿಗಳಿಗೆ ಪಂಕ್ತಿ ಊಟದಿಂದ ನೂಕು ನುಗ್ಗಲು ನಿಯಂತ್ರಿಸಲು ದಾಸೋಹ ಮಂದಿರದ ಪಕ್ಕದಲ್ಲೇ ಬಫೆ ಊಟಕ್ಕೆ ಸಾಲಾಗಿ ಬರಲು ವ್ಯವಸ್ಥೆ ಕಲ್ಪಿಸಲಾಗಿದೆ. ಅಡುಗೆ ತಯಾರಿಕೆಗಾಗಿ 25 ಅಡುಗೆ ಭಟ್ಟರು, 26 ಸಫಾಯಿ ಕರ್ಮಚಾರಿಗಳು ನದಿ ಪಾತ್ರ ಹಾಗೂ ದೇವಾಲಯದ ಆವರಣದಲ್ಲಿ ಸ್ವಚ್ಛತೆ ಕಾರ್ಯದಲ್ಲಿ ತೊಡಗಿದ್ದಾರೆ. ಸ್ವಚ್ಛತೆ ಕಾಪಾಡುವ ಉದ್ದೇಶದಿಂದ ಸಾರ್ವಜನಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಇನ್ನೂ ಜಾತ್ರೆಗೆ ಹೆಚ್ಚಿನ ಭದ್ರತೆಯ ದೃಷ್ಟಿಯಿಂದಾಗಿ ಅಗ್ನಿಶಾಮದ ದಳದ ವಾಹನ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಪೊಲೀಸರು ಭದ್ರತೆ ಒದಗಿಸಿದ್ದಾರೆ.
ಅಜ್ಜಯ್ಯನ ಜಾತ್ರೆ ಕಾರ್ಯಕ್ರಮಗಳ ವಿವರ
ಫೆ.20: ಶ್ರೀ ಕರಿಬಸವೇಶ್ವರ ಗದ್ದಿಗೆ ಪೂಜೆ, ನಂದಿ ಧ್ವಜಾರೋಹಣ, ರಾತ್ರಿ ಜಾಗರಣೆ ನಡೆಯಲಿದೆ.
ಫೆ.21: ಬೆಳಗ್ಗೆ 8ಗಂಟೆಗೆ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ರಥಕ್ಕೆ ಪೂಜೆ ಸಲ್ಲಿಸಿ ಅಜ್ಜಯ್ಯನ ರಥೋತ್ಸವ ಚಾಲನೆ
ಫೆ.22: ಜವಳ, ಹರಿಕೆ, ತುಲಾಭಾರ.
ಫೆ.23: ಕಾಣಿಕೆ, ಜವಳ, ತುಲಾಭಾರ, ಕುಸ್ತಿಗಳು.
ಫೆ.24: ಕಾಣಿಕೆ ಒಪ್ಪಿಸುವುದು, ಕುಸ್ತಿಗಳು.
ಫೆ.25 : ಪೂಜೆಯ ನಂತರ ಫಳಾರ ಹಾಕಿಸುವುದು. ಬೆಳಗ್ಗೆ 10ಕ್ಕೆ ಶ್ರೀಸ್ವಾಮಿಗೆ ರಾಜೋಪಚಾರ ಪೂಜೆ.
ಫೆ.26: ಬೆಳಗ್ಗೆ 10ಕ್ಕೆ ಅಜ್ಜಯ್ಯನ ಬೆಳ್ಳಿ ರಥೋತ್ಸವ, ರಾತ್ರಿ 8 ಗಂಟೆಗೆ ಪಾಲಿಕೋತ್ಸವ
ಫೆ.27 : ಅಜ್ಜಯ್ಯನ ಫಳಾರ ಹಂಚುವುದು.












Click it and Unblock the Notifications