KEA ನೀಟ್ ವಿದ್ಯಾರ್ಥಿಗಳಿಗೆ ಮಹತ್ವದ ಮಾಹಿತಿ; UGNEET 2ನೇ ಸುತ್ತಿನ ಆಪ್ಷನ್ ಎಂಟ್ರಿಗೆ ಡೆಡ್‌ಲೈನ್

ಬೆಂಗಳೂರು: ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆ- ಪದವಿ ಪೂರ್ವ (UGNEET) 2026ಕ್ಕೆ ಂ ಸಂಬಂಧಿಸಿದಂತೆ ಸೀಟು ಹಂಚಿಕೆಯ ಎರಡನೇ ಸುತ್ತಿಗೆ ಆಪ್ಷನ್ಸ್ ಬದಲಿಸಿಕೊಳ್ಳಲು/ತೆಗೆದು ಹಾಕಲು ಸೆಪ್ಟೆಂಬರ್ 10ರಂದು ಬೆಳಿಗ್ಗೆ 9.30ರವರೆಗೆ ದಿನಾಂಕ ಅವಕಾಶ ನೀಡಲಾಗಿದೆ. ಈ ಅವಕಾಶ ಸದುಪಯೋಗ ಪಡೆದುಕೊಳ್ಳುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ಅವರು ತಿಳಿಸಿದ್ದಾರೆ.

ಬಾಗಲಕೋಟೆಯ ಸರ್ಕಾರಿ ವೈದ್ಯಕೀಯ ಕಾಲೇಜು ಹೊಸದಾಗಿ ಆರಂಭವಾಗುತ್ತಿದ್ದು ಈ ಕಾಲೇಜಿನಲ್ಲಿ 100 ಸೀಟು ಲಭ್ಯವಾಗಿವೆ. ಇದು ಹೊಸ ಕಾಲೇಜಾಗಿರುವ ಕಾರಣ ಆ ಕಾಲೇಜಿಗೆ ಹೊಸದಾಗಿ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗಿದೆ.

UGNEET 2026

ಎರಡನೇ ಸುತ್ತಿನಲ್ಲಿ ಭಾಗವಹಿಸಲು ಇಚ್ಛಿಸುವವರು ಲಾಗಿನ್ ಆಗಿ ಒಪ್ಪಿಗೆ ಸೂಚಿಸಬೇಕು. ಆಪ್ಷನ್ಸ್ ಅದಲು- ಬದಲು‌ ಮಾಡಿಕೊಳ್ಳುವುದಕ್ಕೂ ಅವಕಾಶ ನೀಡಲಾಗಿದೆ. ಮೊದಲ ಸುತ್ತಿನಲ್ಲಿ ಸೀಟು ಹಂಚಿಕೆ ನಂತರ ಚಾಯ್ಸ್-2 ಮತ್ತು ಚಾಯ್ಸ್-3 ಆಯ್ಕೆ‌ ಮಾಡಿರುವವರು ಹಾಗೂ ಸೀಟು ಹಂಚಿಕೆಯಾಗದಿರುವವರು ಈ ಸುತ್ತಿನಲ್ಲಿ ಭಾಗವಹಿಸಬಹುದು ಎಂದು ಪ್ರಾಧಿಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಆಪ್ಷನ್ ದಾಖಲಿಸುವುದು ಹೇಗೆ?

* ಎರಡನೇ ಸುತ್ತಿನಲ್ಲಿ ಆಪ್ಪನ್ ಎಂಟ್ರಿ ಮಾಡಲು ನಿಗದಿ ಪಡಿಸುವ ಕೊನೆಯ ದಿನಾಂಕದ ಒಳಗೆ ಲಾಗಿನ್ ಪೋರ್ಟಲ್ ನಲ್ಲಿ ಲಾಗಿನ್ ಮಾಡಿ ಆಪ್ಪನ್‌ಗಳನ್ನು save ಮಾಡಿ ಸಲ್ಲಿಸುವುದು ಕಡ್ಡಾಯವಾಗಿದೆ.

* ಇನ್ನೂ ರದ್ದುಗೊಳ್ಳಬಹುದಾದ / ಮುಟ್ಟುಗೋಲು ಹಾಕಿಕೊಳ್ಳಬಹುದಾದ, ಹೊಸದಾಗಿ ಸೇರ್ಪಡೆಯಾಗುವ ಸೀಟುಗಳೇನಾದರು ಇದ್ದಲ್ಲಿ ಅಂತಹ ಸೀಟುಗಳನ್ನು ಪ್ರಕಟಿಸುವುದರಿಂದ, ಪ್ರಾಧಿಕಾರದ ವೆಬ್‌ಸೈಟನ್ನು ಆಗಿಂದಾಗ್ಗೆ ಪರಿಶೀಲಿಸಬೇಕು.

* ಸೀಟು ಹಂಚಿಕೆಯ ಸಂದರ್ಭದಲ್ಲಿ, ಉದ್ಭವಿಸುವ ಸೀಟುಗಳನ್ನೂ ಸಹ ಹಂಚಿಕೆಗೆ ಪರಿಗಣಿಸುವುದರ ಕಾರಣ, ಸೀಟ್ ಮ್ಯಾಟ್ರಿಕ್ಸ್ ನಲ್ಲಿ ಲಭ್ಯತೆ ಇಲ್ಲದಿದ್ದರೂ ಸಹ ಕಾಲೇಜಿಗೆ ಸೇರ ಬಯಸುವ ಆಪ್ಪನ್‌ಗಳನ್ನು ಅಭ್ಯರ್ಥಿಗಳು ಉಳಿಸಿಕೊಳ್ಳಬಹುದಾಗಿದೆ.

* ಅಂತಿಮವಾಗಿ ಸಲ್ಲಿಸುವ ಆಪ್ಪನ್‌ಗಳ ಲಿಸ್ಟ್ ಅನ್ನು ಮುದ್ರಿಸಿಟ್ಟುಕೊಳ್ಳಲು ಸಲಹೆ ನೀಡಲಾಗಿದೆ. ಹೆಚ್ಚಿನ ಮಾಹಿತಿಗೆ ಹಾಗೂ ಅಪ್ಡೇಟ್‌ ಗಾಗಿ ನೀವು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಧಿಕೃತ ವೆಬ್‌ಸೈಟ್ https://cetonline.karnataka.gov.in/kea/ ಪರಿಶೀಲಿಸುವಂತೆ ಕೋರಲಾಗಿದೆ.

150 ವೈದ್ಯಕೀಯ ಹೆಚ್ಚುವರಿ ಸೀಟು

UGNEETಗೆ ಸಂಬಂಧಿಸಿದಂತೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟು ಹಂಚಿಕೆಯ ಎರಡನೇ ಸುತ್ತಿಗೆ ಹೆಚ್ಚುವರಿಯಾಗಿ 150 ವೈದ್ಯಕೀಯ ಸೀಟುಗಳು ಲಭಿಸಿವೆ. ಅದರಲ್ಲಿ 100 ಸೀಟು ಬಾಗಲಕೋಟೆಯ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಮತ್ತು ಉಳಿದ 50 ಫಾರೂಕಿಯ ವೈದ್ಯಕೀಯ ಕಾಲೇಜಿಗೆ ಸೇರಿದ್ದು, ಈ ಸೀಟುಗಳಿಗೆ ಆಪ್ಷನ್ ದಾಖಲಿಸಬಹುದಾಗಿದೆ. ಎರಡನೇ ಸುತ್ತಿನಲ್ಲಿ ಭಾಗವಹಿಸಲು ಇಚ್ಛಿಸುವವರು ಲಾಗಿನ್ ಆಗಿ ಅನುಮತಿ ಸೂಚಿಸಬೇಕು. ನಿಮ್ಮ ಆಯ್ಕೆ ಬದಲಾವಣೆಗೂ ಅವಕಾಶ ಇದೆ ಎಂದು ಇತ್ತೀಚೆಗೆ ಪ್ರಾಧಿಕಾರವು ಅಭ್ಯರ್ಥಿಗಳಿಗೆ ಮಾಹಿತಿ ನೀಡಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+