ಯುಗಾದಿ ಪ್ರಯಾಣಿಕರಿಗೆ ತಟ್ಟಲಿದೆ ದರ ಏರಿಕೆ ಬಿಸಿ: ಖಾಸಗಿ vs ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ದರಗಳ ಡಿಟೇಲ್ಸ್
ಬೆಂಗಳೂರು: ಯುಗಾದಿ ಹಬ್ಬದ ಸಂಭ್ರಮಕ್ಕೆ ದಿನಗಣನೆ ಶುರುವಾಗಿದೆ. ಹಬ್ಬ ಬಂತೆಂದರೆ ಊರುಗಳತ್ತ ಮುಖ ಮಾಡುವ ಉದ್ಯೋಗಿಗಳು ಸೇರಿದಂತೆ ಸಾರ್ವಜನಿಕರ ಪ್ರಮಾಣ ಹೆಚ್ಚಿರುತ್ತದೆ. ಮೆಜೆಸ್ಟಿಕ್ ನಿಲ್ದಾಣ ಸುತ್ತಮುತ್ತ ಊರಿಗೆ ಹೋಗುವ ದಿನ ಖಾಸಗಿ ಹಾಗೂ ರಾಜ್ಯ ಸಾರಿಗೆ ಬಸ್‌ಗಳು ತುಂಬಿರುತ್ತವೆ. ಕೆಎಸ್‌ಆರ್‌ಟಿಸಿ ಬಸ್‌ಗಳ ಆಸನಗಲನ್ನು ತಿಂಗಳು ಮೊದಲೇ ಕಾಯ್ದಿರಿಸಲಾಗುತ್ತದೆ. ಕೆಎಸ್‌ಆರ್‌ಟಿಸಿ ಸಂಸ್ಥೆ ಹೆಚ್ಚುವರಿ ಬಸ್‌ಗಳನ್ನು ಬಿಡುಗಡೆ ಮಾಡಿದರೂ ಸಹಿತ ಬಸ್ ಸಾಕಾಗುವುದಿಲ್ಲ. ಈ ಸನ್ನಿವೇಶದ ಲಾಭ ಪಡೆಯಲು ಮುಂದಾಗುವ ಖಾಸಗಿ ಬಸ್ ಮಾಲೀಕರು ಮನ ಬಂದಂತೆ ಟಿಕೆಟ್ ದರವನ್ನು ಹೆಚ್ಚಿಸುತ್ತಾರೆ.
ಈ ವರ್ಷ ಯುಗಾದಿಗೆ ತೆರಳುವವರಿಗೆ ಟಿಕೆಟ್ ದರ ಹೆಚ್ಚಳದ್ದೇ ಚಿಂತೆ ಆಗಿದೆ. ಈ ಲೇಖನದಲ್ಲಿ ಖಾಸಗಿ ಹಾಗೂ KSRTC ಬಸ್ ಟಿಕೆಟ್ ದರಗಳ ಪ್ರಸ್ತುತ ಸಾಮಾನ್ಯ ದರಗಳ ಮಾಹಿತಿ ನೀಡಲಾಗಿದೆ. ಅಲ್ಲದೇ 2025ರಲ್ಲಿ ಖಾಸಗಿ ಬಸ್ ದರ ವಿವರ ಪಟ್ಟಿಯನ್ನು ಸಹ ಕೊಡಲಾಗಿದೆ. ಇದನ್ನು ಗಮನಿಸಿದರೆ ನಿಮಗೆ 2026ರ ಯುಗಾದಿ ವೇಳೆ ಖಾಸಗಿ ಬಸ್ ಪ್ರಯಾಣ ಎಷ್ಟು ದುಬಾರಿ ಆಗಲಿದೆ ಎಂಬ ಅಂದಾಜು ಸಿಗುತ್ತದೆ.

ಸಾಲು ಸಾಲು ರಜೆಗಳು, ಯುಗಾದಿ-ರಂಜಾನ್ ಯಾವಾಗ?
ಹಬ್ಬಕ್ಕೆ ಅಷ್ಟೋ ಇಷ್ಟು ಉಳಿಸಿದ ಹಣವು ಬಸ್ ಪ್ರಯಾಣಕ್ಕೆ ಖರ್ಚಾಗಿ ಬಿಡುತ್ತದೆ. 2026ರ ಮಾರ್ಚ್ 18 ಬುಧವಾರ ಅಮವಾಸ್ಯೆ, ಮಾರ್ಚ್ 19ರಂದು ಗುರುವಾರ ಯುಗಾದಿ ಹಬ್ಬ. ಮಾರ್ಚ್ 20 ಶುಕ್ರವಾರ ಅಥವಾ 21ರಂದು ಶನಿವಾರ ಮುಸ್ಲಿಮರ (ಚಂದ್ರನ ವೀಕ್ಷಣೆಯ ಆಧಾರದ ಮೇಲೆ ಹಬ್ಬದಾಚರಣೆ) ರಂಜಾನ್ ಹಬ್ಬ. ಮಾರ್ಚ್ 22 ರಂದು ಭಾನುವಾರ. ಹೀಗೆ ಸಾಲು ಸಾಲು ರಜೆಗಳು ಎದುರಾಗುವ ಹಿನ್ನೆಲೆಯಲ್ಲಿ ಹಬ್ಬಕ್ಕೆ ಬೆಂಗಳೂರಿನಿಂದ ಜನರ ದಂಡೇ ದಾವಣಗೆರೆ, ಕಲಬುರಗಿ, ಯಾದಗಿರಿ, ಹಾಸನ, ಮಂಗಳೂರು, ಬೆಳಗಾವಿ ಇನ್ನಿತರ ತಮ್ಮ ಊರುಗಳತ್ತ ತೆರಳುತ್ತದೆ. ಈ ವೇಳೆ ಖಾಸಗಿ ಬಸ್ ಪ್ರಯಾಣ ದುಬಾರಿ ಆಗುತ್ತದೆ. ಅಂದಾಜು 600 ರೂಪಾಯಿ ದರವನ್ನು ಸುಮಾರು 1,000-1400 ರೂ.ವರೆಗೆ ಹೆಚ್ಚಿಸಿ ಅಧಿಕ ಲಾಭ ಪಡೆಯಲು ಮುಂದಾಗುತ್ತಾರೆ.
KSRTC ಬಸ್‌ಗಳ ಟಿಕೆಟ್ ಪ್ರಸ್ತುತ ದರ
ಮೊದಲು ಬೆಂಗಳೂರಿನಿಂದ ಆಯ್ದ ನಗರಗಳಿಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬಸ್ ಟಿಕೆಟ್ ದರ (ಫೆ.23 ಮತ್ತು 24ರ ಪ್ರಕಾರ) ಎಷ್ಟಿದೆ ಎಂಬ ಮಾಹಿತಿ ಇಲ್ಲಿದೆ. ಬೆಂಗಳೂರು-ಹುಬ್ಬಳ್ಳಿಗೆ ತಲಾ ಒಬ್ಬರಿಗೆ ಬಸ್ ಪ್ರಯಾಣದ ದರ ಕರ್ನಾಟಕ ಸಾರಿಗೆ- 586 ರೂ., ನಾನ್ ಎಸಿ ಸ್ಲೀಪರ್-951 ರೂಪಾಯಿ, ಪಲ್ಲಕ್ಕಿ ನಾನ್ ಎಸಿ-971 ರೂ., ಐರಾವತ ಕ್ಲಬ್ ಕ್ಲಾಸ್-1027 ರೂ. ಇದೆ.
ಅದೇ ರೀತಿ ಬೆಂಗಳೂರು-ಕಲಬುರಗಿಗೆ ನಾನ್ ಎಸಿ ಬಸ್ ಟಿಕೆಟ್ ದರ- 1015 ರೂ., ಕಲ್ಯಾಣ ರಥ- 1528 ರೂಪಾಯಿ ಇದೆ. ನಾನ್ ಎಸಿ ಬಸ್‌ಗಳ ಪ್ರಯಾಣ ದರ 617 ರೂ., ಪಲ್ಲಕ್ಕಿ ನಾನ್ ಎಸಿ 676 ರೂ., ಐರಾವತ ಕ್ಲಬ್ ಕ್ಲಾಸ್ 691 ರಿಂದ 794 ರೂ.ಇದೆ. ಬೆಂಗಳೂರು-ಬೆಳಗಾವಿಗೆ ಕರ್ನಾಟಕ ಸಾರಿಗೆ ಟಿಕೆಟ್ ದರ- 742 ರೂ., ಪಲಕ್ಕಿ ನಾನ್ ಎಸಿ -1194 ರೂ.,ಐರಾವತ್ ಕ್ಲಬ್ ಕ್ಲಾಸ್ 1196 ರೂ. ಇದೆ. ಬೆಂಗಳೂರು-ಮಂಗಳೂರು ಬಸ್ ಟಿಕೆಟ್ ದರ ನೋಡುವುದಾದರೆ, ಅಶ್ವಮೇಧ -480 ರೂ., ರಾಜಹಂಸ-651 ರೂ., ಪಲ್ಲಕ್ಕಿ ನಾನ್ ಎಸಿ- 900 ರೂ., ಐರಾವತ್ ಕ್ಲಬ್ ಕ್ಲಾಸ್-1005 ರೂಪಾಯಿ ಇದೆ.
ಖಾಸಗಿ ಬಸ್ ಟಿಕೆಟ್ ಹಾಲಿ ದರ
ಬೆಂಗಳೂರು-ಹುಬ್ಬಳ್ಳಿ
ಇಂಟರ್‌ಸಿಟಿ ಸ್ಮಾರ್ಟ್ ಬಸ್ - 479 ರೂಪಾಯಿ
ರೇಶ್ಮಾ ಟ್ರಾವೆಲ್ಸ್ -601 ರೂಪಾಯಿ
ಸೀಬರ್ಡ್-1000 ರೂಪಾಯಿ
ವಿಆರ್‌ಎಲ್ ಟ್ರಾವೆಲ್ಸ್-750-800 ರೂಪಾಯಿ
ಬೆಂಗಳೂರು-ಬೆಳಗಾವಿ
ಗಾಯತ್ರಿ ಟ್ರಾವೆಲ್ಸ್ -899 ರೂಪಾಯಿ
ಇಂಟರ್‌ಸಿಟಿ ಟ್ರಾವೆಲ್ಸ್ -799 ರೂಪಾಯಿ
ಅಗ್ನಿ ಟ್ರಾವೆಲ್ -600 ರೂಪಾಯಿ
ಗರಿಷ್ಠ ದರ -900 ರೂಪಾಯಿ
ಬೆಂಗಳೂರು-ಕಲಬುರಗಿ
ಶ್ರೀ ವಿಜಯಲಕ್ಷ್ಮೀ ಟ್ರಾವೆಲ್ಸ್ - 549 ರೂಪಾಯಿ
ಸುಗಮ ಟೂರಿಸ್ ಬಸ್ -675 ರೂಪಾಯಿ
ಶಕುಂತಲಾ ಟ್ರಾವೆಲ್ಸ್- 799 ರೂಪಾಯಿ
ಸಂಜನಾ ಟ್ರಾವೆಲ್ಸ್ -650 ರೂಪಾಯಿ
ಬೆಂಗಳೂರು-ಮಂಗಳೂರು
ಅರ್ನಾಹ್ ಟ್ರಾವೆಲ್ಸ್- 523 ರೂಪಾಯಿ
ಸುಗಮ ಟೂರಿಸ್ಟ್- 627 ರೂಪಾಯಿ
HYBUS-989 ರೂಪಾಯಿ.
ಬೆಂಗಳೂರು-ಶಿವಮೊಗ್ಗ
ಶ್ರೀನಿಧಿ ಟ್ರಾವೆಲ್ಸ್-756 ರೂಪಾಯಿ
ಸುಗಮಾ ಟೂರಿಸ್ಟ್-530 ರೂಪಾಯಿ
ದುರ್ಗಾಶಕ್ತಿ ಮೋಟಾರ್ಸ್- 850 ರೂಪಾಯಿ
ಯುಗಾದಿ-2025: ಖಾಸಗಿ ಬಸ್ ದರಪಟ್ಟಿ (ಎಸಿ & ನಾರ್ಮಲ್ ಬಸ್)
ಬೆಂಗಳೂರು - ಹುಬ್ಬಳ್ಳಿ ಮಾರ್ಗ
ಸಾಮಾನ್ಯ ದಿನಗಳ ದರ: 475-1100 ರೂಪಾಯಿ
ಹಬ್ಬದ ದರ: 1200-4200 ರೂಪಾಯಿ
ಬೆಂಗಳೂರು-ಬೆಳಗಾವಿ ಮಾರ್ಗ
ಸಾಮಾನ್ಯ ದಿನಗಳ ದರ: 389-1200 ರೂಪಾಯಿ
ಹಬ್ಬದ ದರ: 1129-5500 ರೂಪಾಯಿ
ಬೆಂಗಳೂರು-ದಾವಣಗೆರೆ ಮಾರ್ಗ
ಸಾಮಾನ್ಯ ದಿನಗಳ ದರ: 450-1300 ರೂಪಾಯಿ
ಹಬ್ಬದ ದರ: 750-5500 ರೂಪಾಯಿ
ಬೆಂಗಳೂರು-ಮಂಗಳೂರು ಮಾರ್ಗ
ಸಾಮಾನ್ಯ ದಿನಗಳ ದರ: 650-1300 ರೂಪಾಯಿ
ಹಬ್ಬದ ದರ: 1200-4500 ರೂಪಾಯಿ
ಬೆಂಗಳೂರು-ಹಾಸನ ಮಾರ್ಗ
ಸಾಮಾನ್ಯ ದಿನಗಳ ದರ: 463-1000 ರೂಪಾಯಿ
ಹಬ್ಬದ ದರ: 750-1600 ರೂಪಾಯಿ
ಬೆಂಗಳೂರು-ಕಲಬುರಗಿ ಮಾರ್ಗ
ಸಾಮಾನ್ಯ ದಿನಗಳ ದರ: 750-1000 ರೂಪಾಯಿ
ಹಬ್ಬದ ದರ: 1200-2200 ರೂಪಾಯಿ
ಬೆಂಗಳೂರು-ಯಾದಗಿರಿ ಮಾರ್ಗ
ಸಾಮಾನ್ಯ ದಿನಗಳ ದರ: 699-900 ರೂಪಾಯಿ
ಹಬ್ಬದ ದರ:1300-2200 ರೂಪಾಯಿ
ಬೆಂಗಳೂರು-ಶಿವಮೊಗ್ಗ ಮಾರ್ಗ
ಸಾಮಾನ್ಯ ದಿನಗಳ ದರ : 500-990 ರೂಪಾಯಿ
ಹಬ್ಬದ ದರ : 1199-1800 ರೂಪಾಯಿ
-
Ration: ಪಡಿತರ ಚೀಟಿದಾರರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರ್ಕಾರ -
Power Cut: ನಾಳೆ ಮಾ.22 ರಿಂದ 25ರವರೆಗೆ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ: ಬೆಸ್ಕಾಂ -
ಆರ್ಸಿಬಿ ಮತ್ತೆ ಚಾಂಪಿಯನ್ ಆಗೋದು ಫಿಕ್ಸ್, ಹ್ಯಾಜಲ್ವುಡ್ ಅಲಭ್ಯತೆ ತಂಡಕ್ಕೆ ವರದಾನ ಎಂದ ಆರ್.ಅಶ್ವಿನ್ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ












Click it and Unblock the Notifications