ಉದ್ಯೋಗ ಸಿಗುವ ಭರವಸೆಯಲ್ಲಿ ಗದಗದ ಜನತೆ

By: ಹುಬ್ಬಳ್ಳಿ ಪ್ರತಿನಿಧಿ
Subscribe to Oneindia Kannada

ಗದಗ,ಮಾರ್ಚ್, 11: ಗ್ರಾಮೀಣ ಜನರು ಉದ್ಯೋಗ ಹುಡುಕುತ್ತಾ ವಲಸೆ ಹೋಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ 'ಉದ್ಯೋಗ ಖಾತ್ರಿ ವಿಶೇಷ ಪ್ರಚಾರ' ಆಂದೋಲನಕ್ಕೆ ಜಿಲ್ಲಾಧಿಕಾರಿ ಎನ್.ಎಸ್ ಪ್ರಸನ್ನ ಕುಮಾರ ಶುಕ್ರವಾರ ಚಾಲನೆ ನೀಡಿದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ಹಾಗೂ ಗದಗ ಜಿಲ್ಲಾ ಪಂಚಾಯಿತಿ ಆಶ್ರಯದಲ್ಲಿ ಜಿಲ್ಲಾಡಳಿತ ಭವನದಲ್ಲಿ ಉದ್ಯೋಗ ಖಾತ್ರಿ ವಿಶೇಷ ಪ್ರಚಾರ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 'ಕೃಷಿ ಕಾರ್ಮಿಕರು ವಲಸೆ ಹೋಗಿ ಅತೀ ಕಡಿಮೆ ಸಂಬಳದಲ್ಲಿ ಕೆಲಸ ಮಾಡುವುದನ್ನು ತಪ್ಪಿಸುವ ಸಲುವಾಗಿ ಈ ಆಂದೋಲನ ಕೈಗೊಳ್ಳಲಾಗಿದೆ' ಎಂದು ಹೇಳಿದರು.[ಕೆಪಿಎಸ್ ಸಿ ಗ್ರೂಪ್ 'ಸಿ' ನೇಮಕಾತಿ ಅಧಿಸೂಚನೆ ವಿವರ]

Gadag

ಪರ ಊರಿಗೆ ವಲಸೆ ಹೋದ ಕೃಷಿ ಕಾರ್ಮಿಕರು ಪ್ರತಿದಿನ 130-140 ರೂ.ಗೆ ದಿನ ಪೂರ್ತಿ ದುಡಿಯುತ್ತಾರೆ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬರುವ ಸಮುದಾಯದ ಅಥವಾ ವೈಯಕ್ತಿಕ ಉದ್ಯೋಗದಡಿ ಪ್ರತಿದಿನ
204 ರೂ ಕೂಲಿ ಪಡೆಯುವ ಈ ಯೋಜನೆಯ ಕುರಿತು ಪ್ರತಿ ಗ್ರಾಮಗಳಲ್ಲಿ ಮಾಹಿತಿ ಒದಗಿಸಲು ವಿಶೇಷ ಜಾಗೃತಿ ಆಂದೋಲನ ಹಮ್ಮಿಕೊಳ್ಳಲಾಗಿದೆ.[ಬಜೆಟ್ 2016 : ಉದ್ಯೋಗ ಕ್ಷೇತ್ರಕ್ಕೆ ಸಿಕ್ಕಿದ್ದೇನು?]

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಂಜಯ ಶೆಟ್ಟಣ್ಣವರ ಮಾತನಾಡಿ, ಗ್ರಾಮೀಣ ಕೂಲಿಕಾರರಿಗೆ ಉದ್ಯೋಗದ ಭದ್ರತೆ, ವಲಸೆ ತಡೆಗಟ್ಟುವ ಉದ್ದೇಶದಿಂದ ಉದ್ಯೋಗ ಖಾತ್ರಿ ರಥವು ಜಿಲ್ಲೆಯ ಐದು ತಾಲೂಕಿನ ಎಲ್ಲ ಗ್ರಾಮಗಳಿಗೂ ಸಂಚರಿಸಿ ಅರ್ಜಿ ನಮೂನೆ ೬ನ್ನು ನೀಡಿ ಅದನ್ನು ಭರ್ತಿ ಮಾಡಿ ಗ್ರಾಮ ಪಂಚಾಯಿತಿಗಳಿಗೆ ಸಲ್ಲಿಸಿ ಉದ್ಯೋಗ ಪಡೆದುಕೊಳ್ಳಲು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಟಿ.ದಿನೇಶ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಬನಶಂಕರಿ ಅಂಗಡಿ ಸಿಬ್ಬಂದಿಗಳು ಉಪಸ್ಥಿತರಿದ್ದರು.[ಪ್ಯಾರ ಮೆಡಿಕಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ]

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಉದ್ದೇಶ?

ಈ ಯೋಜನೆ ಮೂಲಕ ದುಡಿಯುವ ಕೈಗಳಿಗೆ ಉದ್ಯೋಗ, ವಯಸ್ಕರಿಗೆ ವರ್ಷಕ್ಕೆ 100 ದಿನ ಕೆಲಸದ ಖಾತರಿ ನೀಡಿ, ಉದ್ಯೋಗಕ್ಕಾಗಿ ವಲಸೆ ತಪ್ಪಿಸುವುದು. ಸಾಮಾಜಿಕ ಸಮಾನತೆ, ಭದ್ರತೆ, ಗ್ರಾಮೀಣ ಮಹಿಳೆಯರ ಸಬಲೀಕರಣ, ಬಡವರ ಜೀವನೋಪಾಯದ ಆಧಾರಗಳನ್ನು ಹೆಚ್ಚಿಸುವುದು.ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತಿ ದಿನ 204 ರೂ.ಗಳ ಸಮಾನ ಕೂಲಿ ಈ ಯೋಜನೆಯ ಮುಖ್ಯ ಉದ್ದೇಶ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Udyaoga Khatri Vishesha Prachara Andolan was inaugurated by N.S Prasanna Kumar, Deputy Commissioner at Gadag, on Friday, March 11th.
Please Wait while comments are loading...