ಆನಂದ ಮಹೀಂದ್ರಾ ಮನಗೆದ್ದ ಉಡುಪಿ ಜುಮಾದಿ ಐಲ್ಯಾಂಡ್: ಫ್ಯಾಮಿಲಿ, ಫ್ರೆಂಡ್ಸ್ ಜೊತೆ ಸಮಯ ಕಳೆಯೋಕೆ ಬೆಸ್ಟ್ ಜಾಗ
ಇನ್ನೇನು ದಸರಾ ರಜೆ ಶುರುವಾಯ್ತು. ಮಕ್ಕಳನ್ನು ಕರ್ಕೊಂಡು ಎಲ್ಲಿಗಾದರೂ ಸಣ್ಣ ಟ್ರಿಪ್ ಹೋಗಬೇಕು ಅಂದ್ಕೊಂಡಿದ್ದೀರಾ? ಹಾಗಿದ್ರೆ ನಮ್ಮಲ್ಲೇ ಒಂದು ಸೂಪರ್ ಸ್ಪಾಟ್ ಇದೆ. ಹಿತ್ತಲ ಗಿಡ ಮದ್ದಲ್ಲ ಅನ್ನೋ ಹಾಗೆ ನಾವು ಯಾವಾಗಲೂ ಬೇರೆ ರಾಜ್ಯ, ದೇಶಗಳ ಬಗ್ಗೆ ಯೋಚನೆ ಮಾಡ್ತೇವೆ. ಆದ್ರೆ ನಮ್ಮ ಉಡುಪಿಯಲ್ಲೇ ಇರುವ ಈ ಐಲ್ಯಾಂಡ್ ಬಗ್ಗೆ ಅದೆಷ್ಟು ಜನರಿಗೆ ಗೊತ್ತಿದೆಯೋ ಗೊತ್ತಿಲ್ಲ. ಸುಂದರ, ಶಾಂತ ಜಾಗದಲ್ಲಿ ಒಂದೆರಡು ದಿನ ಇರಬೇಕು ಅನ್ನುವವರಿಗೆ ಮಾತ್ರ ಇದು ಪರ್ಫೆಕ್ಟ್ ಪ್ಲೇಸ್.
ಗಮನ ಸೆಳೆದ ಆನಂದ್ ಮಹೀಂದ್ರಾ ಪೋಸ್ಟ್ :
ಆನಂದ್ ಮಹೀಂದ್ರಾ ಈ ಐ ಲ್ಯಾಂಡ್ ಬಗ್ಗೆ ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಬರೆದಿದ್ದಾರೆ. ಈ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹೌದು, ಕರ್ನಾಟಕದ ಜುಮಾದಿ ದ್ವೀಪದ ಅನುಭವವನ್ನು ಅವರು ಶೇರ್ ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ಫೋಟೋ, ವಿಡಿಯೋ ಕೂಡಾ ಹಾಕಿದ್ದಾರೆ. ಇದು ಸಣ್ಣ ದ್ವೀಪಗಳ ಸಮೂಹ. ಜನ ಜನಜಂಗುಳಿಯಿಂದ ತುಂಬಿರುವ ಪ್ರವಾಸಿ ತಾಣದಿಂದ ಸುಮಾರು ದೂರ ಇರುವ ಕಾರಣ ಈ ಜಾಗ ತುಂಬಾ ಶಾಂತವಾಗಿದೆ.

ಸುವರ್ಣ ನದಿಯ ಹಿನ್ನೀರು, ತೆಂಗಿನ ತೋಟ, ಅರೇಬಿಯನ್ ಸಮುದ್ರದಿಂದ ಸುತ್ತುವರೆದಿರುವ ಜುಮಾದಿ ದ್ವೀಪದ ಬಗ್ಗೆ ತುಂಬಾ ಜನರಿಗೆ ಗೊತ್ತಿಲ್ಲ. ಈ ಜಾಗಕ್ಕೆ ದೋಣಿಯ ಮೂಲಕ ಹೋಗಬೇಕು. ದೋಣಿಯಲ್ಲಿ ಹೋಗುವಾಗ ಕರಾವಳಿ ಮತ್ತು ಸುತ್ತಮುತ್ತಲಿನ ರಮಣೀಯ ನೋಟ ಕಣ್ಣಗೆ ಬೀಳುತ್ತದೆ.
ಎಲ್ಲಿದೆ ಈ ಜುಮಾದಿ ದ್ವೀಪ ?
ಈ ಜುಮಾದಿ ದ್ವೀಪ ಉಡುಪಿಯ ಬ್ರಹ್ಮಾವರದ ಬಳಿ ಇದೆ. ನಿಖರವಾಗಿ ಹೇಳಬೇಕು ಅಂದ್ರೆ ಸುವರ್ಣ ನದಿಯ ಹಿನ್ನೀರು ಮತ್ತು ಅರಬ್ಬಿ ಸಮುದ್ರದ ಸಂಗಮ ಜಾಗದಲ್ಲಿ. ಅರಬ್ಬೀ ಸಮುದ್ರ ಮತ್ತು ನದಿಯ ಪ್ರಶಾಂತ ಹಿನ್ನೀರು ಈ ದ್ವೀಪವನ್ನು ಸುತ್ತುವರೆದಿದೆ. ತೆಂಗಿನ ತೋಟ ಬೇರೆ. ಉಡುಪಿಯಿಂದ ಸುಮಾರು 8 ಕಿ.ಮೀ ದೂರದಲ್ಲಿರುವ ಈ ದ್ವೀಪ ತಲುಬೇಕಾದ್ರೆ ದೋಣಿಯ ಅಗತ್ಯ ಇದೆ.
ಶಾಂತ ಪರಿಸರಕ್ಕೆ ಮನಸೋಲದವರುಂಟೇ?
ಹಾಗೆ ನೋಡಿದ್ರೆ ಕರಾವಳಿ ಅಂದ ತಕ್ಷಣ ಜನ ದೇವಸ್ಥಾನ, ಬೀಚ್ ಅಂತ ಹೋಗುವುದೇ ಹೆಚ್ಚು. ಉಡುಪಿಯಲ್ಲೂ ಅಷ್ಟೇ ದೇವಾಲಯ, ಮಲ್ಪೆ ಬೀಚ್, ಕಾಪು ಬೀಚ್, ಸೇಂಟ್ ಮೇರಿಸ್ ದ್ವೀಪ ಬಹುತೇಕ ಎಲ್ಲರಿಗೂ ಗೊತ್ತು. ಅಲ್ಲಿ ಸಿಕ್ಕಾಪಟ್ಟೆ ಜನ. ಆದರೆ, ಈ ಐಲ್ಯಾಂಡಲ್ಲಿ ಹೇಳಿಕೊಳ್ಳವಂತ ರಶ್ ಏನಿಲ್ಲ.
“No man is an island…” wrote the poet John Donne.
— anand mahindra (@anandmahindra) September 27, 2026
His message was that we are all part of a larger whole, whether that’s a continent or a community.
But the fact is, most of us occasionally crave a little isolation and individual reflection, just as much as we seek the company… pic.twitter.com/LD0nFW9KgA
ಜುಮಾದಿ ದ್ವೀಪಗಳ ವಿಶೇಷತೆ
ಈ ಐಲ್ಯಾಂಡಿನ ಅತಿದೊಡ್ಡ ಆಕರ್ಷಣೆ ಅದರ ನೈಸರ್ಗಿಕ ಸೆಟ್ಟಿಂಗ್. ಈ ಪ್ರದೇಶವು ಮರಳು, ತೆಂಗಿನ ತೋಟ ಮತ್ತು ಶಾಂತ ನೀರನ್ನು ಹೊಂದಿದೆ. ಸದ್ದು ಗದ್ದಲ ಏನೂ ಇಲ್ಲದ ಶಾಂತ ಪರಿಸರ. ಇಲ್ಲಿನ ದೋಣಿ ಸವಾರಿ ಕೂಡಾ ವಿಶೇಷ ಅನುಭವ ಕೊಡುತ್ತದೆ. ಇನ್ನು ಈ ಜಾಗದಲ್ಲಿರುವ ಬೇರೆ ಬೇರೆ ರೀತಿಯ ಪಕ್ಷಿ ಸಂಕುಲ ಸೆಳೆಯದೇ ಇರದು. ಪೋಟೋಗ್ರಫಿಗೂ ಹೇಳಿ ಮಾಡಿಸಿದ ಜಾಗ.
ಇಲ್ಲಿ ಏನೆಲ್ಲಾ ಮಾಡಬಹುದು ?
ಸ್ನೇಹಿತರು, ಕುಟುಂಬದೊಂದಿಗೆ ಬಂದು ಆರಾಮಾಗಿ ಶಾಂತಿಯಿಂದ ಇಲ್ಲಿ ದಿನ ಕಳೆಯಬಹುದು. ಬೀಚಲ್ಲಿ ಆಡಬಹುದು, ಮರಳಲ್ಲಿ ಕ್ಯಾಸೆಲ್ ಕಟ್ಟಬಹುದು, ದೋಣಿ ಸವಾರಿ, ಫಿಶಿಂಗ್ ಮಾಡಬಹುದು. ಬೇರೆ ಬೇರೆ ರೀತಿಯ ಪಕ್ಷಿಗಳನ್ನು ನೋಡಬಹುದು. ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತದ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು.
ಉಡುಪಿಗೆ ಒಮ್ಮೆ ಬಂದರೆ ಜುಮಾದಿ ದ್ವೀಪದ ಜೊತೆಗೆ ಇಲ್ಲಿಯ ಮಲ್ಪೆ, ಕಾಪು ಬೀಚ್, ಸೇಂಟ್ ಮೇರಿಸ್ ಐಲ್ಯಾಂಡ್, ಪ್ರಸಿದ್ಧ ಶ್ರೀ ಕೃಷ್ಣ ದೇವಾಲಯ, ಮರವಂತೆ ಬೀಚಿಗೂ ಭೇಟಿ ಕೊಡಬಹುದು.


Click it and Unblock the Notifications
