ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಷ್ಟದ ಅರಿವಿದ್ದವರು ಎಂದೂ ಅಪರಾಧ ಮಾಡಲಾರರು: ಅಣ್ಣಾಮಲೈ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಕುಂದಾಪುರ, ಡಿಸೆಂಬರ್. 21 : ಅಪರಾಧ ಚಟುವಟಿಕೆ ನಿಯಂತ್ರಣದಲ್ಲಿ ವಿದ್ಯಾರ್ಥಿಗಳು ಇಲಾಖೆ ಜೊತೆ ಕೈ ಜೋಡಿಸಬೇಕಿದೆ. ವಿದ್ಯಾರ್ಥಿಗಳು ಅಪರಾಧದ ದುಷ್ಪರಿಣಾಮ ಹಾಗೂ ಅದಕ್ಕೆ ಒದಗುವ ಶಿಕ್ಷೆ ಹಾಗೂ ಸಮಸ್ಯೆ ಬಗ್ಗೆ ಮಾಹಿತಿ ತಿಳಿದಿರಬೇಕು ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಹೇಳಿದರು.

ಉಡುಪಿ ಜಿಲ್ಲಾ ಪೊಲೀಸ್, ರೋಟರಾಕ್ಟ್ ಕ್ಲಬ್ ಕೋಟೇಶ್ವರ, ಕುಂದಾಪುರ ಪೊಲೀಸ್ ಠಾಣೆ, ಸರ್ಕಾರಿ ಪದವಿಪೂರ್ವ ಕಾಲೇಜು ಕೋಟೇಶ್ವರ ಇವರ ಜಂಟಿ ಆಶ್ರಯದಲ್ಲಿ ಕುಂದಾಪುರ ತಾಲೂಕಿನ ಕೋಟೇಶ್ವರ ಸರ್ಕಾರಿ ಪದವಿಪೂರ್ವ ಕಾಲೇಜಿನ ಚೇತನಾ ಸಭಾಭವನದಲ್ಲಿ ನಡೆದ 'ಅಪರಾಧ ತಡೆ ಮಾಸಾಚರಣೆ' ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.[ಕೆಎಸ್ಆರ್ ಟಿಸಿ ಫೈಬಸ್ ಸೇವೆ ವಿಸ್ತರಣೆ, ಪುಣೆಗೆ ಹೊಸ ಬಸ್]

K. Annamalai

ಜಿಲ್ಲೆಯಲ್ಲಿ ಕೆಲಸದ ವೇಳೆ ಹಲವು ಸರ್ಕಾರಿ ಶಾಲೆ ಹಾಗೂ ಕಾಲೇಜುಗಳಿಗೆ ಭೇಟಿ ನೀಡಿದ್ದೇನೆ. ಇಲ್ಲಿನ ವಿದ್ಯಾರ್ಥಿಗಳು ಯಾಂತ್ರಿಕೃತ ಜೀವನ ಶೈಲಿ ಬದಲು ತಮ್ಮ ಜೀವನದ ಗುರಿ ತಲುಪಲೆಂದೇ ವಿದ್ಯಾರ್ಥಿಗಳು ಶಾಲೆ-ಕಾಲೇಜಿಗೆ ಬರುತ್ತಾರೆ. ಕಷ್ಟದ ಅರಿವಿದ್ದವರೂ ಎಂದೂ ಅಡ್ಡ ದಾರಿ ತುಳಿಯಲಾರರು. ಅವರು ಯಾವಾಗಲೂ ಉತ್ತಮ ಕೆಲಸ ಮಾಡುತ್ತಾರೆ ಎಂಬುದು ನನ್ನ ನಂಬಿಕೆ ಎಂದು ವಿದ್ಯಾರ್ಥಿಗಳ ಮುಂದೆ ಭರವಸೆಯ ಮಾತನಾಡಿದರು.['ಸುಡೊಕು'ದಲ್ಲಿ ಬೆಳ್ಳಿಪದಕ ಗೆದ್ದು, ಮಿಂಚಿದ ಬೆಂಗಳೂರು ಬಾಲಕಿ]

ಕೇವಲ ಓದಿ ಲಕ್ಷಾಂತರ ಹಣ ದೊರೆಯುವ ಉದ್ಯೋಗ ಆರಿಸಿಕೊಳ್ಳುವ ಬದಲು ದೊಡ್ಡ ಗುರಿ ತಲುಪುವ ಮಹತ್ವಾಕಾಂಕ್ಷೆ ಇರಬೇಕು. ಬಡತನ ನಿರ್ಮೂಲನೆ, ಕಡಿಮೆ ವೆಚ್ಚದಲ್ಲಿ ಉತ್ತಮ ಗುಣಮಟ್ಟದ ಮನೆ ನಿರ್ಮಾಣ, ಪಿಡುಗಾಗಿ ಕಾಡುವ ಮಲೇರಿಯಾ ಸಮಸ್ಯೆ ನಿವಾರಣೆ, ಟವರ್ ಇಲ್ಲದೇ ಬೇರೊಂದು ಮಾರ್ಗದಲ್ಲಿ ಮೊಬೈಲ್ ನೆಟ್ ವರ್ಕ್ ವ್ಯವಸ್ಥೆ ಈ ರೀತಿಯ ವಿಭಿನ್ನ ಸಂಶೋಧನೆಯತ್ತ ಗಮನ ಹರಿಸಬೇಕು ಎಂದು ಹೇಳುವ ಮೂಲಕ ವೈದ್ಯ, ಇಂಜಿನಿಯರ್, ವಿಜ್ಞಾನಿ ಆಗಬಯಸುವ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬುವ ಕೆಲಸ ಮಾಡಿದರು.

English summary
Udupi district police conducted crime prevention programme in Kundapur on Sunday, December 21st. Udupi superintendent of Police Annamalai K has participated in this programme and encouraged the school and college students to creative inventions
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X