ಯಡಿಯೂರಪ್ಪ ರಾಜಿನಾಮೆ ಬೆನ್ನಲ್ಲೇ ಟ್ವಿಟ್ಟರ್ ವಾರ್ ಆರಂಭ
ಬೆಂಗಳೂರು, ಮೇ 19: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚಿಸದೆ, ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲು ವಿಧಾನಸಭೆಯಿಂದ ತೆರಳುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ನಾಯಕರು ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿಯನ್ನು ಪ್ರಜಾಸತ್ತಾತ್ಮಕ ವಿರೋಧಿ ನೀತಿ ಎಂದು ಟ್ವಿಟ್ಟರ್ ಆರಂಭಿಸಿದ್ದಾರೆ.
ಬಿಎಸ್ ಯಡಿಯೂರಪ್ಪ ಅವರಿಗೆ ಬಹುಮತ ದೊರೆಯದಿರುವುದು ಪ್ರಜಾಸತ್ತಾತ್ಮಕ ವ್ಯವಸ್ಥೆಗೆ ಉಂಟಾದ ಸೋಲು ಹಾಗೂ ಅಪವಿತ್ರ ಮೈತ್ರಿಯ ಗೆಲವುದು ಎಂದು ಬಿಜೆಪಿ ನಾಯಕರು ಖಂಡನೆ ವ್ಯಕ್ತಪಡಿಸಿದ್ದರೆ. ಬಹುಮತ ಇಲ್ಲದೆಯೂ ಮುಖ್ಯಮಂತ್ರಿ ಹುದ್ದೆಯನ್ನು ಏರಿದ ಯಡಿಯೂರಪ್ಪ ಕೊನೆಗೂ ತಪ್ಪೊಪ್ಪಿಕೊಂಡು ರಾಜಿನಾಮೆಗೆ ಮುಂದಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಹರ್ಷ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಸುರೇಶ್ ಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವಿಟ್ಟರ್ ವಾರ್ ಅರಂಭಿಸಿದ್ದಾರೆ.
|
ಅಟಲ್ ಸರ್ಕಾರ ಬಿದ್ದ ನಂತರ ಕೇಂದ್ರದಲ್ಲಿ ಸರ್ಕಾರ ರಚನೆ ಮಾಡಿದ್ದೆವು
ಅಟಲ್ ಬಿಹಾರಿ ವಾಜಪೇಯಿ ಬಹುಮತ ಕೊರತೆಯಿಂದ ಸರ್ಕಾರ ಬೀಳುತ್ತಿದ್ದಾಗ, ವಿರೋಧ ಪಕ್ಷದವರು ನಗುತ್ತಿದ್ದರು. ಅದಕ್ಕೆ ನಾವು 21 ರಾಜ್ಯ ಹಾಗೂ ಕೇಂದ್ರದಲ್ಲಿ ಬಿಜೆಪಿ ಸರ್ಕಾಋ ರಚಿಸುವ ಮೂಲಕ ಉತ್ತರ ಕೊಟ್ಟಿದ್ದೇವೆ, ಅಂತಹದೇ ಪರಿಸ್ಥಿತಿ ನಿರ್ಮಾಣವಾಗಿದ್ದು, ಅಪವಿತ್ರ ಮೈತ್ರಿಯೊಂದಿಗೆ ರಾಜಕೀಯ ಆಶ್ರಯಕ್ಕಾಗಿ ಪರದಾಡುತ್ತಿದೆ.ಇದಕ್ಕೂ ನಾವು ಉತ್ತರ ಕೊಡುತ್ತೇವೆ ಈ ದಿನ ನೆನಪಿಡಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದಾರೆ.
|
ಜನರ ಆಸೆಯಂತೆ ಸರ್ಕಾರ ರಚಿಸಲು ಸಾಧ್ಯವಾಗಿಲ್ಲ
ಜನಾದೇಶದಂತೆ ಸರ್ಕಾರ ರಚಿಸಲು ಆಗಲಿಲ್ಲ. ಕ್ಷಮಿಸಿ. ಆದರೆ ಇದರಿಂದ ಆದಷ್ಟು ಬೇಗ ಹೊರಬರುತ್ತೇವೆ, ಈ ಸೋಲನ್ನು ನಾವು ಒಪ್ಪಿಕೊಳ್ಳಲು ಸಿದ್ಧರಿಲ್ಲ, ಜನರು ನಮ್ಮ ಮೇಲೆ ನಂಬಿಕೆ ಇಟ್ಟು ಗೆಲ್ಲಿಸಿದ್ದಾರೆ. ಆದರೆ ಜನಾದೇಶದಂತೆ ಸರ್ಕಾರವನ್ನು ರಚಿಸಲು ಸಾಧ್ಯವಾಗಿಲ್ಲ ಕ್ಷಮಿಸಿ ಎಂದು ಶಾಸಕ ಸುರೇಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.
|
ಸಂವಿಧಾನ ವಿರೋಧಿ ಕ್ರಮ ವಿಫಲಗೊಂಡಿದೆ
ಯಡಿಯೂರಪ್ಪ ಅವರು ಇಂದು ನಡೆದ ಅಧಿವೇಶನದಲ್ಲಿ ವಿಶ್ವಾಸಮತ ಯಾಚನೆ ಮಾಡದೆ ರಾಜಿನಾಮೆ ನೀಡಲು ತೆರಳುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟ್ವಿಟ್ಟರ್ ಮೂಲಕ ಪ್ರತಕ್ರಿಯೆ ವ್ಯಕ್ತಪಡಿಸಿದ್ದಾರೆ. ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಗೆದ್ದಿದೆ. ಸಂವಿಧಾನ ವಿರೋಧಿ ಕ್ರಮಗಳಿಂದ ಅಧಿಕಾರ ಪಡೆಯಲು ಬಿಜೆಪಿ ಮಾಡಿದ ಸಂಚು ವಿಫಲಗೊಂಡಿದೆ ಎಂದು ಟ್ವೀಟ್ ಮಾಡುವ ಮೂಲಕ ಗೆಲುವಿನ ಕುರಿತು ಹರ್ಷ ವ್ಯಕ್ತಪಡಿಸಿದ್ದಾರೆ.
|
ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಗೆಲುವು ಸಾಧಿಸಿದೆ
ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಗೆಲುವುದು ಸಾಧಿಸಿದೆ ನನಗೆ ಸಂತಸ ತಂದಿದೆ ಎಂದು ಮಮತಾ ಬ್ಯಾನರ್ಜಿ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ, ಎಚ್‌ಡಿ ಕುಮಾರಸ್ವಾಮಿ ಅವರಿಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವಿಟ್ಟರ್ ಮೂಲಕ ಶುಭ ಕೋರಿದ್ದಾರೆ.
|
ಬಿಜೆಪಿ ಕಾರ್ಯತಂತ್ರದ ಬಗ್ಗೆ ಮರುಚಿಂತನೆ ಮಾಡಬೇಕು
ಇದು ಬಿಜೆಪಿಯವರಿಗೆ ಬಹುದೊಡ್ಡ ಹಿನ್ನಡೆ ಹಾಗೂ 2019 ಕ್ಕೆ ಅವರು ರೂಪಿಸುತ್ತಿದ್ದ ಯೋಜನೆಯೂ ವಿಫಲವಾಗಿದೆ. ಈಗ ಅವರು ತಮ್ಮ ಕಾರ್ಯತಂತ್ರದ ಬಗೆಗೆ ಮರು ಚಿಂತನೆ ಮಾಡುವುದು ಉಚಿತ - ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿ ಬಹುಮತ ಸಾಬೀತು ಮಾಡದ ಬಿನೆಪಿಯ ಬಿ.ಎಸ್.ಯಡಿಯೂರಪ್ಪ ಕುರಿತಂತೆ ಬಿಎಸ್ಪಿ ಅಧ್ಯಕ್ಷೆ ಮಾಯಾವತಿ ಹೇಳಿದ್ದು ಮಾಡಿದ್ದು ಹೀಗೆ












Click it and Unblock the Notifications