ರಾಹುಲ್ ಗಾಂಧಿ ರಿಯರ್ ವ್ಯೂ ಮಿರರ್ ಹೇಳಿಕೆಗೂ ಟೀಕೆಯೋ ಟೀಕೆ!

Posted By:
Subscribe to Oneindia Kannada
   ಮೋದಿ ಬಗ್ಗೆ ರಾಹುಲ್ ಮಾಡಿರೋ ರೇರ್ ವ್ಯೂ ಮಿರರ್ ಹೇಳಿಕೆಗೆ ಟ್ವಿಟ್ಟರ್ ನಲ್ಲಿ ವಾಗ್ಯುದ್ಧ | Oneindia Kannada

   ಬಳ್ಳಾರಿ, ಫೆಬ್ರವರಿ 12: "ಪ್ರಧಾನಿ ನರೇಂದ್ರ ಮೋದಿ ಯಾವಾಗಲೂ ಕನ್ನಡಿಯಲ್ಲಿ ಹಿಂಬದಿಯ ವಾಹನ ನೋಡಿಕೊಂಡು ಗಾಡಿ ಓಡಿಸುತ್ತಾರೆ. ಆದರೆ ಸಿದ್ದರಾಮಯ್ಯ ಹಾಗಲ್ಲ, ಕರ್ನಾಟಕದ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಸರ್ಕಾರ ನಡೆಸುತ್ತಿದ್ದಾರೆ" ಎಂಬ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆ ಇದೀಗ ಸಾಕಷ್ಟು ಸುದ್ದಿಯಾಗುತ್ತಿದೆ.

   ಬಳ್ಳಾರಿಯ ಹೊಸಪೇಟೆಯಲ್ಲಿ ಕಾಂಗ್ರೆಸ್ ನ ಜನಾಶೀರ್ವಾದ ಯಾತ್ರೆಯಲ್ಲಿ ಸಾರ್ವಜನಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ ಮುಕ್ಕಾಲು ಗಂಟೆಯ ತಮ್ಮ ಭಾಷಣದ ಅವಧಿಯಲ್ಲಿ ಬಹುಪಾಲು ಸಮಯವನ್ನು ಕೇವಲ ಮೋದಿಯವರನ್ನು ಥಳಿಸುವುದಕ್ಕೆಂದೇ ಮೀಸಲಿಟ್ಟಿದ್ದು ಸುದ್ದಿಯಾಗಿತ್ತು.

   ರಾಹುಲ್ ಗಾಂಧಿಗೆ ಕರ್ನಾಟಕ ಬಿಜೆಪಿ ಬತ್ತಳಿಕೆಯಿಂದ 10 ಪ್ರಶ್ನೆ

   ನಾಲ್ಕು ದಿನಗಳ ಕರ್ನಾಟಕ ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಹೊಸಪೇಟೆಯಲ್ಲಿ ಮಾತನಾಡುವ ಸಂದರ್ಭದಲ್ಲಿ, 'ಪ್ರಧಾನಿ ಮೋದಿಯವರುಕನ್ನಡಿ ನೋಡಿ ಗಾಡಿ ಓಡಿಸಿದ್ದರಿಂದಲೇ ಜಿಎಸ್ಟಿ ಎಂಬ ಉತ್ತಮ ಯೋಜನೆ ಗಬ್ಬರ್ ಸಿಂಗ್ ಟ್ಯಾಕ್ಸ್ ಆಗಿ ಬದಲಾಗಿದ್ದು, ಇದರಿಂದಾಗಿಯೇ ಅವರು ಅಪನಗದೀಕರಣದಂಥ ಮೂರ್ಖ ನಿರ್ಧಾರ ತೆಗೆದುಕೊಂಡಿದ್ದು' ಎಂದು ಲೇವಡಿ ಮಾಡಿದ್ದರು. ರಾಹುಲ್ ಗಾಂಧಿಯವರ ಈ ಹೇಳಿಕೆಗೆ ಹಲವರು ವಿರೋಧ ವ್ಯಕ್ತಪಡಿಸಿದ್ದು, ಸರಿಯಾಗಿ ಗಾಡಿ ಓಡಿಸಬೇಕೆಂದರೆ ಹಿಂಬದಿಯ ದೃಶ್ಯಗಳನ್ನೂ ನೋಡಬೇಕಾಗುತ್ತದೆ ಎಂದಿದ್ದಾರೆ.

   ಅನಂತ್ ಕುಮಾರ್ ಟಾಂಗ್!

   ರಾಹುಲ್ ಗಾಂಧಿಯವರು ರಿಯರ್ ವ್ಯೂ ಮಿರರ್ ನೋಡದೆ ಗಾಡಿ ಓಡಿಸುತ್ತಾರೆ. ಏಕೆಂದರೆ ಅವರಿಗೆ ಬೋಫೋರ್ಸ್, 2 ಜಿ, ಕೋಲ್ ಗೇಟ್ ಮುಂತಾದ ಹಗರಣಗಳನ್ನು ನೋಡುವುದಕ್ಕೆ ಇಷ್ಟವಿಲ್ಲ ಎಂದು ಟಾಂಗ್ ನೀಡಿದ್ದಾರೆ ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್.

   ಸರಿಯಾಗಿ ಹೇಳಿದ್ದೀರಿ!

   ಪ್ರಧಾನಿ ನರೇಂದ್ರ ಮೋದಿ ರಿಯರ್ ವ್ಯೂ ಮಿರರ್ ನೋಡಿ ಗಾಡಿ ಓಡಿಸುತ್ತಾರೆ, ಅದಕ್ಕೆಂದೇ ಅಪಘಾತ ಸಂಭವಿಸುತ್ತಿದ ಎಂದು ರಾಹುಲ್ ಗಾಂಧಿಯವರು ಸರಿಯಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನೋಡಿ ಆಡಳಿತ ನಡೆಸುವುದು ಹೇಗೆ ಎಂಬುದನ್ನು ಕಲಿಯಿರಿ ಎಂದು ಸಹ ಅವರು ಹೇಳಿದ್ದಾರೆ ಎಂದು ರಾಹುಲ್ ಹೇಳಿಕೆಯನ್ನು ಬೆಂಬಲಿಸಿ ಟ್ವೀಟ್ ಮಾಡಿದ್ದಾರೆ ಕಿಲಾ ಫತೇಹ್.

   ಇವರು ನಾಲ್ಕು ವರ್ಷದಿಂದ ಮಾಡಿದ್ದೇನು?

   ಈ ಅಪ್ರಬುದ್ಧ ನಾಯಕ ರಾಹುಲ್ ಗಾಂಧಿ ಕಳೆದ ನಾಲ್ಕು ವರ್ಷದಿಂದ ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸಿದ್ದು ಬಿಟ್ಟರೆ ಇನ್ನೇನು ಮಾಡಿದ್ದಾರೆ? ಗಾಂಧಿ ಎಂಬ ಅಡ್ಡ ಹೆಸರನ್ನು ಬಳಸಿಕೊಂಡು ದೇಶದ ಜನರನ್ನು ಮೂರ್ಖರನ್ನಾಗಿ ಮಾಡುತ್ತಿದ್ದಾರೆ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ ನಟೇಶ್ ಶೇಖರ್ ಎಂಬುವವರು.

   ನಿಮ್ಮ ಮಾತು ಸತ್ಯ!

   ನಿಮ್ಮ ಮಾತು ಸತ್ಯ. ಮೋದಿಯವರು ರಿಯರ್ ವ್ಯೂ ಕನ್ನಡಿ ನೋಡಿ ಗಾಡಿ ಓಡಿಸುತ್ತಾರೆ. ಏಕೆಂದರೆ ಅವರಿಗೆ ಭಾರತದಲ್ಲಿ 2 ಜಿ, ಕಾಮನ್ ವೆಲ್ತ್, ಕಲ್ಲಿದ್ದಲು ಹಗರಣಗಳು ಮತ್ತೆ ಘಟಿಸದಂತೆ ಎಚ್ಚರಿಕೆ ವಹಿಸಬೇಕಿದೆ ಎಂದು ಕುಟುಕಿದ್ದಾರೆ ಅವಿನಾಶ್ ಎಂಬುವವರು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   "Narendra Modi is the kind of prime minister who drives the vehicle looking in the rear view mirror..." AICC president Rahul Gandhi's statement in his speech in Hospet, Bellari district becomes viral now! Many of his fans supported his views and many of Modi fans blamed him for the statement.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ