ಪ್ರಕಾಶ್ ರಾಜ್ ವಿವಾದಾತ್ಮಕ ಹೇಳಿಕೆ: ಟ್ವಿಟ್ಟಿಗರು ಏನಂತಾರೆ?
"ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನನಗಿಂತ ಒಳ್ಳೆಯ ನಟರು. ನನಗೆ ಸಂದ 5 ರಾಷ್ಟ್ರಪ್ರಶಸ್ತಿಗಳನ್ನು ಅವರಿಗೇ ಕೊಟ್ಟುಬಿಡೋಣ ಅನ್ನಿಸಿದೆ... " ಎಂಬ ನಟ ಪ್ರಕಾಶ್ ರಾಜ್ ಅವರ ವಿವಾದಾತ್ಮಕ ಹೇಳಿಕೆ ಇದೀಗ ಟ್ವಿಟ್ಟರ್ ನಲ್ಲೂ ಟ್ರೆಂಡಿಂಗ್ ಆಗಿದೆ.
ಬೆಂಗಳೂರಿನಲ್ಲಿ, 3 ದಿನಗಳ ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್(ಡಿವೈಎಫ್ ಐ)ನ 11 ನೇ ರಾಜ್ಯ ಸಮ್ಮೇಳನ ಉದ್ಘಾಟಿಸಿದ ಅವರು, ಗೌರಿ ಲಂಕೇಶ್ ಹತ್ಯೆಯ ಕುರಿತೂ ಮಾತನಾಡಿದರು. ಗೌರಿಯನ್ನು ಹತ್ಯೆ ಮಾಡಿದ್ದು ಯಾರು ಎಂಬುದು ಗೊತ್ತಿಲ್ಲ, ಆದರೆ ಅವರ ಸಾವನ್ನು ಸಂಭ್ರಮಿಸುತ್ತಿರುವವರು ಯಾರು ಎಂಬುದು ಗೊತ್ತಿದೆ ಎಂದು 5 ಬಾರಿ ರಾಷ್ಟ್ರಪ್ರಶಸ್ತಿ ಪಡೆದ ಬಹುಭಾಷಾ ನಟ, ನಿರ್ದೇಶಕ, ನಿರ್ಮಾಪಕ ಪ್ರಕಾಶ್ ರಾಜ್ ಹೇಳಿದ್ದರು.
ಈ ಕುರಿತು ಟ್ವಿಟ್ಟರ್ ನಲ್ಲೂ ಇದೀಗ ಚರ್ಚೆ ಆರಂಭವಾಗಿದ್ದು, ಪ್ರಕಾಶ್ ರಾಜ್ ಹೇಳಿಕೆಯನ್ನು ಹಲವರು ಬೆಂಬಲಿಸಿದ್ದರೆ, ಮತ್ತಷ್ಟು ಜನ, ದಕ್ಷಿಣ ಕನ್ನಡ ಜಿಲ್ಲೆಯವರೇ ಆದ ಪ್ರಕಾಶ್ ರಾಜ್, ಅಲ್ಲಿ ಹಲವು ಹಿಂದೂ ಪರ ಹೋರಾಟಗಾರರ ಹತ್ಯೆಯಾದಾಗ ಮಾತನಾಡದವರು, ಈಗೇಕೆ ಪ್ರಶಸ್ತಿ ವಾಪಸಾತಿಯ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ಆದರೆ ಈ ಕುರಿತು ರಾಷ್ಟ್ರೀಯ ಮಾಧ್ಯಮಗಳಲ್ಲೂ ಚರ್ಚೆಯಾಗುತ್ತಿದ್ದುದನ್ನು ಗಮನಿಸಿದ ಪ್ರಕಾಶ್ ರಾಜ್, ತಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದಿದ್ದಾರೆ. ಜೊತೆಗೆ ತಾವು ನಿಜವಾಗಿಯೂ ಮಾತನಾಡಿದ್ದು ಏನು ಎಂಬುದನ್ನು ಪುನರುಚ್ಚರಿಸಿದ ವಿಡಿಯೋವೊಂದನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿದ್ದಾರೆ.
What's said...n what's not said. For all out there .. thank you pic.twitter.com/zIT7rnkFxb
— Prakash Raj (@prakashraaj) October 2, 2017
"ನನಗೆ ಬಂದಿರುವ ಪ್ರಶಸ್ತಿಗಳ ಬಗ್ಗೆ ನನಗೆ ಗೌರವವಿದೆ. ಅವನ್ನು ಹಿಂದಿರುಗಿಸುತ್ತೇನೆ ಎಂದು ನಾನು ಹೇಳಿಯೇ ಇಲ್ಲ. ಗೌರಿ ಹತ್ಯೆಯನ್ನು ಸಂಭ್ರಮಿಸುತ್ತಿರುವ ಹಲವರು ಪ್ರಧಾನಿ ಮೋದಿಯವರ ಫಾಲೋವರ್ ಗಳಾದರೂ ನಮ್ಮ ಪ್ರಧಾನಿ ಯಾಕೆ ಸುಮ್ಮನಿದ್ದಾರೆ ಎಂದಷ್ಟೇ ನಾನು ಪ್ರಶ್ನಿಸಿದ್ದು. ನಾನು ಯಾವ ರಾಜಕೀಯ ಪಕ್ಷಕ್ಕೂ ಸೇರಿದವನಲ್ಲ, ನಾನು ಭಾರತದ ಒಬ್ಬ ಪ್ರಜೆಯಷ್ಟೆ ಎಂದು ವಿಡಿಯೋ ಮೂಲಕ ಅವರು ಹೇಳಿದ್ದಾರೆ.
|
ಪ್ರಕಾಶ್ ರಾಜ್ ರ ಮೌನ ಅಚ್ಚರಿ ಮೂಡಿಸಿತ್ತು!
ಪ್ರಕಾಶ್ ರಾಜ್ ಮೂಲತಃ ದಕ್ಷಿಣ ಕನ್ನಡದವರು. ಕಳೆದ ನಾಲ್ಕು ವರ್ಷಗಳಲ್ಲಿ ಈ ಜಿಲ್ಲೆಯಲ್ಲಿ ಎಷ್ಟೆಲ್ಲ ಹಿಂದು ಕಾರ್ಯಕರ್ತರ ಹತ್ಯೆಯಾಗಿದೆ. ಆಗೆಲ್ಲ ಅವರ ಮೌನ ಅಚ್ಚರಿ ಮೂಡಿಸಿತ್ತು! ಎಂದು ಕಿರಣ್ ಕುಮಾರ್ ಎಸ್. ಎನ್ನುವವರು ಟ್ವೀಟ್ ಮಾಡಿದ್ದಾರೆ.
|
ಮೋದಿ ಸರ್ಕಾರದ ಮೇಲೇಕೆ ಸಿಟ್ಟು?
ಗೌರಿ ಲಂಕೇಶ್ ಹತ್ಯೆಯಾಗಿರುವುದು ಕಾಂಗ್ರೆಸ್ ಆಡಳಿತದ, ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ರಾಜ್ಯದಲ್ಲಿ. ಆದರೆ ಪ್ರಕಾಶ್ ರಾಜ್, ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಕೋಪಗೊಂಡಿರುವುದೇಕೆ ಎಂಬುದು ಅರ್ಥವಾಗುತ್ತಿಲ್ಲ ಎಂದು ಸೋನಮ್ ಮಹಾಜನ್ ಎನ್ನುವವರು ಟ್ವೀಟ್ ಮಾಡಿದ್ದಾರೆ.
|
ಭೇಷ್ ಪ್ರಕಾಶ್ ರಾಜ್!
ಭಾರತದ ಕೆಲವು ಯಶಸ್ವೀ ನಟರಲ್ಲೊಬ್ಬರಾದ ಪ್ರಕಾಶ್ ರಾಜ್ ಭ್ರಷ್ಟ ಮತ್ತು ಕೋಮುವಾದದ ಬಿಜೆಪಿ ವಿರುದ್ಧ ಮಾತನಾಡುವ ಧೈರ್ಯ ತೋರಿದ್ದಾರೆ. ಬಿಗ್ ಬಿ ಇವರನ್ನು ನೋಡಿ ಕಲಿಯಬೇಕಿದೆ ಎಂದು ವಿಕಾಸ್ ಪುರೋಹಿತ್ ಎಂಬುವವರು ಟ್ವೀಟ್ ಮಾಡಿದ್ದಾರೆ.
|
ಯೋಧರ ಹತ್ಯೆಯಾದಾಗ ಸಂಭ್ರಮಪಟ್ಟವರು ಯಾರು?
ಸಿಆರ್ ಪಿಎಫ್ ಯೋಧರನ್ನು ನಕ್ಸಲರು ಕೊಂದಾಗ ಇದೇ ಗೌರಿ ಲಂಕೇಶ್ ಬೆಂಬಲಿಸುತ್ತಿದ್ದ ಜೆಎನ್ ಯು ವಿದ್ಯಾರ್ಥಿಗಳಾದ ಕನ್ನಯ್ಯ ಮತ್ತವರ ಸಹಚರರು ಹೇಗೆ ಸಂಭ್ರಮ ಆಚರಿಸುತ್ತಿದ್ದರು ಎಂಬುದು ಪ್ರಕಾಶ್ ರಾಜ್ ಅವರಿಗೆ ತಿಳಿದಿದೆಯೇ ಎಂದು ಶೈತಾನ್ ಬಚ್ಚಾ ಎಂಬ ಟ್ವಿಟ್ಟರ್ ಖಾತೆಯಿಂದ ಪೋಸ್ಟ್ ಮಾಡಲಾಗಿದೆ.
|
ಮೋದಿಯವರಿಗಾಗಿ ಆಸ್ಕರ್ ಪ್ರಶಸ್ತಿ ಕಾಯುತ್ತಿದೆ!
ಸತ್ಯವನ್ನೇ ಹೇಳಿದ್ದೀರಿ. ಮೋದಿಯವರನ್ನು ಸರಿಯಾಗಿ ಅಳೆದಿದ್ದೀರಿ. ಆಸ್ಕರ್ ಪ್ರಶಸ್ತಿ ಅವರಿಗಾಗಿ ಕಾಯುತ್ತಿದೆ, ಸ್ವಲ್ಪ ಕಾಯಿರಿ. ನೀವೇಕೆ ನೀವು ಕಷ್ಟಪಟ್ಟು ಗಳಿಸಿದ ಪ್ರಶಸ್ತಿಯ್ನು ಹಿಂದಿರುಗಿಸುತ್ತೀರಿ ಎಂದು ಮಸಿಲಮಣಿ ಆರ್ ಎಂಬುವವರು ಟ್ವೀಟ್ ಮಾಡಿದ್ದಾರೆ.
|
ಪ್ರಶಸ್ತಿಯನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಹಿಂದಿರುಗಿಸಿ!
ಪ್ರಕಾಶ್ ರಾಜ್ ತಮ್ಮ ಪ್ರಶಸ್ತಿಗಳನ್ನು ಕರ್ನಾಟಕದ ಕಾಂಗ್ರೆಸ್ ಸರ್ಕಾರಕ್ಕೆ ಹಿಂದಿರುಗಿಸಬೇಕು. ಈ ಪ್ರಶಸ್ತಿಗಳಿಂದ ಬಂದ ಹಣವನ್ನು ಕೇರಳ ಮತ್ತು ಪಶ್ಚಿಮ ಬಂಗಾಳದಲ್ಲಿ ಭೀಕರ ಹತ್ಯೆಗೊಳಗಾದ ಆರ್ ಎಸ್ ಎಸ್ ಮತ್ತು ಬಿಜೆಪಿ ಕಾರ್ಯಕರ್ತರ ಬಡ ಕುಟುಂಬಗಳಿಗೆ ದಾನಮಾಡಬೇಕು ಎಂದು ಸೀಮಾ ಚೌಧರಿ ಎನ್ನುವವರು ಟ್ವೀಟ್ ಮಾಡಿದ್ದಾರೆ.
|
ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮಾತನಾಡಲಿ ನೋಡೋಣ!
ಪ್ರಕಾಶ್ ರಾಜ್ ಅವರಿಗೆ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತನಾಡುವ ತಾಕತ್ತಿಲ್ಲ, ಆದ್ರೆ ಮೋದಿಯವರನ್ನು ಸುಲಭವಾಗಿ ಬೈಯ್ಯಬಲ್ಲರು ಎಂದು ದೇವಿಕಾ ಎನ್ನುವವರು ಟ್ವೀಟ್ ಮಾಡಿದ್ದಾರೆ.











Click it and Unblock the Notifications