ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪರೇಶ್ ನಿಗೂಢ ಸಾವಿನ ನಂತರ ಕಟ್ಟೆಯೊಡೆಯಿತೇ ಹಿಂದುಗಳ ತಾಳ್ಮೆ?

|
Google Oneindia Kannada News

Recommended Video

ಪರೇಶ್ ನಿಗೂಢ ಸಾವಿನ ನಂತರ ಕಟ್ಟೆಯೊಡೆಯಿತೇ ಹಿಂದುಗಳ ತಾಳ್ಮೆ? | Oneindia Kannada

ಪರೇಶ್ ಮೆಸ್ತಾ ಸಾವಿನ ನಂತರ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಬಿಗುವಿನ ವಾತಾವರಣ ತಲೆದೋರಿದೆ. ಡಿ.6 ರಂದು ನಾಪತ್ತೆಯಾಗಿದ್ದ ಪರೇಶ್ ಮೆಸ್ತಾ ಡಿ.8 ರಂದು ಹೊನ್ನಾವರದ ಕೆರೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದರು. ನೋಡಲು ಭೀಕರವಾಗಿದ್ದ ಅವರ ಶವ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.

ಪರೇಶ್ ಮೇಸ್ತ ಶವ ಪತ್ತೆ: ಹೊನ್ನಾವರದಲ್ಲಿ ಉದ್ವಿಗ್ನ ವಾತಾವರಣಪರೇಶ್ ಮೇಸ್ತ ಶವ ಪತ್ತೆ: ಹೊನ್ನಾವರದಲ್ಲಿ ಉದ್ವಿಗ್ನ ವಾತಾವರಣ

ಕೋಮುಘರ್ಷಣೆ ಸಂದರ್ಭದಲ್ಲಿ ನಾಪತ್ತೆಯಾಗಿದ್ದ ಪರೇಶ್ ಹೀಗೆ ಶವವಾಗಿ ಪತ್ತೆಯಾಗಿರುವುದರಿಂದ ಬಿಜೆಪಿ ಮತ್ತು ಹಿಂದುಪರ ಸಂಘಟನೆಗಳು, ಇದರಲ್ಲಿ ಮತೀಯ ಶಕ್ತಿಯ ಕೈವಾಡವಿದೆಯೆಂದು ದೂರಿದ್ದವು. ಇದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಕೃತ್ಯ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಆರೋಪಿಸಿದ್ದರು.

ಪರೇಶ್ ಅವರ ಶವ ಸಂಪೂರ್ಣ ಕಪ್ಪಾಗಿದ್ದು, ಭೀಕರವಾಗಿದೆ. ಸಾಯುವುದಕ್ಕೂ ಮುನ್ನ ಅವರ ದೇಹದ ಮೇಲೆ ಕಿಡಿಗೇಡಿಗಳು ಕುದಿಯುತ್ತಿರುವ ಎಣ್ಣೆಯನ್ನು ಸುರಿದಿರಬಹುದು ಎಂದು ಅನುಮಾನಿಸಲಾಗಿದೆ. ಅಲ್ಲದೆ ಅವರ ಕೈಮೇಲಿದ್ದ ಜೈ ಶ್ರೀರಾಮ್ ಎಂಬ ಹಚ್ಚೆಯನ್ನೂ ಕೊಚ್ಚಿ ತೆಗೆಯಲಾಗಿದೆ, ಅವರ ತಲೆಯ ಮೇಲೂ ನಾಲ್ಕೈದು ಕಡೆ ಮಚ್ಚಿನ ಗುರುತುಗಳಿವೆ. ಆದ್ದರಿಂದಲೇ ಇದು ಮತಾಂಧರ ಕೃತ್ಯ ಎನ್ನಲಾಗುತ್ತಿದೆ.

ಹೊನ್ನಾವರ: 2 ಗುಂಪು ಮಧ್ಯೆ ಘರ್ಷಣೆ, ಕಲ್ಲು ತೂರಾಟ, ಲಾಠಿ ಚಾರ್ಜ್ಹೊನ್ನಾವರ: 2 ಗುಂಪು ಮಧ್ಯೆ ಘರ್ಷಣೆ, ಕಲ್ಲು ತೂರಾಟ, ಲಾಠಿ ಚಾರ್ಜ್

ಇದೀಗ ಹೊನ್ನಾವರದಾದ್ಯಂತ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಈ ನಡೆವೆ ಪರೇಶ್ ಸಾವು ಟ್ವಿಟ್ಟರ್ ನಲ್ಲೂ ಸಾಕಷ್ಟು ಚರ್ಚೆಯಾಗಿದೆ. ಪರೇಶ್ ಮೆಸ್ತಾ ನಿಗೂಢ ಸಾವಿನ ಹಿಂದೆ ಮತೀಯ ಶಕ್ತಿಗಳ ಕೈವಾಡವಿದೆ ಎಂದು ಟ್ವಿಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಮೌನವಾಗಿರುವುದೇಕೆ?

ಪರೇಶ್ ಮೆಸ್ತಾ ಅವರ ಬರ್ಬರ ಹತ್ಯೆಯನ್ನು ಯಾವುದಾದರೂ ನಾಗರಿಕ ಸಮಾಜ ಒಪ್ಪಿಕೊಳ್ಳುತ್ತದೆಯೇ? ಇಷ್ಟಾದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮೌನವಾಗಿರುವುದೇಕೆ? ಮೃತರು ಹಿಂದು ಎಂಬ ಕಾರಣಕ್ಕೇ..?! ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತನೀಡುವ ಮುನ್ನ...

ಪ್ರೀತಿಯ ಕನ್ನಡಿಗರೇ ನೀವು ಈ ಬಾರಿ ಮತದಾನ ಮಾಡುವಾಗ ಪರೇಶ್ ಮೆಸ್ತಾ ಎಂಬ ನತದೃಷ್ಟ ಹಿಂದುವನ್ನೊಮ್ಮೆ ನೆನಪಿಸಿಕೊಳ್ಳಿ. ಎಲ್ಲವನ್ನೂ ಮರೆತು, ನಿಮ್ಮ ಭವಿಷ್ಯಕ್ಕಾಗಿಯಾದರೂ ಕಾಂಗ್ರೆಸ್ ಗೆ ಮತಚಲಾಯಿಸಬೇಡಿ. ಇಲ್ಲದಿದ್ದರೆ ಪ್ರತಿ ಮನೆಯಲ್ಲೂ ಪರೇಶ್ ಹುಟ್ಟುತ್ತಾನೆ ಎಂದು ರಿತು ರಾಥೋರ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಸಿದ್ದು ಓಲೈಕೆ ರಾಜಕೀಯ

ಹೊನ್ನಾವರದಲ್ಲಿ ಪಿಎಫ್ ಐ ಗೂಂಡಾಗಳು ಮುಕ್ತವಾಗಿ ದಾಂಧಲೆ ನಡೆಸುತ್ತಿವೆ. ಸಿಎಂ ಸಿದ್ದು ಓಲೈಕೆ ರಾಜಕೀಯದಲ್ಲಿ ಜಿಹಾದಿಗಳಿಗೆ ಸ್ವಾತಂತ್ರ್ಯ ನೀಡಿ, ಪೊಲೀಸರ ಕೈಯನ್ನು ಕಟ್ಟಿಹಾಕಲಾಗಿದೆ. ಅದಕ್ಕೆ ತಾಜಾ ಉದಾಹರಣೆ ಪರೇಶ್ ಮೆಸ್ತಾ ಸಾವು ಎಂದು ಮಾಯಾ ಎಂಬುವವರು ನೋವಿನಿಂದ ಟ್ವೀಟ್ ಮಾಡಿದ್ದಾರೆ.

ಭಯಹುಟ್ಟಿಸುತ್ತಿರುವ ಘಟನೆಗಳು

ಕರ್ನಾಟಕದಲ್ಲಿ ಇತ್ತೀಚೆಗೆ ನಡೆಯುತ್ತಿರುವ ಘಟನೆಗಳು ನನ್ನಲ್ಲಿ ಭಯ ಹುಟ್ಟಿಸುತ್ತಿವೆ. ಈ ಕುರಿತು ಎಆಜ್ಯ ಸರ್ಕಾರದ ನಿರಾಸಕ್ತಿಯೂ ಬೆಚ್ಚಿಬೀಳಿಸುತ್ತದೆ! ಗೌರಿ ಹತ್ಯೆಯ ಸಮಯದಲ್ಲಿ ಪ್ರತಿಕ್ರಿಯಿಸಿದಂತೆ ರಾಜ್ಯ ಸರ್ಕಾರ ಈಗೇಕೆ ಪ್ರತಿಕ್ರಿಯಿಸುತ್ತಿಲ್ಲ?! ಪರೇಶ್ ಮೆಸ್ತಾ ಬರ್ಬರ ಹತ್ಯೆ ನಿಜಕ್ಕೂ ಹೃದಯವನ್ನು ಕಲಕುತ್ತದೆ ಎಂದು ದೀಕ್ಷಾ ಶೆಟ್ಟಿ ಎನ್ನುವವರು ಟ್ವೀಟ್ ಮಾಡಿದ್ದಾರೆ.

ಪ್ರಕಾಶ್ ರೈ ಅವರೇ ಏನನ್ನುತ್ತೀರಾ..?

ಪರೇಶ್ ಮೆಸ್ತಾ ಒಬ್ಬ ನತದೃಷ್ಟ ಹಿಂದು. ಪ್ರೀತಿಯ ಪ್ರಕಾಶ್ ರೈ ಅವರೇ, ನೀವು ಯಾವಾಗ ಈ ಹುಡುಗನ ಬರ್ಬರ ಹತ್ಯೆಯ ಬಗ್ಗೆ ಮಾತನಾಡುತ್ತೀರಾ? ಅಥವಾ ಟ್ವೀಟ್ ಮಾಡುತ್ತೀರಾ ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ ವೈಗಾ ರಮಾನಾತ್ ಅಯ್ಯರ್.

English summary
Karnataka BJP leader and Hindu for organisations blame Karnataka state government for Paresh Mesta's death. Paresh mesta was killed by some unknown men in Honnavar in December 6th. Twitterians reacted for his death.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X