ಹತಾಶರಾಗಬೇಡಿ ಎಂ.ಬಿ.ಪಾಟೀಲರೇ: ಸಚಿವರ ವಿರುದ್ಧ ಯತ್ನಾಳ್ ಕಿಡಿ!
ಬೆಂಗಳೂರು: ಎಂಬಿ ಪಾಟೀಲ್ ಮತ್ತು ಬಸನಗೌಡ ಪಾಟೀಲ್ ಯತ್ನಾಳ್ ನಡುವಿನ ಕಿರಿಕ್ ದೊಡ್ಡದಾಗುತ್ತಿದೆ. ಚಕ್ರವರ್ತಿ ಸೂಲಿಬೆಲೆ ವಿರುದ್ಧ ಮಾತನಾಡಿದ್ದಕ್ಕಾಗಿ ಎಂ.ಬಿ. ಪಾಟೀಲ್ ವಿರುದ್ಧ ಯತ್ನಾಳ್ ಗುಡುಗಿದ್ದರು. ಇದೀಗ ಯತ್ನಾಳ್ ಈ ಹಿಂದೆ ನೀಡಿದ್ದ ಹೇಳಿಕೆಗಳನ್ನು ಟಾರ್ಗೆಟ್ ಮಾಡಿ ತಿರುಗೇಟು ನೀಡುತ್ತಿದ್ದಾರೆ ಸಚಿವ ಎಂಬಿಪಿ.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಿನ್ನೆ ಟ್ವೀಟ್ ಮಾಡಿ ಎಂಬಿ ಪಾಟೀಲ್‌ರ ಹೇಳಿಕೆಗೆ ತಿರುಗೇಟು ನೀಡಿದ್ದರು. ಯಾರೇ ಮಾತಾಡಿದ್ರು ಜೈಲಿಗೆ ಹಾಕ್ತೀವಿ ಅಂತ ಹೇಳೋಕ್ಕೆ ಇದು ತಾಲಿಬಾನ್ ಆಡಳಿತ ಅಲ್ಲ, ಕರ್ನಾಟಕ ಎನ್ನುವುದನ್ನು ಎಂಬಿ ಪಾಟೀಲ್ ಅವರು ಮರೆಯಬಾರದು. ಎಫ್‌ಐಆರ್ ಮಾಡಿಸ್ತೀವಿ ಜೈಲಿಗೆ ಕಳುಹಿಸ್ತೀವಿ ಪದೇ ಪದೇ ಅನ್ನುವುದಕ್ಕೆ ಇವರೇನು ನ್ಯಾಯಾಧೀಶರ? ಎಂದು ವಾಗ್ದಾಳಿ ನಡೆಸಿದ್ದರು ಯತ್ನಾಳ್. ಹೀಗೆ ಯತ್ನಾಳ್‌ರ ಮಾತಿಗೆ ಎಂಬಿಪಿ ಕೂಡ ತಿರಗೇಟು ನೀಡಿದ್ದರು. ಇದೀಗ ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿದೆ ಇಬ್ಬರ ಜಗಳ.

'ವಿಪಕ್ಷ ನಾಯಕನ ಸ್ಥಾನಕ್ಕೂ ರೇಟ್ ಫಿಕ್ಸ್?'
ಅಷ್ಟಕ್ಕೂ ಬಸನಗೌಡ ಪಾಟೀಲ್ ಯತ್ನಾಳ್ ಹಿಂದೆ ಸಿಎಂ ಸ್ಥಾನ ಗಿಟ್ಟಿಸಲು ₹2500 ಕೋಟಿ ಕೇಳಿದ್ರು ಅನ್ನೋ ಆರೋಪ ಮಾಡಿದ್ರು. ಈ ಹೇಳಿಕೆಯನ್ನೇ ದಾಳ ಮಾಡ್ಕೊಂಡು ಎಂಬಿ ಪಾಟೀಲ್ ಇದೀಗ ಶಾಸಕ ಯತ್ನಾಳ್ ವಿರುದ್ಧ ಗುಡುಗಿದ್ದಾರೆ. ರಿಸಲ್ಟ್ ಮುಗಿದು 1 ತಿಂಗಳು ಕಳೆಯುತ್ತಾ ಬಂದಿದೆ. ಆದರೂ ಬಿಜೆಪಿ ವಿಪಕ್ಷ ನಾಯಕನನ್ನ ಫೈನಲ್ ಮಾಡಿಲ್ಲ. ಇದೇ ಕಾರಣಕ್ಕೆ 'ವಿಪಕ್ಷ ನಾಯಕನ ಸ್ಥಾನಕ್ಕೂ ಇನ್ನೂ ರೇಟ್ ಫಿಕ್ಸ್ ಆಗಿಲ್ವಾ?' ಅನ್ನೋ ಪ್ರಶ್ನೆ ಮುಂದಿಟ್ಟು MBP ವಾಗ್ದಾಳಿ ನಡೆಸಿದ್ದಾರೆ. ಈ ಹೇಳಿಕೆಗೆ ಯತ್ನಾಳ್ ಕೂಡ ಗುಡುಗಿದ್ದಾರೆ. ಹೀಗೆ ಇಬ್ಬರ ನಡುವೆ ಮಾತಿನ ಯುದ್ಧ ದೊಡ್ಡದಾಗುತ್ತಿದೆ.
()Just wondering is the price for LoP still getting fixed?! pic.twitter.com/jAWlTpB7Gg
— M B Patil (@MBPatil) June 7, 2023
ಎಂಬಿ ಪಾಟೀಲರೇ ಇಷ್ಟು ಹತಾಶರಾಗಬೇಡಿ!
ಇನ್ನೊಂದ್ಕಡೆ ಎಂಬಿ ಪಾಟೀಲ್ ಅವರು ಶಾಸಕ ಯತ್ನಾಳ್ ನೀಡಿದ್ದ ಹಿಂದಿನ ಹೇಳಿಕೆಯ ಪತ್ರಿಕೆ ತುಣುಕನ್ನ ಟ್ವೀಟ್ ಮಾಡಿದ್ದಕ್ಕೆ ಯತ್ನಾಳ್ ಖಡಕ್ ಉತ್ತರ ನೀಡಿದ್ದಾರೆ. 'ನಾನು ಹೇಳಿದ್ದು ಅರ್ಥ ಮಾಡಿಕೊಳ್ಳುವುದಕ್ಕೆ ತಾಳ್ಮೆ ಹಾಗು ಸ್ವಲ್ಪ ತಿಳುವಳಿಕೆ ಬೇಕಾಗುತ್ತದೆ @MBPatilರೇ! ನಾನು ಹೇಳಿದ್ದು ರಾಜಕೀಯ ವ್ಯವಸ್ಥೆಯ ಬಗ್ಗೆ. ನಿಮಗೆ ಗೃಹ ಹಾಗು ಭಾರಿ ಸಂಪನ್ಮೂಲ ಜಲಸಂಪನ್ಮೂಲ ಇಲಾಖೆ ಸಿಗದಿರುವ ಕಾರಣ ತಾವು ಇಷ್ಟು ಹತಾಶರಾಗಬೇಡಿ. ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಇರಲಿ.' ಎಂದು ಎಂಬಿ ಪಾಟೀಲ್ ವಿರುದ್ಧ ಗುಡುಗಿದ್ದಾರೆ. ಹೀಗೆ ಇವರಿಬ್ಬರ ನಡುವೆ ದೊಡ್ಡ ಕದನ ಆರಂಭವಾಗಿದೆ.
()ನಾನು ಹೇಳಿದ್ದು ಅರ್ಥ ಮಾಡಿಕೊಳ್ಳುವುದಕ್ಕೆ ತಾಳ್ಮೆ ಹಾಗು ಸ್ವಲ್ಪ ತಿಳುವಳಿಕೆ ಬೇಕಾಗುತ್ತದೆ @MBPatil ರೇ!
— Basanagouda R Patil (Yatnal) (@BasanagoudaBJP) June 7, 2023
ನಾನು ಹೇಳಿದ್ದು ರಾಜಕೀಯ ವ್ಯವಸ್ಥೆಯ ಬಗ್ಗೆ.
ನಿಮಗೆ ಗೃಹ ಹಾಗು ಭಾರಿ ಸಂಪನ್ಮೂಲ ಜಲಸಂಪನ್ಮೂಲ ಇಲಾಖೆ ಸಿಗದಿರುವ ಕಾರಣ ತಾವು ಇಷ್ಟು ಹತಾಶರಾಗಬೇಡಿ.
ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಇರಲಿ. https://t.co/bQjPD0E92J
ನಿನ್ನೆಯ ಹೇಳಿಕೆಗೂ ಇಂದು ತಿರುಗೇಟು!
ಮತ್ತೊಂದ್ಕಡೆ ನಿನ್ನೆ ಎಂಬಿಪಿ ಮಾಡಿದ್ದ ಟ್ವೀಟ್‌ಗೂ ಇಂದು ಯತ್ನಾಳ್ ರೀಪ್ಲೇ ಕೊಟ್ಟು, ಚಾಲೆಂಜ್ ಹಾಕಿದ್ದಾರೆ. 'ಸಂವಿಧಾನ ವಿರೋಧಿ ಅಥವಾ ಪ್ರಜಾಪ್ರಭುತ್ವದ ವ್ಯವಸ್ಥೆಗೆ ವಿರೋಧವಾಗಿದ್ದರೆ ಯಾವ ನ್ಯಾಯಾಲಯ ಯೋಗಿ ಮಾಡೆಲ್ ವಿರುದ್ಧ ತೀರ್ಪು ನೀಡಿದೆ @MBPatilರೇ, ನಿಮ್ಮ ನಾಯಕರನ್ನು ಮತ್ತು ಭಾಂದವರನ್ನು ಸಂತೋಷಪಡಿಸುವ ಭರದಲ್ಲಿ ಏನೋ ಮಾಡಿಬಿಡುತ್ತೇವೆ ಎಂದು ಮೆರೆಯಬೇಡಿ! ನಾನು ಹೇಳಿದ್ದು ದೇಶವಿರೋಧಿ ಚಟುವಟಿಕೆ ನಡೆಸುವವರಿಗೆ ತಕ್ಕ ಪಾಠ ಕಲಿಸಬೇಕು ಎಂದು, ನನ್ನ ಮಾತಿಗೆ ಈಗಲೂ ನಾನು ಬದ್ದ.' ಎಂದಿದ್ದಾರೆ ಶಾಸಕ ಯತ್ನಾಳ್.

ಒಟ್ನಲ್ಲಿ ಚಕ್ರವರ್ತಿ ಸೂಲಿಬೆಲೆ ಬಗ್ಗೆ ಸಚಿವ ಎಂ.ಬಿ.ಪಾಟೀಲ್ ನೀಡಿದ್ದ ಹೇಳಿಕೆಗೆ ಎಚ್ಚರಿಕೆ ಕೊಡುವ ರೀತಿ BJP ತಿರುಗಿಬಿದ್ದಿದೆ. ಅದ್ರಲ್ಲೂ ಯತ್ನಾಳ್, ಎಂಬಿಪಿ ವಿರುದ್ಧ ತೀಕ್ಷ್ಣವಾಗಿಯೇ ಟ್ವೀಟ್ ಮಾಡಿದ್ರು. ನಿನ್ನೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಟ್ವೀಟ್‌ನಲ್ಲಿ ಪ್ರಜಾಪ್ರಭುತ್ವದ ಬಗ್ಗೆಯೂ ಉಲ್ಲೇಖ ಮಾಡಿದ್ದರು. ಅದೇ ಟ್ವೀಟ್‌ಗೆ ತಕ್ಕ ತಿರುಗೇಟು ನೀಡಿದ್ದ ಎಂ.ಬಿ. ಪಾಟೀಲ್, ಕಳೆದ 4 ವರ್ಷ ಪ್ರಜಾಪ್ರಭುತ್ವ ಎಲ್ಲಿ ಹೋಗಿತ್ತು? ಎಂದು ಪ್ರಶ್ನೆ ಹಾಕಿ ಯತ್ನಾಳ್‌ಗೆ ಸವಾಲು ಎಸೆದಿದ್ದರು. ಹೀಗಾಗಿ ಇವರಿಬ್ಬರ ನಡುವೆ ಮಾತಿನ ಮಹಾಯುದ್ಧವು ಜೋರಾಗಿದ್ದು, ಈ ಕಿರಿಕ್ ಯಾವಾಗ ಮುಗಿಯುತ್ತೆ ಅನ್ನೋದನ್ನ ಕಾದು ನೋಡಬೇಕು.












Click it and Unblock the Notifications