ಕೆಪಿಸಿಸಿ ಶೋಕಾಸ್ ನೋಟಿಸ್‌ಗೆ ರೋಷನ್ ಬೇಗ್ ಖಡಕ್ ಉತ್ತರ!

ಬೆಂಗಳೂರು, ಮೇ 21 : 'ವೇಣುಗೋಪಾಲ್ ಅವರಂತಹ ಬಫೂನ್, ಸಿದ್ದರಾಮಯ್ಯ ಅವರಂತಹ ಅಹಂಕಾರಿ, ದಿನೇಶ್ ಗುಂಡೂರಾವ್ ಅವರಂತಹ ಫ್ಲಾಪ್ ಅಧ್ಯಕ್ಷರಿಂದ ಕಾಂಗ್ರೆಸ್ ಪಕ್ಷ ಉದ್ದಾರ ವಾಗುವುದಿಲ್ಲ' ಮಾಜಿ ಸಚಿವ, ಶಿವಾಜಿನಗರ ಶಾಸಕ ರೋಷನ್ ಬೇಗ್ ಅವರ ಹೇಳಿಕೆ ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಂಚಲನ ಉಂಟು ಮಾಡಿದೆ.

ಮಂಗಳವಾರ ಬೆಳಗ್ಗೆ ರೋಷನ್ ಬೇಗ್ ನೀಡಿರುವ ಹೇಳಿಕೆಗೆ ಹಲವು ಕಾಂಗ್ರೆಸ್ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ಕೆಪಿಸಿಸಿ ರೋಷನ್ ಬೇಗ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಹೇಳಿಕೆ ಬಗ್ಗೆ ವಿವರಣೆ ನೀಡುವಂತೆ ಸೂಚನೆ ನೀಡಿದೆ.

'ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 79 ಸ್ಥಾನ ಬರುವುದಕ್ಕೆ ಕಾರಣ ಲಿಂಗಾಯತ ಧರ್ಮ ಒಡೆದಿದ್ದು. ಇದರಿಂದಾಗಿ 25 ರಿಂದ 30 ಸ್ಥಾನಗಳನ್ನು ಕಳೆದುಕೊಳ್ಳಬೇಕಾಯಿತು. ಕಾಂಗ್ರೆಸ್ ಪಕ್ಷದಲ್ಲಿ ಹಿರಿಯರನ್ನು ಕಡೆಗಣಿಸಲಾಗುತ್ತಿದೆ' ಎಂದು ರೋಷನ್ ಬೇಗ್ ಟೀಕಿಸಿದ್ದರು.

ಶೋಕಾಸ್ ನೋಟಿಸ್ ಬಗ್ಗೆ ವಿವರಣೆ ನೀಡಿರುವ ರೋಷನ್ ಬೇಗ್, 'ಕೆಪಿಸಿಸಿಯಿಂದ ಶೋಕಾಸ್ ನೋಟಿಸ್ ಬಂದಿದೆ. ನಾನು ಅದನ್ನು ಓದುವುದಕ್ಕೂ ಹೋಗಿಲ್ಲ' ಎಂದು ಟ್ವೀಟ್ ಮಾಡಿದ್ದಾರೆ. ರೋಷನ್ ಬೇಗ್ ಮಾಡಿರುವ ಸರಣಿ ಟ್ವೀಟ್‌ಗಳ ವಿವರ ಇಲ್ಲಿದೆ.....

ಶೋಕಾಸ್ ನೋಟಿಸ್ ಓದಿಲ್ಲ

ನನ್ನ ಹೇಳಿಕೆ ಬಗ್ಗೆ ಕೆಪಿಸಿಸಿಯಿಂದ ಶೋಕಾಸ್ ನೋಟಿಸ್ ಬಂದಿದೆ. ಅದನ್ನು ಓದುಲು ಹೋಗಿಲ್ಲ. ನಾನು ಟೀಕಿಸಿದ ನಾಯಕರ ಅಣತಿಯಂತೆ ಅದನ್ನು ಕಳಿಸಲಾಗಿದೆ ಎಂಬುದು ಗೊತ್ತು ಎಂದು ರೋಷನ್ ಬೇಗ್ ಟ್ವೀಟ್ ಮಾಡಿದ್ದಾರೆ.

ಸಚಿವ ಸ್ಥಾನ ಮಾರಿಕೊಂಡರು

ರೋಷನ್ ಬೇಗ್ ಅವರು ತಮ್ಮ ಟ್ವೀಟ್‌ನಲ್ಲಿ ಮೈತ್ರಿ ಸರ್ಕಾರದಲ್ಲಿ ಸಚಿವ ಸ್ಥಾನವನ್ನು ಮಾರಿಕೊಳ್ಳಲಾಗಿದೆ ಎಂದು ಆರೋಪ ಮಾಡಿದ್ದಾರೆ. ಪ್ರತಿಪಕ್ಷದವರು ಕುದುರೆ ವ್ಯಾಪಾರ ಮಾಡುತ್ತಾರೆ ಎಂದು ಹೇಳುವ ನಾಯಕರು ಸಚಿವ ಸ್ಥಾನವನ್ನು ಇವರು ಹೇಗೆ ಮಾರಿಕೊಂಡರು ಎಂಬುದನ್ನು ಹೇಳುವುದಿಲ್ಲ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಕೆಲವು ನಾಯಕರು ಕಣ್ ಮುಚ್ಚಿ ಕುಳಿತಿದ್ದಾರೆ

ಪಕ್ಷದ ಕೆಲವು ಬೆಳವಣಿಗೆಗಳ ಬಗ್ಗೆ ಹೈಕಮಾಂಡ್ ನಾಯಕರ ಗಮನಕ್ಕೆ ತಂದಿದ್ದೇನೆ. ಆದರೆ, ಕೆಲವು ನಾಯಕರು ಕಣ್ ಮುಚ್ಚಿ ಕುಳಿತಿದ್ದಾರೆ ಎಂದು ರೋಷನ್ ಬೇಗ್ ಟ್ವೀಟ್ ಮಾಡಿದ್ದಾರೆ.

ಪಕ್ಷದಲ್ಲಿ ಕಡೆಗಣಿಸಲಾಗಿದೆ

ಕಾಂಗ್ರೆಸ್‌ ಪಕ್ಷವನ್ನು ಮುನ್ನೆಡೆಸುವ ಹಲವು ಹಿರಿಯ ನಾಯಕರು ಇದ್ದಾರೆ. ಆದರೆ, ಅವರನ್ನು ಕಡೆಗಣಿಸಲಾಗಿದೆ. ನಾಯಕರ ವಿರುದ್ಧ ಆಡಿದ ಮಾತನ್ನು ಪಕ್ಷದ ವಿರುದ್ಧ ಆಡಿರುವುದು ಎಂದು ಅರ್ಥೈಸಲಾಗಿದೆ ಎಂದು ರೋಷನ್ ಬೇಗ್ ಟ್ವೀಟ್ ಮಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+