ಟಿಎಸ್ಆರ್, ಮೊಹರೆ ಹಣಮಂತರಾಯ ಸ್ಮಾರಕ ಪ್ರಶಸ್ತಿ ಪ್ರಕಟ

Posted By:
Subscribe to Oneindia Kannada

ಬೆಂಗಳೂರು, ಜೂನ್ 17 : ಕನ್ನಡ ಪತ್ರಿಕೋದ್ಯಮದ ದಿಗ್ಗಜರಾದ ಟಿಎಸ್ ರಾಮಚಂದ್ರರಾವ್ ಮತ್ತು ಮೊಹರೆ ಹನುಮಂತ ರಾವ್ ಸ್ಮಾರಕ ಪತ್ರಿಕೋದ್ಯಮ (2014 ಮತ್ತು 2015ನೇ ಸಾಲಿನ) ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಕರ್ನಾಟಕ ಸರ್ಕಾರ ರಾಜ್ಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೂಲಕ ಈ ಪ್ರಶಸ್ತಿಗಳನ್ನು ನೀಡುತ್ತಿದೆ.

TSR and Mohare Hanumantha Rao journalism awards 2014-15 announced
Photo Credit:

ದಿವಂಗತ ಟಿ.ಎಸ್. ರಾಮಚಂದ್ರರಾವ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿಯನ್ನು 2014ನೇ ಸಾಲಿಗೆ ಪ್ರಜಾವಾಣಿ, ಸುಧಾ, ಸಂಯುಕ್ತ ಕರ್ನಾಟಕ ಹಾಗೂ ಕರ್ಮವೀರ ಪತ್ರಿಕೆಗಳಲ್ಲಿ ಚಲನಚಿತ್ರ ಹಿರಿಯ ಪತ್ರಕರ್ತರಾಗಿ ಗಂಗಾಧರ ಮೊದಲಿಯಾರ್ ಅವರಿಗೆ ಹಾಗೂ 2015ನೇ ಸಾಲಿಗೆ ಸಂಯುಕ್ತ ಕರ್ನಾಟಕ, ಜನವಾಹಿನಿ ಹಾಗೂ ಸೂರ್ಯೋದಯ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿರುವ ಸನತ್‌ಕುಮಾರ್ ಬೆಳಗಲಿ ಅವರಿಗೆ ಘೋಷಿಸಿದೆ.
TSR and Mohare Hanumantha Rao journalism awards 2014-15 announced

ದಿವಂಗತ ಮೊಹರೆ ಹಣಮಂತರಾಯ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿಯನ್ನು 2014ನೇ ಸಾಲಿಗೆ ರಾಯಚೂರಿನಿಂದ ಪ್ರಕಟವಾಗುತ್ತಿರುವ ಸುದ್ದಿ ಮೂಲ ಪತ್ರಿಕೆಯ ಸಂಪಾದಕರಾದ ಬಸವರಾಜಸ್ವಾಮಿ ಅವರಿಗೆ ಹಾಗೂ 2015ನೇ ಸಾಲಿಗೆ ಅಭಿಮಾನಿ ಪ್ರಕಾಶನದ ಮೂಲಕ ಈ ಸಂಜೆ ದಿನಪತ್ರಿಕೆ, ಅರಗಿಣಿ ಚಲನಚಿತ್ರ ವಾರಪತ್ರಿಕೆಯ ಮೂಲಕ ಕನ್ನಡ ಪತ್ರಿಕೋದ್ಯಮಕ್ಕೆ ವಿಶಿಷ್ಟ ಕೊಡುಗೆ ನೀಡಿರುವ ಟಿ. ವೆಂಕಟೇಶ್ ಅವರಿಗೆ ಘೋಷಿಸಲಾಗಿದೆ.

ರಾಜ್ಯ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶ ಎಚ್.ಎನ್. ನಾಗಮೋಹನದಾಸ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಆಯ್ಕೆ ಸಮಿತಿಯು ರಾಜ್ಯ ಸರ್ಕಾರದ ಮಾರ್ಗಸೂಚಿಯನ್ನು ಅಳವಡಿಸಿಕೊಂಡು ಮೇಲ್ಕಂಡ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
TS Ramachandra Rao (TSR) and Mohare Hanumantha Rao awards for the year 2014 and 2015 have been announced. Karnataka government is giving these awards through department of information and public relations. Film journalist Gangadhara Mudaliar and Sanath Kumar Belagali have been selected.
Please Wait while comments are loading...