ಹೋಟೆಲಿಗೆ ಹಾಜರ್, ಸದನಕ್ಕೆ ಚಕ್ಕರ್, ಇದು ವಿಶ್ವಾಸಮತ ಹಾಜರಿ ಪುಸ್ತಕ!
ಬೆಂಗಳೂರು, ಜುಲೈ 17: ಶಾಸಕರ ರಾಜೀನಾಮೆ, ಅನರ್ಹತೆ, ವಿಪ್, ವಿಶ್ವಾಸಮತ ಯಾಚನೆ, ಕೈ ತೆನೆ ಸರ್ಕಾರದ ಅಳಿವು ಉಳಿವು ಎಲ್ಲಾ ಲೆಕ್ಕಾಚಾರಗಳ ಬಗ್ಗೆ ಏನಾಗಬಹುದು ಎಂಬ ಕುತೂಹಲದಿಂದ ಕರ್ನಾಟಕ ವಿಧಾನಸಭೆ ಮುಂಗಾರು ಅಧಿವೇಶನ ಇಂದು ಆರಂಭವಾಗಿದೆ.
ಈ ಕಾಪಿ ಬರೆಯುವ ಸಂದರ್ಭಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ವಿಶ್ವಾಸಮತಯಾಚನೆ ಯಾಕೆ ತೆಗೆದುಕೊಳ್ಳುತ್ತಿದ್ದೇನೆ ಎಂದು ಕ್ಲುಪ್ತವಾಗಿ ವಿವರಸಿ, ವಿಪಕ್ಷ ನಾಯಕ ಬಿಎಸ್ ಯಡಿಯೂರಪ್ಪ ಅವರನ್ನು 'ಯಾಕೆ ನಿಮಗೆ ಆತುರ?' ಎಂದು ಪ್ರಶ್ನಿಸಿ ಕಾಲೆಳೆದು ಕುಳಿತುಕೊಂಡಿದ್ದಾರೆ.
'ಪಾಯಿಂಟ್ ಆಫ್ ಆರ್ಡರ್' ಎಂದು ಮಾತಿಗಿಳಿದ ಶಾಸಕಾಂಗ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪಕ್ಷಾಂತರ ನಿಷೇಧ ಕಾಯ್ದೆ ಇತಿಹಾಸ, ಕುತೂಹಲಕಾರಿ ಪಕ್ಷಾಂತರಗಳ ಬಗ್ಗೆ ಸುದೀರ್ಘವಾಗಿ ವಿವರಿಸಿ, ಸುಪ್ರೀಂಕೋರ್ಟಿನ ವಿಪ್ ಬಗ್ಗೆ ಕೂಡಾ ಪ್ರಸ್ತಾಪಿಸಿದ್ದಾರೆ. ಮಾತಿನ ಮಧ್ಯೆ "ವಿರೋಧ ಪಕ್ಷ ನಾಯಕನಾದ ನಾನು" ಎಂದು ಬಾಯ್ತಪ್ಪಿ ಹೇಳಿ, ಸದನದಲ್ಲಿ ಗದ್ದಲ, ನಗೆ ಅಲೆ ಏಳುವಂತೆ ಮಾಡಿದ್ದು ಆಗಿದೆ.
ಸದನಕ್ಕೆ ಹಾಜರಾಗುವಂತೆ ಪಕ್ಷಗಳು ನೀಡುವ ವಿಪ್ ಉಲ್ಲಂಘಿಸುವ ಶಾಸಕರ ಮೇಲೆ ಆಯಾ ಪಕ್ಷಗಳೇ ಕ್ರಮ ಜರುಗಿಸಬೇಕೆ? ಶಾಸಕರ ಅನರ್ಹತೆಗೆ ವಿಪ್ ಉಲ್ಲಂಘನೆಯನ್ನು ಪರಿಗಣಿಸಲು ಬರುವುದಿಲ್ಲವೇ? ಎಂಬೆಲ್ಲ ಪ್ರಶ್ನೆಗಳು ಇನ್ನೂ ಹಾಗೆ ಉಳಿದಿವೆ.

ವಿಶ್ವಾಸಮತಯಾಚನೆಯ ಕಲಾಪದಲ್ಲಿ ಸರಣಿ ಭಾಷಣ
ಇದೆಲ್ಲದರ ನಡುವೆ ವಿಶ್ವಾಸಮತಯಾಚನೆಯ ಕಲಾಪದಲ್ಲಿ ಸರಿ ಸುಮಾರು 26 ಮಂದಿ ಶಾಸಕರಿಗೆ ಭಾಷಣಕ್ಕೆ ಅನುಮತಿ ಪಡೆದುಕೊಂಡಿದ್ದಾರೆ. ಸದನಕ್ಕೆ ಯಾರು ಹಾಜರಾಗಿದ್ದಾರೆ, ಯಾರು ಗೈರಾಗಿದ್ದಾರೆ, ವಿಶ್ವಾಸಮತ ಯಾಚನೆ ಪ್ರಕ್ರಿಯೆ ನಡೆಸುವುದು ಹೇಗೆ? ಶಾಸಕರಿಗೆ ಆದ್ಯತೆ ಮೇರೆಗೆ ಚುಕ್ಕಿ ಪ್ರಶ್ನೆಗಳು, ವಾಕ್ಸಮರಗಳನ್ನು ನಿಭಾಯಿಸುವುದು ಎಲ್ಲವೂ ವಿಧಾನಸಭೆಯ 'ಅಂಪೈರ್' ಎಂದು ತಮಗೆ ತಾವೇ ಕರೆದುಕೊಂಡಿರುವ ಸಭಾಪತಿ ಕೆ. ಆರ್ ರಮೇಶ್ ಕುಮಾರ್ ಅವರು ನಿರ್ವಹಿಸುತ್ತಿದ್ದಾರೆ.

ಗೈರು ಹಾಜರಾದ ಶಾಸಕರು
ಬೆಳಗ್ಗೆ 11.30ರ ವೇಳೆಗೆ ಗೈರುಹಾಜರಾದವರು: 15 ಮಂದಿ ರೆಬೆಲ್ ಶಾಸಕರು ಸೇರಿ 18 ಮಂದಿ. ಎಸ್ ಟಿ ಸೋಮಶೇಖರ್, ಬೈರತಿ ಬಸವರಾಜ್, ರಮೇಶ್ ಜಾರಕಿಹೊಳಿ, ಮುನಿರತ್ನ, ಎಚ್ ವಿಶ್ವನಾಥ್(ಜೆಡಿಎಸ್), ಸುಧಾಕರ್, ಶಿವರಾಜ್ ಹೆಬ್ಬಾರ್, ಶ್ರೀಮಂತ್ ಪಾಟೀಲ್(ಅನಾರೋಗ್ಯ), ಎಂಟಿಬಿ ನಾಗರಾಜ್, ನಾರಾಯಣ ಗೌಡ, ಗೋಪಾಲಯ್ಯ(ಜೆಡಿಎಸ್), ಬಿಸಿ ಪಾಟೀಲ್, ಆನಂದ್ ಸಿಂಗ್, ಬಿ ನಾಗೇಂದ್ರ, ಆರ್ ಶಂಕರ್(ಕೆಪಿಜೆಪಿ), ಎಚ್ ನಾಗೇಶ್, ಎನ್ ಮಹೇಶ್ ಹಾಗೂ ರೋಷನ್ ಬೇಗ್.

16 ಮಂದಿ ರಾಜೀನಾಮೆ ನೀಡಿದ ಬಳಿಕ
ಸದನಕ್ಕೆ ಹಾಜರಾಗುವಂತೆ ಪಕ್ಷಗಳು ನೀಡುವ ವಿಪ್ ಉಲ್ಲಂಘಿಸುವ ಶಾಸಕರ ಮೇಲೆ ಆಯಾ ಪಕ್ಷಗಳೇ ಕ್ರಮ ಜರುಗಿಸಬೇಕೆ? ಶಾಸಕರ ಅನರ್ಹತೆಗೆ ವಿಪ್ ಉಲ್ಲಂಘನೆಯನ್ನು ಪರಿಗಣಿಸಲು ಬರುವುದಿಲ್ಲವೇ? ಎಂಬೆಲ್ಲ ಪ್ರಶ್ನೆಗಳು ಇನ್ನೂ ಹಾಗೆ ಉಳಿದಿವೆ.
ವಿಧಾನಸಭಾ ಸದನದ ಹಾಜರಾತಿ(ಜುಲೈ 18, ಸಮಯ 12.30) ಹೀಗಿದೆ: ವಿಧಾನಸಭೆಯಲ್ಲಿ ಪಕ್ಷವಾರು ಬಲಾಬಲ: 16 ಮಂದಿ ರಾಜೀನಾಮೆ ನೀಡಿದ ಬಳಿಕ ಒಟ್ಟು ಸದಸ್ಯ ಬಲ : 224ಕಾಂಗ್ರೆಸ್ + ಜೆಡಿಎಸ್ : 101
ಮ್ಯಾಜಿಕ್ ನಂಬರ್ : 105
ಬಿಜೆಪಿ : 107
ಬಿಎಸ್ ಪಿ: 1 (ಎನ್ ಮಹೇಶ್)

ಗೈರಾಗಿರುವ ಶಾಸಕರ ಸಂಖ್ಯೆ 20ಕ್ಕೇರಿಕೆ
ವಿಧಾನಸಭೆಯಲ್ಲಿನ ಸಂಖ್ಯಾಬಲ: ವಿಶ್ವಾಸಮತಯಾಚನೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದೆ ಗೈರಾಗಿರುವ ಶಾಸಕರ ಸಂಖ್ಯೆ 20ಕ್ಕೇರಿಕೆ. 15 ರೆಬೆಲ್ ಶಾಸಕರು, 2 ಪಕ್ಷೇತರರು, 2 ಕಾಂಗ್ರೆಸ್ ಶಾಸಕರು ಹಾಗೂ 1 ಬಿಎಸ್ಪಿ ಶಾಸಕರು.20 ಶಾಸಕರ ಗೈರು ಹಾಜರಿ ನಂತರ ಸದನದ ಸಂಖ್ಯಾಬಲ 224ರಿಂದ 204ಕ್ಕೆ ಕುಸಿದಿದೆ. ಬಹುಮತ ಸಾಬೀತುಪಡಿಸಲು ಹೊಸ ಮ್ಯಾಜಿಕ್ ನಂಬರ್ 103. ಬಿಜೆಪಿ 105 ಸಂಖ್ಯಾಬಲ ಹೊಂದಿದೆ.
-
Gold Price March 11: ಚಿನ್ನದ ಬೆಲೆಯಲ್ಲಿ ಹೊಸ ದಾಖಲೆ: ಬೆಳ್ಳಿ ಪ್ರಿಯರಿಗೆ ಅಚ್ಚರಿ, ಎಷ್ಟಿದೆ ಇಂದಿನ ಚಿನ್ನ - ಬೆಳ್ಳಿ ಬೆಲೆ -
Rain In Karnataka: ಈ ವಾರದಲ್ಲಿ ಕರ್ನಾಟಕದ ಈ ಭಾಗಗಳಲ್ಲಿ ಮಳೆ ಸಾಧ್ಯತೆ, ಬೆಂಗಳೂರಲ್ಲಿ ಹೇಗಿದೆ ವೆದರ್ -
Sayali Surve: ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮಿಸ್ ಇಂಡಿಯಾ ಅರ್ಥ್ ವಿಜೇತೆ ಸಯಾಲಿ ಸುರ್ವೆ, ಕಾರಣವೇನು -
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
Bengaluru Second Airport: ಬೆಂಗಳೂರಿಗೆ ಟಕ್ಕರ್ ಕೊಡಲು ಬಂದ ತಮಿಳುನಾಡಿಗೆ ಮುಖಭಂಗ, ಹೊಸೂರು ವಿಮಾನ ನಿಲ್ದಾಣ ಕಷ್ಟ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Shivam Dube: ಶಿವಂ ದುಬೆ ಸಾಧನೆಗೆ ಮನಸಾರೆ ಮೆಚ್ಚುಗೆ ಸೂಚಿಸಿದ ಪತ್ನಿ ಅಂಜುಮ್ ಖಾನ್: ಇನ್ಸ್ಟಾ ಪೋಸ್ಟರ್ ಭಾರೀ ವೈರಲ್ -
Fact Check: ಟಿ20 ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ವೇಳೆ ಕಣ್ಣೀರಿಟ್ಟ ಕಿವೀಸ್ ಆಟಗಾರ ಇಶ್ ಸೋಧಿ -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ












Click it and Unblock the Notifications