ಅನಂತ ಕುಮಾರ್ ಹೆಗಡೆ ಬೆಂಗಾವಲು ಕಾರು ಅಪಘಾತ: ಕೊಲೆ ಸಂಚಿನ ಆರೋಪ

Recommended Video

      ಅನಂತ್ ಕುಮಾರ್ ಹೆಗಡೆ ಕಾರಿಗೆ ಅಪಘಾತ | ಕೊಲೆ ಸಂಚಿನ ಆರೋಪ| Oneindia Kannada

      ಹಲಗೇರಿ, ಏಪ್ರಿಲ್ 18: ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ ಕುಮಾರ್ ಹೆಗಡೆ ಅವರ ಬೆಂಗಾವಲಿನ ಕಾರು ಅಪಘಾತಕ್ಕೆ ತುತ್ತಾಗಿದ್ದು, ಸಚಿವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

      ನಿನ್ನೆ(ಏ.17) ರಾತ್ರಿ 11:30 ರ ಸಮಯದಲ್ಲಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಲಗೇರಿ ಬಳಿ ಹೆಗಡೆ ಕಾರಿನಲ್ಲಿ ಚಲಿಸುತ್ತಿದ್ದ ವೇಳೆಯಲ್ಲಿ, ಟ್ರಕ್ ವೊಂದು ಬಂದು ಅವರ ಕಾರನ್ನು ಗುದ್ದಲು ಪ್ರಯತ್ನಿಸಿತ್ತು. ಆದರೆ ಅವರು ವೇಗವಾಗಿ ಚಲಿಸುತ್ತಿದ್ದರಿಂದ ಅವರಿಗೆ ಯಾವುದೇ ಅಪಾಯ ಸಂಭವಿಸಲಿಲ್ಲ. ಆದರೆ ಅವರ ಹಿಂದೆ ಚಲಿಸುತ್ತಿದ್ದ ಬೆಂಗಾವಲಿನ ಕಾರಿಗೆ ಟ್ರಕ್ಕು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಸಹಾಯಕ ಸಿಬ್ಬಂದಿಗೆ ಗಂಭೀರ ಗಾಯವಾಗಿದೆ.

      ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

      ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ಹೆಗಡೆ, 'ಇದು ನನ್ನನ್ನು ಕೊಲೆ ಮಾಡಲು ಬೇಕೆಂದೇ ಮಾಡಿದ ಪಿತೂರಿ. ನಮ್ಮ ಸಹಾಯಕ ಸಿಬ್ಬಂದಿಯೊಬ್ಬರು ಈ ಅಪಘಾತದಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಕುರಿತು ಗಂಭೀರ ತನಿಖೆ ಆಗಬೇಕು' ಎಂದಿದ್ದಾರೆ.

      Truck hits Hegdes escort vehicle, he claims attempt on his life

      ಘಟನೆಗೆ ಸಂಬಂಧಿಸಿದಂತೆ ಟ್ರಕ್ ಚಾಲಕನನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ಘಟನೆಗು ಮುನ್ನ ಆತ ಯಾವುದೇ ರೀತಿಯ ಮದ್ಯಸೇವನೆ ಮಾಡಿರಲಿಲ್ಲ ಎಂಬುದು ದೃಢವಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+