ಬಿಜೆಪಿ ನಾಯಕ, ವಿಧಾನ ಪರಿಷತ್ ಉಪ ಸಭಾಪತಿಗೆ ಸಂಕಷ್ಟ

ಬೆಂಗಳೂರು, ಜನವರಿ 30: ಚಿಕ್ಕಮಗಳೂರು ಜಿಲ್ಲೆಯ ಬಿಜೆಪಿ ನಾಯಕ, ವಿಧಾನ ಪರಿಷತ್ ಉಪಸಭಾಪತಿ ಎಂ. ಕೆ. ಪ್ರಾಣೇಶ್‌ಗೆ ಸಂಕಷ್ಟ ಎದುರಾಗಿದೆ. ವಿಧಾನ ಪರಿಷತ್ ಚುನಾವಣೆಯ ಮರು ಮತಗಳ ಎಣಿಕೆಗೆ ಕರ್ನಾಟಕ ಹೈಕೋರ್ಟ್ ಆದೇಶವನ್ನು ನೀಡಿದೆ. 6 ಮತಗಳ ಅಂತರದಲ್ಲಿ ಎಂ. ಕೆ. ಪ್ರಾಣೇಶ್ ವಿರುದ್ಧ ಸೋಲು ಕಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಎ. ವಿ. ಗಾಯತ್ರಿ ಶಾಂತೇಗೌಡ ಮರು ಮತ ಎಣಿಕೆಗಾಗಿ ಹೈಕೋರ್ಟ್ ಮೊರೆ ಹೋಗಿದ್ದರು.

ಮೂರು ವರ್ಷಗಳ ಹಿಂದೆ ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸದಸ್ಯರ ಆಯ್ಕೆಗೆ ಚುನಾವಣೆ ನಡೆದಿತ್ತು. ಬಿಜೆಪಿಯಿಂದ ಎಂ. ಕೆ. ಪ್ರಾಣೇಶ್ ಮತ್ತು ಕಾಂಗ್ರೆಸ್‌ನಿಂದ ಎ. ವಿ. ಗಾಯತ್ರಿ ಶಾಂತೇಗೌಡ ಅಭ್ಯರ್ಥಿಯಾಗಿದ್ದರು. ಚುನಾವಣೆಯಲ್ಲಿ ಎಂ. ಕೆ. ಪ್ರಾಣೇಶ್ 6 ಮತಗಳ ಅಂತರದಲ್ಲಿ ಜಯಗಳಿಸಿದ್ದರು.

Trouble For Deputy Chairman Of Karnataka Legislative Council M K Pranesh

ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದ ಪರಾಜಿತ ಅಭ್ಯರ್ಥಿ ಎ. ವಿ. ಗಾಯತ್ರಿ ಶಾಂತೇಗೌಡ ಚುನಾವಣೆಯ ಮರು ಮತ ಎಣಿಕೆಗೆ ಮನವಿ ಮಾಡಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಸರ್ಕಾರದ 12 ನಾಮ ನಿರ್ದೇಶಿತರ ಮತದಾನ ಬಿಟ್ಟು ಉಳಿದ ಮತಗಳ ಮರು ಎಣಿಕೆಯನ್ನು ಮಾರ್ಚ್ 7ರೊಳಗೆ ಮಾಡಿ, ವರದಿ ನೀಡುವಂತೆ ಸೂಚನೆ ನೀಡಿದೆ.

ಎಂ. ಕೆ. ಪ್ರಾಣೇಶ್ ಉಪ ಸಭಾಪತಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಜಯಗಳಿಸಿದ್ದ ಎಂ. ಕೆ. ಪ್ರಾಣೇಶ್ 2022ರಲ್ಲಿ ವಿಧಾನ ಪರಿಷತ್ ಉಪ ಸಭಾಪತಿಯಾಗಿಯೂ ಆಯ್ಕೆಯಾಗಿದ್ದಾರೆ. ಈಗ ಮರು ಮತ ಎಣಿಕೆಯಲ್ಲಿ ಎ. ವಿ. ಗಾಯತ್ರಿ ಶಾಂತೇಗೌಡ ಜಯಗಳಿಸಿದರೆ ಬಿಜೆಪಿ ನಾಯಕನ ಮುಂದಿನ ನಡೆ ಕುತೂಹಲಕ್ಕೆ ಕಾರಣವಾಗಿದೆ.

ಡಿಸೆಂಬರ್ 23, 2022ರಂದು ವಿಧಾನ ಪರಿಷತ್ ಉಪ ಸಭಾಪತಿ ಆಯ್ಕೆಗೆ ಚುನಾವಣೆ ನಡೆದಿತ್ತು. ಬಿಜೆಪಿಯಿಂದ ಎಂ. ಕೆ. ಪ್ರಾಣೇಶ್ ಅಭ್ಯರ್ಥಿಯಾಗಿದ್ದರು. 39 ಸದಸ್ಯರು ಎಂ.ಕೆ. ಪ್ರಾಣೇಶ್ ಪರವಾಗಿ, ಕಾಂಗ್ರೆಸ್‌ ಅಭ್ಯರ್ಥಿ ಅರವಿಂದ ಕುಮಾರ್ ಅರಳಿ ಪರವಾಗಿ 26 ಸದಸ್ಯರು ಮತ ಚಲಾಯಿಸಿದ್ದರು. ಎಂ. ಕೆ. ಪ್ರಾಣೇಶ್‌ ಜಯಗಳಿಸಿದ್ದರು.

ಆಗ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ವಿಧಾನ ಪರಿಷತ್ ಉಪ ಸಭಾಪತಿಯಾಗಿ ಆಯ್ಕೆಯಾಗಿದ್ದ ಎಂ. ಕೆ. ಪ್ರಾಣೇಶ್ ಅವರಿಗೆ ಅಭಿನಂದನೆ ಸಲ್ಲಿಸಿದ್ದರು. "ಎಂ. ಕೆ. ಪ್ರಾಣೇಶ್ ಕ್ರಿಯಾಶೀಲ ವ್ಯಕ್ತಿ, ಚಿಕ್ಕ ವಯಸ್ಸಿನಲ್ಲಿಯೇ ಸಾರ್ವಜನಿಕ ಜೀವನದಲ್ಲಿ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡಿ ಎಲ್ಲರ ಮನಸ್ಸು ಗೆದ್ದಿದ್ದಾರೆ" ಎಂದು ಹೇಳಿದ್ದರು.

"ಸಮಸ್ಯೆಗಳ ಕುರಿತು ಹೋರಾಟ ನಡೆಸಿ ಪರಿಹಾರ ಕಂಡುಕೊಳ್ಳುವ ರಾಜಕಾರಣಿ ಅವರು. ನಡೆ ಮತ್ತು ನುಡಿ ಎರಡೂ ಒಂದೇ. ಸೌಮ್ಯ ಸ್ವಭಾವದ ವ್ಯಕ್ತಿ, ಪಕ್ಷವನ್ನು ಮೀರಿ ಅವರು ಎಲ್ಲರೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದಾರೆ" ಎಂದು ಬಸವರಾಜ ಬೊಮ್ಮಾಯಿ ಬಣ್ಣಿಸಿದ್ದರು.

ಸದ್ಯದ ಮಾಹಿತಿ ಪ್ರಕಾರ ಮರು ಮತ ಎಣಿಕೆಯಲ್ಲಿ ಎ. ವಿ. ಗಾಯತ್ರಿ ಶಾಂತೇಗೌಡ ಜಯಗಳಿಸಿದರೆ ಎಂ. ಕೆ. ಪ್ರಾಣೇಶ್ ಈ ಕುರಿತು ಕಾನೂನು ಹೋರಾಟವನ್ನು ಸುಪ್ರೀಂಕೋರ್ಟ್‌ನಲ್ಲಿ ಮುಂದುವರೆಸುವ ಆಯ್ಕೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+