• search
For Quick Alerts
ALLOW NOTIFICATIONS  
For Daily Alerts

  ಕನ್ನಡದ 8 ದಿನಪತ್ರಿಕೆಗಳ ಕಣ್ಣಲ್ಲಿ 'ತ್ರಿವಳಿ ತಲಾಖ್' ತೀರ್ಪು

  |

  ತ್ರಿವಳಿ ತಲಾಖ್ ಕುರಿತು ಸುಪ್ರೀಕೋರ್ಟ್ ನೀಡಿದ ಚಾರಿತ್ರಿಕ ತೀರ್ಪನ್ನು ಇಡೀ ದೇಶವೂ ಒಮ್ಮತದಿಂದ ಸ್ವಾಗತಿಸಿದೆ. ಮುಸ್ಲಿಂ ಮಹಿಳೆಯರ ಬದುಕುವ ಹಕ್ಕನ್ನೇ ಕಸಿದಿದ್ದ ಈ ಕ್ರೂರ ಪದ್ಧತಿಗೆ ಈ ಮೂಲಕ ತಿಲಾಂಜಲಿ ಹಾಡಿದಂತಾಗಿದೆ.

  ತ್ರಿವಳಿ ತಲಾಖ್ ಅಸಂವಿಧಾನಿಕ, ಸುಪ್ರಿಂ ಕೋರ್ಟ್ ಐತಿಹಾಸಿಕ ತೀರ್ಪು

  ತ್ರಿವಳಿ ತಲಾಖ್ ಅಸಾಂವಿಧಾನಿಕ ಮತ್ತು ಈ ಕುರಿತು ಆರು ತಿಂಗಳಲ್ಲಿ ಕೇಂದ್ರ ಸರ್ಕಾರ ಕಾನೂನನ್ನು ಜಾರಿಗೆ ತರಬೇಕೆಂದು ಸುಪ್ರೀಂ ಕೋರ್ಟ್ ನ ಪಂಚ ಸದಸ್ಯರ ಪೀಠ ನಿನ್ನೆ (ಆಗಸ್ಟ್ 22) ತೀರ್ಪು ನೀಡಿತ್ತು.

  ಟ್ರಿಪಲ್ ತಲಾಖ್ ರದ್ದು: ಈ ಬಗ್ಗೆ ಸಾರ್ವಜನಿಕರ ಅಭಿಪ್ರಾಯವೇನು?

  ಕೇಂದ್ರ ಸರ್ಕಾರ ಕಾನೂನು ಜಾರಿಗೆ ತರುವವರೆಗೂ ತ್ರಿವಳಿ ತಲಾಖ್ ಗೆ ತಡೆ ನೀಡಿರುವ ನ್ಯಾಯಾಲಯ, 'ಎಷ್ಟೋ ಮುಸ್ಲಿಂ ದೇಶಗಳಲ್ಲೇ ಅಸ್ತಿತ್ವದಲ್ಲಿಲ್ಲದ ತ್ರಿವಳಿ ತಲಾಖ್, ಭಾರತಕ್ಕೆ ಅಗತ್ಯವಿದೆಯೇ?' ಎಂದು ಪ್ರಶ್ನಿಸಿದೆ.

  ತಲಾಖ್ ತಲಾಖ್ ತಲಾಖ್ ಗೆ ಭೇಷ್ ಭೇಷ್ ಭೇಷ್ ಎಂದ ಟ್ವಿಟ್ಟಿಗರು

  ತ್ರಿವಳಿ ತಲಾಖ್ ಕುರಿತು ಸುಪ್ರೀಂಕೋರ್ಟ್ ನೀಡಿದ ಮಹತ್ವದ ತೀರ್ಪು ಇಂದಿನ ಎಲ್ಲಾ ಕನ್ನಡ ದಿನಪತ್ರಿಕೆಗಳ ಮುಖಪುಟದಲ್ಲೂ ರಾರಾಜಿಸಿವೆ. ಆಕರ್ಷಕ ತಲೆಬರಹ, ವಿಭಿನ್ನ ಪುಟ ವಿನ್ಯಾಸಗಳೊಂದಿಗೆ ತ್ರಿವಳಿ ತಲಾಖ್ ತೀರ್ಪನ್ನು ಎಲ್ಲ ಪತ್ರಿಕೆಗಳೂ ಸ್ವಾಗತಿಸಿವೆ.

  ಹೆಡ್ ಲೈನ್ ಆಫ್ ದಿ ಡೆ!

  ಹೆಡ್ ಲೈನ್ ಆಫ್ ದಿ ಡೆ!

  ತ್ರಿವಳಿ ತಲಾಖ್ ಮೇಲೆ ನಿಷೇಧ(x)ದ ಚಿಹ್ನೆ ಹಾಕಿ ಅರ್ಥವತ್ತಾದ ಶೀರ್ಷಿಕೆ ನೀಡುವಲ್ಲಿ 'ಕನ್ನಡಪ್ರಭ' ಯಶಸ್ವಿಯಾಗಿದೆ. 'ಹಠಾತ್ ತ್ರಿವಳಿ ತಲಾಖ್ ರದ್ದುಗೊಳಿಸಿ ಸುಪ್ರೀಂ ಚಾರಿತ್ರಿಕ ತೀರ್ಪು' ಎಂಬ ಕಿಕ್ಕರ್ ಸಹ ಗಮನ ಸೆಳೆಯುತ್ತದೆ. ಒಟ್ಟಿನಲ್ಲಿ ಹೆಡ್ ಲೈನ್ ಆಫ್ ದಿ ಡೇ ಪ್ರಶಸ್ತಿಯನ್ನು ಕನ್ನಡಪ್ರಭ ಮತ್ತು ವಿಜಯ ಕರ್ನಾಟಕ ಹಂಚಿಕೊಂಡಿವೆ.

  ದಿಢೀರ್ ತಲಾಖ್ ಅಸಾಂವಿಧಾನಿಕ

  ದಿಢೀರ್ ತಲಾಖ್ ಅಸಾಂವಿಧಾನಿಕ

  'ದೀಢೀರ್ ತಲಾಖ್ ಅಸಾಂವಿಧಾನಿಕ' ಎಂಬ ತಲೆಬರಹದೊಂದಿಗೆ ಬುರ್ಖಾ ತೊಟ್ಟು ನಿಟ್ಟುಸಿರು ಬಿಡುತ್ತಿರುವ ಮಹಿಳೆಯೊಬ್ಬರ ಚಿತ್ರವನ್ನು ಪ್ರಕಟಿಸಿ 'ಉದಯವಾಣಿ' ತಲಾಖ್ ತೀರ್ಪನ್ನು ಸ್ವಾಗತಿಸಿದೆ. ಅರ್ಧ ಪುಟಗಳನ್ನು ತಲಾಖ್ ಸುದ್ದಿಗಾಗಿಯೇ ಮೀಸಲಿಟ್ಟಿರುವ ಉದಯವಾಣಿ ಪಕ್ಕದಲ್ಲಿ ಐವರೂ ನ್ಯಾಯಾಧೀಶರ ಹೇಳಿಕೆಗಳನ್ನೂ ಸಂಕ್ಷಿಪ್ತವಾಗಿ ನೀಡದೆ.

  ತಲಾಖ್ ತಲಾಖ್ ತಲಾಖ್

  ತಲಾಖ್ ತಲಾಖ್ ತಲಾಖ್

  ಕನ್ನಡಪ್ರಭ ಮತ್ತು ವಿಜಯ ಕರ್ನಾಟಕದ ಶೀರ್ಷಿಕೆಗಳು ಒಂದೇ ತೆರನಾಗಿದ್ದು, ತ್ರಿವಳಿ ತಲಾಖ್ ಮೇಲೆ ನಿಷೇಧದ ಚಿಹ್ನೆ ಹಾಕಿ ಆಕರ್ಷಕ ಶೀರ್ಷಿಕೆ ನೀಡಿವೆ. ಒಂದು ಅನಿಷ್ಠ ಪದ್ಧತಿಗೆ ಬ್ರೇಕ್ ಹಾಕಿದ ಸುಪ್ರೀಂ ತೀರ್ಮಾನವನ್ನು ಮುಸ್ಲಿಂ ಮಹಿಳೆಯರು ಸಂತಸದಿಂದ ಸ್ವಾಗತಿಸಿದ್ದನ್ನು, ಇಬ್ಬರು ಮುಸ್ಲಿಂ ಮಹಿಳೆಯರು ಪರಸ್ಪರ ಸಿಹಿ ತಿನ್ನಿಸುತ್ತಿರುವ ಚಿತ್ರದ ಮೂಲಕ 'ವಿಜಯ ಕರ್ನಾಟಕ' ಅಭಿವ್ಯಕ್ತಿಪಡಿಸಿದೆ.

  ತ್ರಿವಳಿ ತಲಾಖ್ ಅಸಾಂವಿಧಾನಿಕ

  ತ್ರಿವಳಿ ತಲಾಖ್ ಅಸಾಂವಿಧಾನಿಕ

  'ತ್ರಿವಳಿ ತಲಾಖ್ ಅಸಾಂವಿಧಾನಿಕ' ಎಂಬ ಸರಳ ಶೀರ್ಷಿಕೆ ನೀಡಿರುವ ಹೊಸ ದಿಗಂತ ಪತ್ರಿಕೆ ಮುಖಪುಟ ವಿನ್ಯಾಸ ಗಮನ ಸೆಳೆಯುತ್ತದೆ. 'ಸುಪ್ರೀಂ ಐತಿಹಾಸಿಕ ತೀರ್ಪು, ಶೋಷಣೆಯ ಗ್ರಹಣದಿಂದ ಮುಕ್ತರಾದ ಮುಸ್ಲಿಂ ಮಹಿಳೆಯರು, ಮುಕ್ತಕಂಠದಿಂದ ತೀರ್ಪನ್ನು ಸ್ವಾಗತಿಸಿದ ಸರ್ವಪಕ್ಷಗಳು, ನವಭಾರತಕ್ಕೆ ಇದುವೆ' ಮುನ್ನುಡಿ ಎಂಬ ಸಾಲುಗಳೂ ಇಷ್ಟವಾಗುತ್ತವೆ. ತಲಾಖ್ ಗಾಗಿ 'ಹೊಸ ದಿಗಂತ' ಮುಕ್ಕಾಲು ಪುಟವನ್ನು ಮೀಸಲಿಟ್ಟಿದ್ದು ವಿಶೇಷ.

  ತಲಾಖ್ ಗೆ ಗೇಟ್ ಪಾಸ್

  ತಲಾಖ್ ಗೆ ಗೇಟ್ ಪಾಸ್

  'ರಾಜ್ಯಾಂಗ ಬಾಹಿರ ಸಂಪ್ರದಾಯದ ನಿಷೇಧಕ್ಕೆ ಹೊಸ ಶಾಸನ, ಸುಪ್ರೀಂ 3-2 ಬಹುಮತದ ತೀರ್ಪು' ಎಂಬ ಕಿಕ್ಕರ್ ನೊಂದಿಗೆ ಸಂಯುಕ್ತ ಕರ್ನಾಟಕ 'ತಲಾಖ್ ಗೆ ಗೇಟ್ ಪಾಸ್' ಎಂಬ ಶೀರ್ಷಿಕೆ ನೀಡಿದೆ. 'ಗೇಟ್ ಪಾಸ್' ಪದದ ಫಾಂಟ್ ಸಹ ಆಕರ್ಷಕವಾಗಿದೆ.

  ತ್ರಿವಳಿ ತಲಾಖ್ ಗೆ ಸುಪ್ರೀಂ ತಲಾಖ್

  ತ್ರಿವಳಿ ತಲಾಖ್ ಗೆ ಸುಪ್ರೀಂ ತಲಾಖ್

  'ತ್ರಿವಳಿ ತಲಾಖ್ ಗೆ ಸುಪ್ರೀಂ ತಲಾಖ್' ಎಂಬ ಶೀರ್ಷಿಕೆಯನ್ನು ವಿಜಯವಾಣಿ ನೀಡಿದೆ. 'ಬಹುಮತದ ತೀರ್ಪು ನೀಡಿದ ಸಾವಿಧಾನಿಕ ಪೀಠ. ಒಂದು ದೇಶ-ಒಂದು ಕಾನೂನು ವಿಚಾರ ಮುನ್ನಲೆಗೆ' ಎಂಬ ಕಿಕ್ಕರ್ ಆಕರ್ಷಕವಾಗಿದೆ. ಇಬ್ಬರು ಮುಸ್ಲಿಂ ಮಹಿಳೆಯರು ಸಿಹಿ ಹಂಚಿಕೊಳ್ಳುತ್ತಿರುವ ಚಿತ್ರ, ತೀರ್ಪಿನಿಂದ ಮುಸ್ಲಿಂ ಮಹಿಳೆಯರಲ್ಲಿ ಉಂಟಾದ ನಿರಾಳತೆಯನ್ನು ಪ್ರತಿಧ್ವನಿಸುವಂತಿದೆ.

  ತ್ರಿವಳಿ ತಲಾಖ್ ಗೆ ತಲಾಖ್

  ತ್ರಿವಳಿ ತಲಾಖ್ ಗೆ ತಲಾಖ್

  ತ್ರಿವಳಿ ತಲಾಖ್ ಗೆ 'ತಲಾಖ್' ಎಂಬ ಅರ್ಥವತ್ತಾದ ಶೀರ್ಷಿಕೆ ನೀಡಿರುವ ಪ್ರಜಾವಾಣಿ ಪಂಚ ಸದಸ್ಯರ ಪೀಠದಲ್ಲಿದ್ದ ಎಲ್ಲಾ ನ್ಯಾಯಾಧೀಶರ ಹೇಳಿಕೆಗಳಲ್ಲಿ ಮಹತ್ವವಾದುದನ್ನು ಹೆಕ್ಕಿ ಪ್ರಕಟಿಸಿದೆ. ತಲಾಖ್ ಸುದ್ದಿಗಾಗಿ ಪ್ರಜಾವಾಣಿ ಮುಖಪುಟದಲ್ಲಿ ಕೇವಲ ಕಾಲು ಭಾಗವನ್ನು ಮೀಸಲಿಟ್ಟಿದೆ.

  ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

  ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

  ಹೊಸ ದಿಗಂತ ಮತ್ತು ವಾರ್ತಾಭಾರತಿ ಪತ್ರಿಕೆಗಳು ಒಂದೇ ತೆರನಾದ ಶೀರ್ಷಿಕೆ ನೀಡಿವೆ. 'ತ್ರಿವಳಿ ತಲಾಖ್ ಅಸಾಂವಿಧಾನಿಕ' ಎಂಬ ಸರಳ ಶೀರ್ಷಿಕೆ ನೀಡಿರುವ ವಾರ್ತಾ ಭಾರತಿ ಮುಖಪುಟದ ಕಾಲುಭಾಗವನ್ನು ತಲಾಖ್ ಸುದ್ದಿಗಾಗಿ ಮೀಸಲಿಟ್ಟಿದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Whole country has welcomed Supreme court's verdict, in which it said, triple talaq is unconstitutional. Kannada news papers explain this verdict in their own perspective. Here is what major Kannada news papers say about the historical verdict.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more