ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೀವಿತಾವಧಿಯ ತೆರಿಗೆಯಿಂದ ಹೊರಗಿಡಿ: ಟ್ರಾವೆಲ್ಸ್ ಮಾಲೀಕರ ಸಂಘ ಆಗ್ರಹ

By ಕೆ.ರಾಧಾಕೃಷ್ಣ ಹೊಳ್ಳ
|
Google Oneindia Kannada News

ಕಳೆದ ಎರಡು ವರ್ಷಗಳಿಂದ ಆರ್ಥಿಕ ನಷ್ಟ ಅನುಭವಿಸಿದ ಖಾಸಗಿ ಸಾರಿಗೆ ಸೇವೆ ಕೊಡುವ ಉದ್ಯಮ ಟ್ಯಾಕ್ಸಿ ಉದ್ಯಮ ಕ್ಷೇತ್ರ, ಪ್ರಯಾಣಿಕರ ಬೇಡಿಕೆ ಈಡೇರಿಸಲು ಬೇಡಿಕೆಗೆ ತಕ್ಕ ವಾಹನಗಳಿಲ್ಲದೆ ಸೇವೆ ನೀಡಲು ಚಡಪಡಿಸುತ್ತಿದೆ.

ಆರ್ಥಿಕ ಸಂಕಷ್ಟದಿಂದ ವಾಹನಗಳ ಸಂಖ್ಯೆಯಲ್ಲಿ ಗಣನೀಯ ಖಡಿತವಾಗಿದೆ. ಬಹುಪಾಲು ಚಾಲಕರು ಬೇರೆ ಬೇರೆ ಉದ್ಯೋಗ ಅರಸಿ ಸ್ವಯಂ ವೃತ್ತಿಗಳಲ್ಲಿ ತೊಡಗಿದ್ದಾರೆ, ಇದಲ್ಲದೇ ವೃತ್ತಿಪರ ಚಾಲಕರ ಕೊರತೆಯನ್ನು ಎದುರಿಸುತ್ತಿದ್ದೇವೆ.

ಇದರ ಜೊತೆಗೆ, ಕಂತು ಪಾವತಿಸಲು ಹಣಕಾಸು ಸಂಸ್ಥೆಗಳ ಒತ್ತಡ ವಿಪರೀತ ವಾಗುತ್ತಿದ್ದರಿಂದ ವಾಹನಗಳನ್ನು ಮಾಲೀಕರು ಮಾರಾಟ ಮಾಡಿ ಸಾಲ ಮರುಪಾವತಿ ಮಾಡುತ್ತಿದ್ದಾರೆ. ನಗರದಲ್ಲಿ ಪ್ರಯಾಣಿಕರ ಹೊತ್ತೊಯ್ಯುವ ಟ್ಯಾಕ್ಸಿಗಳ ಬೇಡಿಕೆ ಅಧಿಕವಾಗಿದೆ.

Travels Vehicles Road Tax On Yearly Basis, Request From Travels Owners Association

ರಾಜ್ಯ ಸರ್ಕಾರ ಹಾಗೂ ಪ್ರವಾಸೋದ್ಯಮಕ್ಕೆ ತೊಡಕಾಗಿ ಸುದ್ದಿಯಾಗುವ ಮೊದಲೇ ಪರ್ಯಾಯ ವ್ಯವಸ್ಥೆಯಾಗಿ ಪ್ರಯಾಣಿಕರ ಸೇವೆಗಾಗಿ ವಾಹನ ತೆಗೆದುಕೊಳ್ಳುವವರಿಗೆ ಎರಡು ವರ್ಷಗಳ ಕಾಲ ವಾಹನ ಜೀವಿತಾವಧಿಯ ತೆರಿಗೆಯಲ್ಲಿ ಬದಲಾವಣೆ ಮಾಡಿ ವಾರ್ಷಿಕ ತೆರಿಗೆ ಪಾವತಿಸುವಂತೆ ವಾಹನಗಳನ್ನು ನೊಂದಾವಣಿ ಮಾಡಲು ಅವಕಾಶ ಮಾಡಬೇಕಿದೆ.

ಕೇರಳದಲ್ಲಿ ಬಸ್‌, ಟ್ಯಾಕ್ಸಿ, ಆಟೋ ದರ ಏರಿಕೆ ಹೊರೆ, ಪ್ರಯಾಣಿಕರಿಗೆ ಬರೆಕೇರಳದಲ್ಲಿ ಬಸ್‌, ಟ್ಯಾಕ್ಸಿ, ಆಟೋ ದರ ಏರಿಕೆ ಹೊರೆ, ಪ್ರಯಾಣಿಕರಿಗೆ ಬರೆ

ನಗರದಲ್ಲಿರುವ ಬಹುರಾಷ್ಟ್ರೀಯ ಕಂಪೆನಿಗಳಿಗೆ, ಅಂತರಾಷ್ಟ್ರೀಯ ವಸ್ತು ಪ್ರದರ್ಶನಗಳು ನಡೆಯುವ ಸಂದರ್ಭದಲ್ಲಿ ವಾಹನಗಳ ಬೇಡಿಕೆ ಅತಿಯಾಗೂವುದು ಮತ್ತು ಗುಣಮಟ್ಟದ ಸೌಲಭ್ಯ ಕೊಡಲು ನಗರದ ಟ್ರಾವೆಲ್ಸ ಮಾಲೀಕರಿಗೆ ಸರ್ಕಾರದಿಂದ ಪ್ರೋತ್ಸಾಹ ದೊರಕಬೇಕಿದೆ.

Travels Vehicles Road Tax On Yearly Basis, Request From Travels Owners Association

ಇಲ್ಲದೇ ಹೋದರೆ ಮುಂದಿನ ದಿನಗಳಲ್ಲಿ ಕರ್ನಾಟಕದವರ ಸಾರಿಗೆ ಉದ್ಯಮ ಕೈತಪ್ಪುವುದು ನಿಶ್ಚಿತ. ಎರಡು ವರ್ಷಗಳ ಕಾಲ ಪ್ರಯಾಣಿಕರ ಹೊತ್ತೊಯ್ಯುವ ಎಲ್ಲಾ ಟ್ಯಾಕ್ಸಿ ವಾಹನಗಳಿಗೆ ಜೀವಿತಾವದಿಯ ತೆರಿಗೆಯಿಂದ ಹೊರಗಿಟ್ಟು ಉದ್ಯಮ ನಡೆಸುವ ಮಾಲೀಕರಿಗೆ ಚಾಲಕರಿಗೆ ಹೊಸ ವಾಹನ ಖರೀದಿಸಲು ಅವಕಾಶ ಕೊಡಬೇಕಿದೆ. (ಕೆ.ರಾಧಾಕೃಷ್ಣ ಹೊಳ್ಳ, ಅಧ್ಯಕ್ಷರು, ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘ).

English summary
Travels Vehicles Road Tax On Yearly Basis, Request From Travels Owners Association. Know More,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X