• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

KSRTC ಟ್ರೇಡ್ ಮಾರ್ಕ್; ಸಾರಿಗೆ ಸಚಿವ ಲಕ್ಷ್ಮಣ ಸವದಿ ಪ್ರತಿಕ್ರಿಯೆ...

|
Google Oneindia Kannada News

ಬೆಂಗಳೂರು, ಜೂನ್ 03: KSRTC ಬ್ರ್ಯಾಂಡ್ ಸಂಬಂಧ ಟ್ರೇಡ್ ಮಾರ್ಕ್‌ ರಿಜಿಸ್ಟರಿ ತೀರ್ಪು ನೀಡಿದ್ದು, ಕೆಎಸ್‌ಆರ್‌ಟಿಸಿ ಬ್ರ್ಯಾಂಡ್ ಕೇರಳಕ್ಕೆ ಸೇರಿಕೊಂಡಿದೆ. ಈ ಹೆಸರನ್ನು ಕರ್ನಾಟಕ ಬಳಕೆ ಮಾಡುವಂತಿಲ್ಲ ಎಂದು ಬುಧವಾರ ತೀರ್ಪು ನೀಡಿದೆ. ಈ ಕುರಿತು ರಾಜ್ಯ ಸಾರಿಗೆ ಸಚಿವ ಲಕ್ಷ್ಮಣ ಸವದಿ ಪ್ರತಿಕ್ರಿಯೆ ನೀಡಿದ್ದಾರೆ.

Recommended Video

   KSRTC ಯನ್ನು ಕೇರಳಕ್ಕೆ ಬಿಟ್ಟುಕೊಟ್ಟು ಲಕ್ಷ್ಮಣ್ ಸವದಿ ಹೇಳಿದ್ದು ಹೀಗೆ | Oneindia Kannada

   KSRTC ಬ್ರ್ಯಾಂಡ್ ಕುರಿತು ಟ್ರೇಡ್ ಮಾರ್ಕ್ ರಿಜಿಸ್ಟರ್ ತೀರ್ಪು ನೀಡಿದೆ. ಆದರೆ ಈ ತೀರ್ಪಿನಲ್ಲಿ ಏನಿದೆ ಎಂಬುದರ ವಿವರ ನಮಗೆ ಬಂದಿಲ್ಲ. ಅಧೀಕೃತವಾಗಿ ಈ ಆದೇಶ ನಮ್ಮ ಕೈಸೇರಿದ ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

   ಕೇರಳ ರಾಜ್ಯದ ಪಾಲಾದ KSRTC ಟ್ರೇಡ್‌ ಮಾರ್ಕ್‌!ಕೇರಳ ರಾಜ್ಯದ ಪಾಲಾದ KSRTC ಟ್ರೇಡ್‌ ಮಾರ್ಕ್‌!

   ಈ ಹೆಸರಿನ ಬಳಕೆ ಕುರಿತು ಕಾನೂನು‌ ಹೋರಾಟದ ಕುರಿತು ಆನಂತರ ನಿರ್ಧರಿಸುತ್ತೇವೆ. ದುರದೃಷ್ಟದ ವಿಷಯ ಎಂದರೆ, ಈ ವಿವಾದ ಅನಗತ್ಯವಾಗಿದೆ. ಟ್ರೇಡ್ ಮಾರ್ಕ್ ಎನ್ನುವುದು ಖಾಸಗಿ ಸಂಸ್ಥೆಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ಸರ್ಕಾರಿ ಸಂಸ್ಥೆಗಳ ಮೇಲೆ ಪ್ರಭಾವ ಬೀರಲ್ಲ. ಇಲ್ಲಿ ಜನರ ಸೇವೆಯೇ ಮುಖ್ಯ. ಕರ್ನಾಟಕ, ಕೇರಳ ಲಾಭ ಗಳಿಸುವ ಸ್ಪರ್ಧೆಗೆ ಮುಂದಾಗಿಲ್ಲ ಸಾರ್ವಜನಿಕ ಹಿತ, ಸೇವೆ ಗಮನದಲ್ಲಿಟ್ಟು ಕೆಲಸ
   ಮಾಡುತ್ತಿವೆ ಎಂದಿದ್ದಾರೆ.

   ಒಂದು ರಾಜ್ಯ ಮತ್ತೊಂದು ರಾಜ್ಯದ ಜೊತೆ ಸೌಹಾರ್ದಯುತವಾಗಿರಬೇಕು ಎಂದು ಒಕ್ಕೂಟ ವ್ಯವಸ್ಥೆ ತಿಳಿಸುತ್ತದೆ. ಈ ವಿಷಯದಲ್ಲಿ ಅನಗತ್ಯ ವಿವಾದ ಹೆಚ್ಚು ಮಾಡೋದು ಬೇಡ ಎಂದು ಉಲ್ಲೇಖಿಸಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ.

   ಈ ವಿಷಯವನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಳ್ಳಬಾರದು. ಇದು ಕೇರಳಕ್ಕೆ ಸಂಭ್ರಮಪಡುವಂಥ ವಿಚಾರವೇನಲ್ಲ ಎಂದು ಹೇಳಿದ್ದು, ಎರಡೂ ರಾಜ್ಯಗಳು ಸಾರಿಗೆ ಸಂಸ್ಥೆ ವಿಚಾರದಲ್ಲಿ ಪೈಪೋಟಿಯಲ್ಲಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.

   English summary
   State transport Minister Lakshmana Savadi reacts To issue over karnataka loses KSRTC trademark to Kerala
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X