ಕರ್ನಾಟಕದಲ್ಲಿ ಓಲಾ ಶೇರ್, ಊಬರ್ ಪೂಲಿಂಗ್ ರದ್ದು

ಬೆಂಗಳೂರು, ಜೂನ್ 28 : ಕರ್ನಾಟಕದಲ್ಲಿ ಓಲಾ ಮತ್ತು ಊಬರ್ ಕ್ಯಾಬ್‌ಗಳ ಶೇರಿಂಗ್ ಸಿಸ್ಟಮ್‌ ಅನ್ನು ತಕ್ಷಣದಿಂದ ಜಾರಿಗೆ ಬರುವಂತೆ ರದ್ದುಗೊಳಿಸಲಾಗಿದೆ. ನಿಯಮ ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲು ಆರ್‌ಟಿಓಗಳಿಗೆ ಸೂಚನೆ ನೀಡಲಾಗಿದೆ.

ಶುಕ್ರವಾರ ಸಾರಿಗೆ ಇಲಾಖೆ ಆಯುಕ್ತ ವಿ.ಪಿ.ಇಕ್ಕೇರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ. ತಕ್ಷಣದಿಂದ ಜಾರಿಗೆ ಬರುವಂತೆ ಓಲಾ ಶೇರ್ ಮತ್ತು ಊಬರ್ ಪೂಲಿಂಗ್ ಸೇವೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಲಾಗಿದೆ.

ಮಹಿಳಾ ಪ್ರಯಾಣಿಕರ ಸುರಕ್ಷತೆ, ಕ್ಯಾಬ್ ಗಳ ಸಂಚಾರದಕ್ಕೆ ನೀಡಿದ ಅನುಮತಿಯನ್ನು ಕಟ್ಟು ನಿಟ್ಟಾಗಿ ಜಾರಿಗೆ ತರುವ ಉದ್ದೇಶದಿಂದ ಶೇರಿಂಗ್ ಸಿಸ್ಟಮ್ ರದ್ದುಗೊಳಿಸಲಾಗಿದೆ. ಶೇರ್ ಮತ್ತು ಪೂಲಿಂಗ್ ವೇಳೆಯಲ್ಲಿ ಮಹಿಳಾ ಪ್ರಯಾಣಿಕರು ಇದ್ದರೆ ಅವರಿಗೆ ಕಿರುಕುಳ ನೀಡಿದ ಪ್ರಕರಣಗಳು ಸಹ ನಡೆದಿದ್ದವು.

Transport department cancelled Ola and Uber share system

ಓಲಾ ಮತ್ತು ಊಬರ್ ಸಂಸ್ಥೆಗಳು ಶೇರಿಂಗ್, ಪೂಲಿಂಗ್ ಅನ್ನು ನಿಯಮ ಬಾಹಿರವಾಗಿ ಮುಂದುವರೆಸಿದರೆ ಕ್ಯಾಬ್ ಸಂಚಾರಕ್ಕೆ ನೀಡಿರುವ ಅನುಮತಿಯನ್ನು ರದ್ದುಗೊಳಿಸುವುದಾಗಿ ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ.

ಟ್ಯಾಕ್ಸಿ ಮಾಲೀಕರು, ಚಾಲಕರ ಜೊತೆ ಸಾರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಗಿದೆ. ನಿಯಮವನ್ನು ಉಲ್ಲಂಘನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಆರ್‌ಟಿಓಗಳಿಗೆ ಸೂಚನೆ ನೀಡಲಾಗಿದೆ.

ಓಲಾ ಶೇರ್ ಮತ್ತು ಊಬರ್ ಪೂಲ್ ಬಹಳ ಜನಪ್ರಿಯವಾಗಿದ್ದವು. ಒಂದೇ ಕಡೆ ತೆರಳುವ ಇಬ್ಬರು ಶೇರಿಂಗ್ ಮೂಲಕ ಪ್ರಯಾಣ ಬೆಳೆಸುತ್ತಿದ್ದರು. ಇದರಿಂದಾಗಿ ಸಂಚಾರ ದಟ್ಟಣೆ ಕಡಿಮೆಯಾಗುತ್ತಿತ್ತು. 2017ರಲ್ಲಿ ಶೇರಿಂಗ್ ಸಿಸ್ಟಮ್ ರದ್ದುಗೊಳಿಸಲು ಇಲಾಖೆ ಮುಂದಾಗಿತ್ತು, ಆಗ ವಿರೋಧವನ್ನು ವ್ಯಕ್ತಪಡಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+