ತಿರುಪತಿಗೆ ಹೋಗುವ ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ವೇಳಾಪಟ್ಟಿ ಬದಲಾಗಿದೆ!
ತಿರುಪತಿ ತಿಮ್ಮಪ್ಪನ ದೇಗುಲಕ್ಕೆ ಕೋಟಿ ಕೋಟಿ ಭಕ್ತರು ತೆರಳಿ ದರ್ಶನ ಪಡೆಯುತ್ತಾರೆ. ಈ ಪೈಕಿ ಕರ್ನಾಟಕದಿಂದ ಕೂಡ ತಿರುಪತಿ ತಿಮ್ಮಪ್ಪನ ಭಕ್ತರಿಗೆ ಅಂತಾ ರೈಲು ವ್ಯವಸ್ಥೆ ಕೂಡ ಮಾಡಲಾಗಿದೆ. ಲಕ್ಷಾಂತರ ಭಕ್ತರು ಈ ರೈಲು ಸೇವೆ ಪಡೆದು, ಬೆಂಗಳೂರು ಸೇರಿ ರಾಜ್ಯದ ವಿವಿಧ ಜಿಲ್ಲೆಗಳಿಂದ ತಿರುಪತಿ ತಿಮ್ಮಪ್ಪನ ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆಯುತ್ತಾರೆ. ಹೀಗಿದ್ದಾಗಲೇ ತಿರುಪತಿಗೆ ಹೋಗುವ ರೈಲುಗಳ ವೇಳಾಪಟ್ಟಿ ಬದಲಾಗಿದೆ.
ಈಗಾಗಲೇ ಭಾರತದ ಬಹುತೇಕ ಪ್ರದೇಶಕ್ಕೆ ರೈಲು ಮಾರ್ಗದ ವ್ಯವಸ್ಥೆಯನ್ನ ಮಾಡಲಾಗಿದೆ. ಭಾರತೀಯ ರೇಲ್ವೆ ಇಡೀ ಜಗತ್ತಿನಲ್ಲಿ ದೊಡ್ಡ ಮಾರ್ಗ ಹೊಂದಿರುವ & ಅಚ್ಚುಕಟ್ಟು ವ್ಯವಸ್ಥೆಯ ಹೊಂದಿರುವ ರೇಲ್ವೆ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿದೆ. ಅದ್ರಲ್ಲೂ ಪ್ರತಿನಿತ್ಯವೂ ಕೋಟ್ಯಂತರ ಭಾರತೀಯರು ರೈಲ್ವೆ ಪ್ರಯಾಣ ನೆಚ್ಚಿಕೊಂಡು ಬದುಕುತ್ತಿದ್ದಾರೆ. ಹೀಗೆ, ಭಾರತೀಯ ಸಂಪರ್ಕ ಸಾಧನದಲ್ಲಿ ರೇಲ್ವೆ ಇಲಾಖೆ ಒಂದು ಮಹತ್ವದ ದಾರಿಯಾಗಿದೆ. ಅದೇ ರೀತಿ ತೀರ್ಥಯಾತ್ರೆಗೂ ರೈಲ್ವೆ ಸಂಪರ್ಕ ದೊಡ್ಡ ಸಹಾಯ ಮಾಡುತ್ತದೆ.

ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ
ಇನ್ನು ದೇವಸ್ಥಾನಕ್ಕೆ ಹೋಗಿ ದೇವರಿಂದ ಆಶೀರ್ವಾದ ಪಡೆಯಲು ರೈಲುಗಳ ಸೇವೆಯನ್ನು ಬಳಸುತ್ತಾರೆ ಭಕ್ತರು. ಅದೇ ರೀತಿಯಾಗಿ ಶ್ರೀ ತಿರುಪತಿ ತಿಮ್ಮಪ್ಪನ ದೇಗುಲಕ್ಕೆ ಹೋಗೋದಕ್ಕೆ ಕೂಡ ಪ್ರಯಾಣಿಕರು ರೈಲು ಸೇವೆ ಪಡೆಯುತ್ತಾರೆ. ಇದೀಗ ಕಾಮಗಾರಿಯ ಕಾರಣಕ್ಕೆ ತಿರುಪತಿ ರೈಲುಗಳ ವೇಳಾಪಟ್ಟಿ ಬದಲಾಗಿದೆ. ಹಾಗಾದ್ರೆ ಯಾವ ಯಾವ ಮಾರ್ಗದಲ್ಲಿ ಈಗ ಮಾರ್ಗ ಮತ್ತು ರೈಲು ವೇಳಾಪಟ್ಟಿ ಬದಲಾವಣೆ ಮಾಡಲಾಗಿದೆ? ಸಂಪೂರ್ಣ ಮಾಹಿತಿಗೆ ಮುಂದೆ ಓದಿ.
ರೈಲುಗಳ ಮಾರ್ಗ ಬದಲಾವಣೆ
ತಿರುಪತಿ ನಿಲ್ದಾಣದಲ್ಲಿ ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿ ಕೈಗೊಳ್ಳುವುದರಿಂದ, ಈ ಕೆಳಗಿನ ರೈಲು ಬದಲಾದ ಮಾರ್ಗದ ಮೂಲಕ ಸಂಚಾರ ನಡೆಸಲಿವೆ ಅಂತಾ ದಕ್ಷಿಣ ಮಧ್ಯ ರೈಲ್ವೆಯೂ ಪ್ರಯಾಣಿಕರಿಗೆ ಇದೀಗ ಮಹತ್ವದ ಸೂಚನೆ ನೀಡಿದೆ.
1). ಏಪ್ರಿಲ್ 22 ರಂದು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 12890 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು To ಟಾಟಾನಗರ ಎಕ್ಸ್ ಪ್ರೆಸ್ ರೈಲು ಕಟಪಾಡಿ, ಅರಕ್ಕೋಣಂ ಮತ್ತು ರೇಣಿಗುಂಟ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ತಿರುಪತಿ ನಿಲ್ದಾಣದಲ್ಲಿ ನಿಲುಗಡೆ ಇರುವುದಿಲ್ಲ ಎಂದು ಈ ಮೂಲಕ ಮಾಹಿತಿ ನೀಡಲಾಗಿದೆ.
2). ಏಪ್ರಿಲ್ 16, 18 ಮತ್ತು 23 ರಂದು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 12836 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು To ಹಟಿಯಾ ಎಕ್ಸ್ ಪ್ರೆಸ್ ರೈಲು ಕಟಪಾಡಿ, ಅರಕ್ಕೋಣಂ ಮತ್ತು ರೇಣಿಗುಂಟ ನಿಲ್ದಾಣಗಳ ಮೂಲಕ ಸಂಚರಿಸಲಿದೆ. ಹೀಗಾಗಿ ಚಿತ್ತೂರು ಮತ್ತು ತಿರುಪತಿ ನಿಲ್ದಾಣಗಳಲ್ಲಿ ನಿಲುಗಡೆ ಇರುವುದಿಲ್ಲ.
ರೈಲುಗಳು ನಿಯಂತ್ರಣದ ಬಗ್ಗೆ ಮಾಹಿತಿ
ಏಪ್ರಿಲ್ 10 ರಿಂದ 16 ರವರೆಗೆ ಜಲಗಾಂವ್ To ಮನ್ಮಾಡ್ ಭಾಗದ ನಡುವಿನ 3ನೇ ಮಾರ್ಗಕ್ಕೆ ಸಂಬಂಧಿಸಿದಂತೆ ಚಾಲಿಸಗಾಂವ್ ಯಾರ್ಡ್ ಕಾಮಗಾರಿ ಸಲುವಾಗಿ ಈ ಕೆಳಗಿನ ರೈಲುಗಳನ್ನು ಮಾರ್ಗ ಮಧ್ಯದಲ್ಲಿ ನಿಯಂತ್ರಿಸಲಾಗುತ್ತಿದೆ ಎಂದು ಮಧ್ಯ ರೈಲ್ವೆ ಇಲಾಖೆ ಸೂಚನೆ ನೀಡಿದೆ.
1). ಏಪ್ರಿಲ್ 15 ರಂದು ವಾಸ್ಕೋ ಡ ಗಾಮಾ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 12779 ವಾಸ್ಕೋ ಡ ಗಾಮಾ-ಹಜರತ್ ನಿಜಾಮುದ್ದೀನ್ ಎಕ್ಸ್ ಪ್ರೆಸ್ ರೈಲು ಮಾರ್ಗ ಮಧ್ಯದಲ್ಲಿ ಒಟ್ಟು 90 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತಿದೆ.
2). ಏಪ್ರಿಲ್ 15 ರಂದು ಹಜರತ್ ನಿಜಾಮುದ್ದೀನ್ ನಿಲ್ದಾಣದಿಂದ ಹೊರಡುವ ರೈಲು ಸಂಖ್ಯೆ 12780 ಹಜರತ್ ನಿಜಾಮುದ್ದೀನ್-ವಾಸ್ಕೋ ಡ ಗಾಮಾ ಎಕ್ಸ್ ಪ್ರೆಸ್ ರೈಲು ಮಾರ್ಗ ಮಧ್ಯದಲ್ಲಿ 145 ನಿಮಿಷಗಳ ಕಾಲ ನಿಯಂತ್ರಿಸಲಾಗುತ್ತಿದೆ ಎಂದು ಮಾಹಿತಿಯನ್ನ ನೀಡಲಾಗಿದೆ.











Click it and Unblock the Notifications