Train Cancelled: ಮಂಗಳೂರಿನಿಂದ ಈ ಮಾರ್ಗದಲ್ಲಿ ಹೊರಡುವ ರೈಲು ಸೇವೆ 10 ದಿನ ರದ್ದು, ದಿನಾಂಕ, ಗಾಡಿ ಸಂಖ್ಯೆ, ವಿವರ

ಬೆಂಗಳೂರು, ಡಿಸೆಂಬರ್ 19: ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ಮಾರ್ಗದಲ್ಲಿ ತುರ್ತು ಕಾಮಗಾರಿ ಕೈಗೊಂಡಿರುವ ಪರಿಣಾಮ ಇಂದಿನಿಂದ ಮಂಗಳೂರು ಜಂಕ್ಷನ್‌ನಿಂದ ಈ ಭಾಗದತ್ತ ಹೊರಡುವ ರೈಲುಗಳ ಸಂಚಾರ ರದ್ದುಗೊಂಡಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ಗುಳೇದಗುಡ್ಡ, ಬಾಗಲಕೋಟೆ ಮಾರ್ಗದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಹೀಗಾಗಿ ಮೈಸೂರು ಜಂಕ್ಷನ್‌ನಿಂದ ವಿಜಯಪುರವರೆಗಿನ ರೈಲು ಸಂಚಾರವು ಇಂದು ಡಿಸೆಂಬರ್ 19 ರಿಂದ ಡಿಸೆಂಬರ್ 28 ವರೆಗೆ ಸಂಚಾರದಲ್ಲಿ ವ್ಯತ್ಯಯವಾಗಲಿದೆ. ಯಾವ ರೈಲುಗಳು ಎಂದು ಸಮಯ ಮತ್ತು ಗಾಡಿ ಸಂಖ್ಯೆಗಳ ಮಾಹಿತಿ ಇಲ್ಲಿದೆ.

Train Cancellation: Mangaluru-Vijayapura Train Services Disrupted till Dec 28th, Timing, Details

ಈ ಕಾಮಗಾರಿ ಪ್ರಯುಕ್ತ ಎಂದಿನಂತೆ ಮಂಗಳೂರು ಜಂಕ್ಷನ್‌ನಿಂದ ಹೊರಡು ರೈಲು ವಿಜಯಪುರಕ್ಕೆ ಹೋಗದೇ ಹುಬ್ಬಳ್ಳಿ ಜಂಕ್ಷನ್‌ನಲ್ಲಿಯೇ ಪ್ರಯಾಣ ಕೊನೆಗೊಳಿಸಲಿವೆ. ವಿಜಯಪುರ-ಮಂಗಳೂರು ಜಂಕ್ಷನ್ ರೈಲು (ಗಾಡಿ ಸಂಖ್ಯೆ 07377) ಸಂಚಾರವು ಇಂದಿನಿಂದ ಹತ್ತು ದಿನ ಸಂಚಾರ ರದ್ದುಗೊಳಿಸಿದೆ.

ಹುಬ್ಬಳ್ಳಿ-ವಿಜಯಪುರ ಸಂಚಾರವು ರದ್ದು

ಈ ಮೂಲಕ ಹುಬ್ಬಳ್ಳಿಯಿಂದ ವಿಜಯಪುರ ಮಾರ್ಗದ ಮಧ್ಯೆ ಸಂಚಾರ ರದ್ದಾಗಲಿದೆ. ಪ್ರಯಾಣಿಕರು ಪರ್ಯಾಯ ಸಾರಿಗೆ ಸೇವೆ ಮೂಲಕ ಸಂಚರಿಸಬೇಕಿದೆ. ಇನ್ನೂ ರೈಲು ತಡರಾತ್ರಿ 12.5 ನಿಮಿಷಕ್ಕೆ ಹುಬ್ಬಳ್ಳಿ ಜಂಕ್ಷನ್‌ನಿಂದ ಮತ್ತೆ ಪ್ರಯಾಣ ಪ್ರಾರಂಭಿಸಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

Train Cancellation: Mangaluru-Vijayapura Train Services Disrupted till Dec 28th, Timing, Details

ಗುಳೆದಗುಡ್ಡ ವ್ಯಾಪ್ತಿಯಲ್ಲಿ ರೈಲ್ವೆ ಇಲಾಖೆಯಿಂದ ಕಾಮಗಾರಿಗಳು ನಡೆಯುತ್ತಿರುವ ಕಾರಣ ಈ ಭಾಗದಲ್ಲಿ ಓಡಾಡುವ 12 ರೈಲುಗಳ ಓಡಾಟ ಭಾಗಶಃ ರದ್ದಾಗಿವೆ. ಗೆಳೆದಗುಡ್ಡ ಮತ್ತು ಬಾಗಕೋಟ್ ಮಧ್ಯೆ ಡಬಲ್ ಲೈನ್ ಮಾಡಲುವ ಪೂರ್ವ ಇಂಟರ್‌ಲಾಕಿಂಗ್ ಹಾಗೂ ಇಂಟರ್‌ಲಾಕಿಂಗ್ ಕಾರ್ಯಗಳ ಹಿನ್ನೆಲೆಯಲ್ಲಿ ಬಾಗಶಃ ರೈಲುಗಳನ್ನು ರದ್ದು ಮಾಡಲಾಗಿದೆ.

ಮಂಗಳೂರು ಜಂಕ್ಷನ್ ರೈಲು ಹುಬ್ಬಳ್ಳಿಗೆ ತನ್ನ ಸಂಚಾರ ಮೊಟಕುಗೊಳಿಸುತ್ತದೆ. ಇನ್ನೂ ಹುಬ್ಬಳ್ಳಿಯಿಂದ ವಿಜಯಪುರಕ್ಕೆ ತೆರಳಬೇಕಿದ್ದ ನಿತ್ಯ ಓಡಾಡುವ (ದೈನಂದಿನ) ಪ್ಯಾಸೆಂಜರ್ ರೈಲು (ಗಾಡಿ ಸಂಖ್ಯೆ 06919) ಮುಂದಿನ ಹತ್ತು ದಿನ ರದ್ದಾಗಿವೆ. ಇವುಗಳ ಸೇರಿದಂತೆ ವಿವಿಧ ರೈಲುಗಳು ರದ್ದಾಗಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+