ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೈಲು ಅಪಘಾತಕ್ಕೆ ತಿಂಗಳಿಗೆ 130 ಜನ ಆಹುತಿ: ಸಿಗುತ್ತಿಲ್ಲ ದುರಂತಗಳಿಗೆ ಮುಕ್ತಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 26: ರಾಜ್ಯದಲ್ಲಿ ರೈಲ್ವೆ ಹಳಿಗಳ ಮೇಲೆ ಸಾವುಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ತಿಂಗಳಿಗೆ 130 ಮಂದಿ ಸಾವಿಗೀಡಾಗುತ್ತಿದ್ದಾರೆ ಎನ್ನುವ ಮಾಹಿತಿ ಆತಂಕ್ಕೀಡು ಮಾಡಿದೆ.

ಇತ್ತೀಚೆಗಷ್ಟೇ ಅಮೃತ ಅಮೃತಸರದ ರಾಮಲೀಲಾ ವೀಕ್ಷಿಸುತ್ತಿದ್ದ ವೇಳೆ ರೈಲು ಹರಿದು 60ಕ್ಕೂ ಹೆಚ್ಚು ಜನರು ಮೃತಪಟ್ಟ ಘಟನೆ ರೈಲ್ವೆ ಸುರಕ್ಷತೆ ಕುರಿತು ವ್ಯಾಪಕ ಚರ್ಚೆ ಹುಟ್ಟುಹಾಕುವಂತೆ ಮಾಡಿದೆ. ಬುಲೆಟ್ ರೈಲು, ಎಂಜಿನ್ ರಹಿತ ಅತ್ಯಾಧುನಿಕ ಹೈಸ್ಪೀಡ್ ರೈಲುಗಳನ್ನು ಅಭಿವೃದ್ಧಿ ಪಡಿಸಿದ್ದೇವೆ ಎನ್ನುವ ಹೆಗ್ಗಳಿಕೆ ದೇಶದಲ್ಲಿದ್ದರೆ ಇದರಿಂದ ಅನನುಕೂಲಗಳೂ ಹೆಚ್ಚಾಗಿವೆ.

 ಎಕ್ಸ್ ಪ್ರೆಸ್ ರೈಲಿನ ಕಿಟಕಿ ಸರಳು ಹಿಡಿದು ಯುವಕನ ಹುಚ್ಚು ಸಾಹಸ ಎಕ್ಸ್ ಪ್ರೆಸ್ ರೈಲಿನ ಕಿಟಕಿ ಸರಳು ಹಿಡಿದು ಯುವಕನ ಹುಚ್ಚು ಸಾಹಸ

ಕರ್ನಾಟಕದಲ್ಲಿ ಪ್ರತಿದಿನ ಸರಾಸರಿ 4 ಮಂದಿ ರೈಲ್ವೆ ಹಳಿಗಳ ಮೇಲೆ ಸಾವನ್ನಪ್ಪುತ್ತಿದ್ದಾರೆ. ರಾಜ್ಯದಲ್ಲಿ ಕಳೆದ ಮೂರು ವರ್ಷಗಳಲ್ಲಿ 4595 ಮಂದಿ ಮೃತಪಟ್ಟಿದ್ದಾರೆ. ತಿಂಗಳಿಗೆ 130 ಮಂದಿ ಮೃತಪಡುತ್ತಿದ್ದಾರೆ ಎಂದು ತಿಳಿದುಬಂದಿದೆ.

ಆನೆಗಳ ಸಾವಿಗೆ ಅಂಕುಶ: ರೈಲ್ವೆ ಇಲಾಖೆಯ 'ದುಂಬಿ ಯೋಜನೆ' ಯಶಸ್ವಿಆನೆಗಳ ಸಾವಿಗೆ ಅಂಕುಶ: ರೈಲ್ವೆ ಇಲಾಖೆಯ 'ದುಂಬಿ ಯೋಜನೆ' ಯಶಸ್ವಿ

ಹಾಗಾದರೆ ಸಾವಿಗೆ ಕಾರಣಗಳು ಏನೆಂಬುದನ್ನು ನೋಡುವುದಾದರೆ ಹಳಿ ಮತ್ತು ಸಿಗ್ನಲ್ ದಾಟುವ ವೇಳೆ ಹಳಿಗೆ ಸಿಲುಕಿ 2016ರಲ್ಲಿ 743 ಮಂದಿ ಮೃತಪಟ್ಟಿದ್ದಾರೆ, 2017ರಲ್ಲಿ 654 ಮಂದಿ ಮೃತಪಟ್ಟಿದ್ದಾರೆ. ಹಾಗೆಯೇ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆಯೂ ಹೆಚ್ಚಳವಾಗಿದೆ.

 ವಿದೇಶದಲ್ಲಿ ರೈಲ್ವೆ ವ್ಯವಸ್ಥೆ ಹೇಗಿದೆ?

ವಿದೇಶದಲ್ಲಿ ರೈಲ್ವೆ ವ್ಯವಸ್ಥೆ ಹೇಗಿದೆ?

ವಿದೇಶದಲ್ಲಿ ವಿದೇಶದಲ್ಲಿ ರೈಲು ಬಂದಾಗ ಸೆನ್ಸರ್ ಗೇಟುಗಳು ಕ್ಲೋಸ್ ಆಗಿ ನಂತರ ತೆರೆದುಕೊಳ್ಳುತ್ತದೆ, ಸ್ವಯಂ ಚಾಲಿತ ಸೆನ್ಸರ್‌ಗೇಟುಗಳಿರುತ್ತವೆ, ರೈಲಿನ ಮುಂಭಾಗ ಹಾಗೂ ಹಿಂಭಾಗದಲ್ಲಿ ಕ್ಯಾಮರಾ ಇರುತ್ತದೆ, ರೈಲು ಹಳಿಗಳ ಮೇಲೆ ಅತಿಕ್ರಮ ಪ್ರವೇಶಕ್ಕೆ ಅವಕಾಶವಿರುವುದಿಲ್ಲ.

 ವಿದೇಶಿ ರೈಲ್ವೆ ವ್ಯವಸ್ಥೆ ಅಧ್ಯಯನ ಬೇಕು

ವಿದೇಶಿ ರೈಲ್ವೆ ವ್ಯವಸ್ಥೆ ಅಧ್ಯಯನ ಬೇಕು

ಭಾರತದ ಹಾಗೆ ವಿದೇಶದಲ್ಲಿ ಜನರು ಆಕಸ್ಮಿಕವಾಗಿ ರೈಲಿಗೆಸಿಲುಕಿ ಮೃತಪಡುವವರ ಸಂಖ್ಯೆ ಕಡಿಮೆ ಇದೆ ಅದಕ್ಕೆ ಹಲವಾರು ಕಾರಣಗಳೂ ಇವೆ, ಅಲ್ಲಿನ ವ್ಯವಸ್ಥೆಯನ್ನು ಅಧ್ಯಯನ ಮಾಡಿ ರಾಜ್ಯದಲ್ಲೂ ಆ ಪದ್ಧತಿ ಜಾರಿಗೆ ತರುವಂತೆ ರೈಲ್ವೆ ಇಲಾಖೆಗೆ ಶಿಫಾರಸ್ಸು ಮಾಡಲು ರೈಲ್ವೆ ಪೊಲೀಸ್ ಇಲಾಖೆ ನಿರ್ಧಾರ ತೆಗೆದುಕೊಂಡಿದ್ದಾರೆ.

ಸಬರ್ಬನ್‌ ಯೋಜನೆ ಚುರುಕು: ಮತ್ತಷ್ಟು ರೈಲುಗಳು ಮೆಮುವಾಗಿ ಪರಿವರ್ತನೆಸಬರ್ಬನ್‌ ಯೋಜನೆ ಚುರುಕು: ಮತ್ತಷ್ಟು ರೈಲುಗಳು ಮೆಮುವಾಗಿ ಪರಿವರ್ತನೆ

 ಸಾವಿಗೆ ಕಾರಣ

ಸಾವಿಗೆ ಕಾರಣ

ಹಳಿ ತಪಾಸಣೆ ವೇಳೆ ಸಿಬ್ಬಂದಿಗಳ ನಿರ್ಲಕ್ಷ್ಯ, ರೈಲ್ವೆ ಕ್ರಾಸಿಂಗ್ ಗೇಟ್‌ಗಳನ್ನು ಸಮಯಕ್ಕೆ ಸರಿಯಾಗಿ ಮುಚ್ಚದಿರುವುದು, ಬೇಗ ಹೋಗಬೇಕೆಂಬ ಆತುರದಲ್ಲಿ ಹಳಿ ದಾಟುವುದು ಪ್ರಮುಖ ಕಾರಣವಾಗಿದೆ.

 ರೈಲ್ವೆ ಹಳಿ ಮೇಲೆ ಸಾವು ತಪ್ಪಿಸಲು ಏನು ಮಾಡಬೇಕು

ರೈಲ್ವೆ ಹಳಿ ಮೇಲೆ ಸಾವು ತಪ್ಪಿಸಲು ಏನು ಮಾಡಬೇಕು

ಮೊದಲು ಇಯರ್ ಫೋನ್‌ನ್ನು ಕಿವಿಯಲ್ಲಿ ಸಿಕ್ಕಿಸಿಕೊಂಡು ಹೋಗುವುದನ್ನು ಬಿಡಿ, ಹಿ ದಾಟುವ ವೇಳೆ ಯಾವುದಾಧರು ರೈಲು ಬರುತ್ತಿದೆಯೇ ಎನ್ನುವುದನ್ನು ಮೊದಲು ಗಮನಿಸಿ, ರೈಲಿನ ಬಾಗಿಲಿನಲ್ಲಿ ನಿಂತು ಪ್ರಯಾಣಿಸಬೇಡಿ.

ದೇಶದ ಟಾಪ್ 10 ಗಲೀಜು ಹಾಗೂ ತುಂಬ ಸ್ವಚ್ಛ ರೈಲು ನಿಲ್ದಾಣಗಳ ಪಟ್ಟಿದೇಶದ ಟಾಪ್ 10 ಗಲೀಜು ಹಾಗೂ ತುಂಬ ಸ್ವಚ್ಛ ರೈಲು ನಿಲ್ದಾಣಗಳ ಪಟ್ಟಿ

English summary
In a shocking revelation of railways statistics, average 130 people were in the state every month in the last three years due to train accidents despite modern mechanism and up gradation of all kind of services in the department
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X