ಕರ್ನಾಟಕಕ್ಕಿಂತ ಗುಜರಾತ್‌ನಲ್ಲಿ ಟೊಮೆಟೊ, ಅಕ್ಕಿ, ಬೆಳೆ ದುಬಾರಿ: ಲೆಕ್ಕ ನೀಡಿ, ಕಾರಣ ತಿಳಿಸಿದ ಕಾಂಗ್ರೆಸ್
ಬೆಂಗಳೂರು, ಜುಲೈ 05: ಕರ್ನಾಟಕಕ್ಕಿಂತ ಗುಜರಾತ್‌ನಲ್ಲಿ ಟೊಮೆಟೊ, ಅಕ್ಕಿ, ಬೆಳೆ ದುಬಾರಿ ಎಂದು ಕರ್ನಾಟಕ ಕಾಂಗ್ರೆಸ್ ತಿಳಿಸಿದೆ. ಈ ವಿಚಾರವಾಗಿ ಟ್ವೀಟ್ ಮಾಡಿರುವ ಕೆಪಿಸಿಸಿ, 'ಟೊಮೆಟೊ ಗುಜರಾತಿನಲ್ಲಿ ಕರ್ನಾಟಕಕ್ಕಿಂತ ಹೆಚ್ಚು ದುಬಾರಿಯಾಗಿದೆ. ಅಕ್ಕಿ, ಬೇಳೆ, ಕಾಳುಗಳ ಬೆಲೆ ಇಡೀ ದೇಶದಲ್ಲೇ ಏರಿಕೆ ಕಾಣುತ್ತಿದೆ' ಎಂದು ಹೇಳಿದೆ.
'ಈ ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳೇ ಕಾರಣವಲ್ಲವೇ? ಕೇಂದ್ರ ಸರ್ಕಾರ GST ಕಡಿತಗೊಳಿಸಿ ಜನಸಾಮಾನ್ಯರ ಹೊರೆ ಇಳಿಸಬೇಕಲ್ಲವೇ? ಬಿಜೆಪಿ ಗ ನಿಜವಾಗಿಯೂ ಜನರ ಬಗ್ಗೆ ಕಾಳಜಿ ಇದ್ದರೆ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಮುಂದಾಗಲಿ' ಎಂದು ಒತ್ತಾಯಿಸಿದೆ.

'ದಿನಬಳಕೆಯ ವಸ್ತುಗಳ ಮೇಲೆ ಹಾಕಿರುವ ದುಬಾರಿ GST ವಿರುದ್ಧ ಬಿಜೆಪಿ ನಾಯಕರು ಹೋರಾಟ ರೂಪಿಸಲಿ, ಕಾಂಗ್ರೆಸ್ ಪಕ್ಷವೂ ಬಿಜೆಪಿಯ ಹೋರಾಟಕ್ಕೆ ಬೆಂಬಲಿಸಲಿದೆ. ಬಿಜೆಪಿಗರು ರಾಜಕೀಯ ಬಿಟ್ಟು ನೈಜ ಜನಪರ ಕಾಳಜಿಯನ್ನು ಮೈಗೂಡಿಸಿಕೊಳ್ಳಲಿ' ಎಂದು ಕಾಂಗ್ರೆಸ್ ಹೇಳಿದೆ.
ಟೊಮೊಟೊ ಗುಜರಾತಿನಲ್ಲಿ ಕರ್ನಾಟಕಕ್ಕಿಂತ ದುಬಾರಿ, ಅಕ್ಕಿ, ಬೇಳೆ, ಕಾಳುಗಳ ಬೆಲೆ ಇಡೀ ದೇಶದಲ್ಲೇ ಏರಿಕೆ ಕಾಣುತ್ತಿದೆ.
— Karnataka Congress (@INCKarnataka) July 5, 2023
ಈ ಬೆಲೆ ಏರಿಕೆಗೆ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳೇ ಕಾರಣವಲ್ಲವೇ?
ಕೇಂದ್ರ ಸರ್ಕಾರ GST ಕಡಿತಗೊಳಿಸಿ ಜನಸಾಮಾನ್ಯರ ಹೊರೆ ಇಳಿಸಬೇಕಲ್ಲವೇ?@BJP4Karnataka ಗೆ ನಿಜವಾಗಿಯೂ ಜನರ ಬಗ್ಗೆ ಕಾಳಜಿ ಇದ್ದರೆ ಕೇಂದ್ರ… pic.twitter.com/8DPDhMQmw4
'1 ಸಾವಿರಕ್ಕಿಂತ ಕಡಿಮೆ ಬೆಲೆಯ ಬಟ್ಟೆ, ಪಾದರಕ್ಷೆಗಳನ್ನು ಬಳಸುವವರು ಬಡ ಹಾಗೂ ಮಧ್ಯಮವರ್ಗದ ಜನತೆ. ₹1000ಕ್ಕಿಂತ ಕಡಿಮೆ ಬೆಲೆಯ ವಸ್ತುಗಳ ಮೇಲೆ ದುಬಾರಿ GST ಹಾಕಿದ್ದರ ಬಗ್ಗೆ, ಬಡವರನ್ನು ಪಿಕ್ ಪಾಕೆಟ್ ಮಾಡುತ್ತಿರುವ ಬಗ್ಗೆ ಬಿಜೆಪಿ ನಾಯಕರು ಫ್ರಿಡಂ ಪಾರ್ಕಿನಲ್ಲಿ ಪ್ರತಿಭಟಿಸುವುದು ಯಾವಾಗ?' ಎಂದು ಕೆಪಿಸಿಸಿ ಪ್ರಶ್ನಿಸಿದೆ.

'ಬಡ ಹಾಗೂ ಮಧ್ಯಮವರ್ಗ ಬಳಸುವ ಆಹಾರ ವಸ್ತುಗಳ ಮೇಲೆ ದುಬಾರಿ GST ಹಾಕಿದ ಕೇಂದ್ರ ಸರ್ಕಾರ ಮೋದಿಯ ಉದ್ಯಮಿ ಗೆಳೆಯರಿಗೆ ಮಾತ್ರ 'ಸಾಲ ಮನ್ನಾದ ಉಚಿತ ಯೋಜನೆ' ನೀಡುತ್ತಿದೆ. ಬಿಜೆಪಿ ನಾಯಕರಿಗೆ ಜನಸಾಮಾನ್ಯರ ಮೇಲೆ ನೈಜ ಕಾಳಜಿ ಇದ್ದರೆ ಗಬ್ಬರ್ ಸಿಂಗ್ ಟ್ಯಾಕ್ಸ್ ಬಗ್ಗೆ ಹೋರಾಟ ಮಾಡಲಿ. ಇಷ್ಟು ದಿನ ಅಧಿಕಾರಕ್ಕಾಗಿ ಬಾಯಿ ಮುಚ್ಚಿಕೊಂಡಿದ್ದರು, ಈಗಲಾದರೂ ಮಾತಾಡಲಿ' ಎಂದೂ ಹೇಳಿದೆ.
'ಬಿಜೆಪಿಗೆ ಈಗ ಏಕಾಏಕಿ ತೆರಿಗೆದಾರರ ಮೇಲೆ ಪ್ರೀತಿ ಉಕ್ಕಿ ಹರಿಯುತ್ತಿದೆ, ಕೇಂದ್ರ ಸರ್ಕಾರದ ಪರೋಕ್ಷ ತೆರಿಗೆಯ ಬಗ್ಗೆ, ತೆರಿಗೆ ಹೆಸರಿನ ಸುಲಿಗೆಯ ಬಗ್ಗೆ ಬಿಜೆಪಿ ನಾಯಕರು ತುಟಿ ಬಿಚ್ಚುವುದಿಲ್ಲವೇಕೆ? ಮಕ್ಕಳ ಕಲಿಕಾ ಸಾಮಗ್ರಿಗಳ ಮೇಲೂ ದುಬಾರಿ GST ಹಾಕಿದ್ದನ್ನು ಸರ್ಕಾರಿ ದರೋಡೆ ಎನ್ನದೆ ಇನ್ನೇನು ಹೇಳಬೇಕು' ಎಂದು ಟ್ವೀಟ್ ಮಾಡಿದೆ.












Click it and Unblock the Notifications