Tipu Cutout: ಟಿಪ್ಪು ಕಟೌಟ್‌ಗೆ ಪಾಕಿಸ್ತಾನದ ಹಾಡು ಬಳಕೆ: ಓರ್ವ ಬಂಧನ, 7 ಜನ ವಶ; ಕ್ರಮಕ್ಕೆ ಆಗ್ರಹ!

ಚಿಕ್ಕಮಗಳೂರು: ಈದ್‌ ಮಿಲಾದ್‌ ಮೆರವಣಿಗೆ ಹಿನ್ನೆಲೆಯಲ್ಲಿ ಚಿಕ್ಕಮಗಳೂರಿನ ಟಿಪ್ಪು ಕಾಲೋನಿಯಲ್ಲಿ ಅಳವಡಿಸಲಾಗಿದ್ದ 40 ಅಡಿ ಎತ್ತರದ ಟಿಪ್ಪು ಸುಲ್ತಾನ್‌ ಕಟೌಟ್‌ಗೆ ಪಾಕಿಸ್ತಾನದ ಹಾಡು ಬಳಸಿ ವಿಡಿಯೋ ಮಾಡಿರುವ ಆರೋಪ ಕೇಳಿಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಇನ್ನುಳಿದ 7 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, 'ಚಿಕ್ಕಮಗಳೂರು ಪವರ್‌ ಟಿಪ್ಪು ಬಾಯ್ಸ್‌' ಹೆಸರಿನ ಖಾತೆಗಳಲ್ಲಿ ಹರಿದಾಡಿದೆ. ವಿಡಿಯೋದಲ್ಲಿ ಕೋಮು ಸೌಹಾರ್ದಕ್ಕೆ ಧಕ್ಕೆ ತರುವ ಹಾಗೂ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವ ರೀತಿಯಲ್ಲಿ ಹಾಡು ಬಳಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

Tipu Cutout Pakistan Song Case One Arrested 7 Detained in Chikkamagaluru

ಪ್ರಕರಣ ದಾಖಲು

ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಚಿಕ್ಕಮಗಳೂರು ನಗರ ಪೊಲೀಸರು ಸ್ವಯಂಪ್ರೇರಿತ (ಸುಮೋಟೋ) ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾರ್ಕೆಟ್‌ ರಸ್ತೆ ನಿವಾಸಿ ರೋಷನ್‌ (23) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನುಳಿದ ಏಳು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಈದ್‌ ಮಿಲಾದ್‌ ಮೆರವಣಿಗೆ ಹಿನ್ನೆಲೆಯಲ್ಲಿ ಅಳವಡಿಸಲಾಗಿದ್ದ ಕಟೌಟ್‌ ಹಾಗೂ ಅದರ ಸುತ್ತಮುತ್ತ ನಡೆದಿರುವ ಚಟುವಟಿಕೆಗಳ ಕುರಿತು ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟವರು ಹಾಗೂ ಅದರ ಹಿಂದೆ ಇರುವವರ ಬಗ್ಗೆ ತನಿಖೆ ಮುಂದುವರಿದಿದೆ.

ಕಠಿಣ ಕ್ರಮಕ್ಕೆ ರವಿ ಸಿ.ಟಿ ಆಗ್ರಹ

ಚಿಕ್ಕಮಗಳೂರಿನ ಟಿಪ್ಪು ನಗರದಲ್ಲಿ 40 ಅಡಿ ಎತ್ತರದ ಟಿಪ್ಪು ಕಟೌಟ್‌ ಅಳವಡಿಸಿ, ಪಾಕಿಸ್ತಾನ ಪರ ಹಾಗೂ ಹಿಂಸೆಯನ್ನು ಪ್ರಚೋದಿಸುವ ರೀತಿಯ ಹಾಡು ಪ್ರಸಾರ ಮಾಡಲಾಗಿದೆ ಎಂದು ಆರೋಪಿಸಿರುವ ವಿಧಾನ ಪರಿಷತ್ ಸದಸ್ಯ ಡಾ. ರವಿ ಸಿ.ಟಿ, ಘಟನೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಸಂಬಂಧಪಟ್ಟವರ ವಿರುದ್ಧ ದೇಶದ್ರೋಹದ ಆರೋಪದಡಿ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಟಿಪ್ಪು ನಗರದಲ್ಲಿ 40 ಅಡಿ ಟಿಪ್ಪು ಕಟೌಟ್ ಹಾಕಿದ್ದಾರೆ. ಅದರ ಜೊತೆಗೆ 'ಹಮ್ ಪಾಕಿಸ್ತಾನಿ ಮುಜಾಹಿದಿನ್ ಹೈ... ಹಮ್ ಗಾಡ್ ದೇಂಗೆ, ಕಾಟ್ ದೇಂಗೆ' ಎಂಬ ಹಾಡು ಹಾಕಿದ್ದಾರೆ" ಎಂದು ಆರೋಪಿಸಿದರು.

ಭಾರತದಲ್ಲಿರುವ ಮುಸಲ್ಮಾನರು ಭಾರತೀಯರಾ? ಪಾಕಿಸ್ತಾನದ ಏಜೆಂಟರಾ? ಭಾರತದಲ್ಲಿ ಇದ್ದುಕೊಂಡು ಪಾಕಿಸ್ತಾನದ ಮುಜಾಹಿದೀನ್ ಎಂದು ಹೇಳಿಕೊಳ್ಳುವ ಧೈರ್ಯವನ್ನು ಯಾರಿಂದ ಪಡೆದಿದ್ದಾರೆ? ಪಾಕಿಸ್ತಾನ ಪರ ಘೋಷಣೆಗಳು ಹಾಗೂ ಹಿಂಸೆಯನ್ನು ಪ್ರಚೋದಿಸುವ ಮಾತುಗಳನ್ನು ಒಳಗೊಂಡ ಹಾಡನ್ನು ಸಾರ್ವಜನಿಕವಾಗಿ ಪ್ರಸಾರ ಮಾಡಿರುವುದು ದೇಶದ್ರೋಹದ ಕೃತ್ಯ. ಈ ದೇಶದ್ರೋಹದ ಕೆಲಸ ಮಾಡಿರುವವರ ಮೇಲೆ ಮೊಕದ್ದಮೆ ಹೂಡಬೇಕು. ಅವರನ್ನು ಬಂಧಿಸಬೇಕು" ಎಂದು ಅವರು ಆಗ್ರಹಿಸಿದರು.

ಹಾಡಿನಲ್ಲಿರುವ "ಹಮ್ ಪಾಕಿಸ್ತಾನ್ ಕಾ ಮುಜಾಹಿದೀನ್ ಹೈ" ಎಂಬ ಸಾಲನ್ನು ಉಲ್ಲೇಖಿಸಿದ ಅವರು, ಭಾರತದಲ್ಲಿ ವಾಸಿಸುತ್ತಾ ಪಾಕಿಸ್ತಾನದ ಮುಜಾಹಿದೀನ್ ಎಂದು ಹೇಳಿಕೊಳ್ಳುವವರ ಧೈರ್ಯವನ್ನು ಪ್ರಶ್ನಿಸಿದರು. ನೀವು ಪಾಕಿಸ್ತಾನಿ ಮುಜಾಹಿದೀನ್ ಆದರೆ, ಇಲ್ಲಿ ಇರುವುದಕ್ಕೆ ನಿಮಗೆ ಯೋಗ್ಯತೆ ಇಲ್ಲ. ನೀವು ಇರಬೇಕಾಗಿರುವ ಜಾಗ ಪಾಕಿಸ್ತಾನ ಎಂದು ರವಿ ಅವರು ಆಕ್ರೋಶ ವ್ಯಕ್ತಪಡಿಸಿದರು.

ಭಾರತದಲ್ಲಿ ಇದ್ದು, ಭಾರತದ ಅನ್ನ ಮತ್ತು ಉಪ್ಪು ತಿಂದು, ಭಾರತ ವಿರೋಧಿ ಮನೋಭಾವ ಬೆಳೆಸಿಕೊಂಡು ದೇಶದ್ರೋಹದ ಚಟುವಟಿಕೆ ನಡೆಸುವವರನ್ನು ಸಹಿಸಿಕೊಳ್ಳಬಾರದು. ಭಾರತದ ಅನ್ನ ತಿಂದು, ಇಲ್ಲಿನ ಉಪ್ಪು ತಿಂದು, ಇಲ್ಲಿಗೆ ದ್ರೋಹ ಮಾಡುತ್ತಿರುವಂತಹ ದ್ರೋಹಿಗಳಿಗೆ ಈ ನೆಲದಲ್ಲಿರುವ ಅವಕಾಶ ಮತ್ತು ಅಧಿಕಾರ ಎರಡೂ ಇಲ್ಲ ಎಂದು ಅವರು ಕಿಡಿಕಾರಿದರು. ಅಂತಹವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು ಎಂದು ಆಗ್ರಹಿಸಿದ ಅವರು, ಪಾಕಿಸ್ತಾನದ ಮೇಲೆ ಪ್ರೇಮ ಇದ್ದರೆ ಪಾಕಿಸ್ತಾನಕ್ಕೆ ಹೋಗಿ, ನಿಮ್ಮ ಪಾಕಿಸ್ತಾನದ ಪ್ರೀತಿಯನ್ನು ತೋರಿಸಿ ಎಂದು ಹೇಳಿದರು.

ಭಾರತ ವಿಭಜನೆಯ ಸಂದರ್ಭದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಇಸ್ಲಾಂನ ರಾಜಕೀಯ ಮನೋಭಾವದ ಕುರಿತು ಬರೆದಿದ್ದ ವಿಚಾರಗಳನ್ನು ಪ್ರಸ್ತಾಪಿಸಿದ ರವಿ ಅವರು, ಭಾರತ-ಪಾಕಿಸ್ತಾನ ವಿಭಜನೆ ಅನಿವಾರ್ಯವಾದರೆ ಜನಸಂಖ್ಯೆಯ ವಿನಿಮಯ ನಡೆಯಬೇಕು ಎಂಬ ಅಭಿಪ್ರಾಯವನ್ನು ಅಂಬೇಡ್ಕರ್ ಅವರು ವ್ಯಕ್ತಪಡಿಸಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇಂತಹವರ ಧೈರ್ಯ ಹೆಚ್ಚಾಗಿದೆ. ಕಾಂಗ್ರೆಸ್ ಬಂದ ಮೇಲೆ ಇಂಥವರ ಬಾಲ ಉದ್ದ ಆಗಿದೆ. ಇವರ ಬಾಲ ಕತ್ತರಿಸಿ, ಜೈಲಿಗೆ ಕಳುಹಿಸಿ ಎಂದು ಆಗ್ರಹಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+