ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹುಲಿ ಗಣತಿ ವರದಿ; ಕರ್ನಾಟಕ ಹುಲಿಗಳ ಸಂಖ್ಯೆಯಲ್ಲಿ ದೇಶಕ್ಕೆ ಪ್ರಥಮ?

|
Google Oneindia Kannada News

ಬೆಂಗಳೂರು, ಜನವರಿ 09; ಕರ್ನಾಟಕದ ಹಿರಿಮೆಗೆ ಮತ್ತೊಂದು ಗರಿ ಶೀಘ್ರದಲ್ಲೇ ಸಿಗುವ ನಿರೀಕ್ಷೆ ಇದೆ. ದೇಶದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಾಗಿರುವ ರಾಜ್ಯ ಎಂಬ ಕಿರೀಟ ಕರ್ನಾಟಕ್ಕೆ ಸಿಗಲಿದೆ. ಹುಲಿಗಳ ಸಂಖ್ಯೆಯಲ್ಲಿ ಮಧ್ಯ ಪ್ರದೇಶ ಮತ್ತು ಕರ್ನಾಟಕದ ನಡುವೆ ಸ್ಪರ್ಧೆ ಇತ್ತು.

2022ರಲ್ಲಿ ಮಧ್ಯ ಪ್ರದೇಶದಲ್ಲಿ 22 ಹುಲಿಗಳು ಸಾವನ್ನಪ್ಪಿವೆ. ಕರ್ನಾಟಕದಲ್ಲಿ 15 ಹುಲಿಗಳು ಮರಣ ಹೊಂದಿವೆ ಎಂಬ ಮಾಹಿತಿ ಸಿಕ್ಕಿದೆ. 2022ನೇ ಸಾಲಿನ ಹುಲಿ ಗಣತಿ ವರದಿ ಬಿಡುಗಡೆಯಾದರೆ ಯಾವ ರಾಜ್ಯದಲ್ಲಿ ಎಷ್ಟು ಹುಲಿಗಳಿವೆ? ಎಂಬುದು ತಿಳಿಯಲಿದೆ.

ಮೈಸೂರಿನಲ್ಲಿ ಮಾನವ-ವನ್ಯಪ್ರಾಣಿ ಸಂಘರ್ಷ: ಹುಲಿ, ಚಿರತೆ, ಕಾಡಾನೆ ದಾಳಿಗೆ ಬಲಿಯಾದವರೆಷ್ಟು? ಮೈಸೂರಿನಲ್ಲಿ ಮಾನವ-ವನ್ಯಪ್ರಾಣಿ ಸಂಘರ್ಷ: ಹುಲಿ, ಚಿರತೆ, ಕಾಡಾನೆ ದಾಳಿಗೆ ಬಲಿಯಾದವರೆಷ್ಟು?

2018ರ ಹುಲಿಗಣತಿ ಪ್ರಕಾರ ಕರ್ನಾಟಕ ಮತ್ತು ಮಧ್ಯ ಪ್ರದೇಶದಲ್ಲಿ ಹೆಚ್ಚು ಕಡಿಮೆ ಹುಲಿಗಳ ಸಂಖ್ಯೆ ಒಂದೇ ಆಗಿತ್ತು. 2022ರ ಹುಲಿ ಗಣತಿ ವೇಳೆ ಮಧ್ಯ ಪ್ರದೇಶದಲ್ಲಿ ಅಧಿಕ ಹುಲಿಗಳು ಮರಣ ಹೊಂದಿರುವುದು ತಿಳಿದುಬಂದಿದೆ. ಗಣತಿಯ ವರದಿ ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿದೆ.

ನಾಗರಹೊಳೆಯಲ್ಲಿ ಬೇಟೆ ಕಲಿತ ತಬ್ಬಲಿ ಹುಲಿ ಮರಿಗಳು! ನಾಗರಹೊಳೆಯಲ್ಲಿ ಬೇಟೆ ಕಲಿತ ತಬ್ಬಲಿ ಹುಲಿ ಮರಿಗಳು!

ಕರ್ನಾಟಕದಲ್ಲಿ 524 ಮತ್ತು ಮಧ್ಯ ಪ್ರದೇಶದಲ್ಲಿ 526 ಹುಲಿಗಳಿವೆ ಎಂದು 2018ರ ಹುಲಿ ಗಣತಿ ವರದಿ ಹೇಳಿತ್ತು. ಈ ಗಣತಿ ಮೂಲಕ ಮಧ್ಯ ಪ್ರದೇಶ ಅತಿ ಹೆಚ್ಚು ಹುಲಿಗಳಿರುವ ರಾಜ್ಯ ಎಂಬ ಪಟ್ಟ ಪಡೆದಿತ್ತು. ಆದರೆ ಈಗ ಮಧ್ಯ ಪ್ರದೇಶದಲ್ಲಿ ಹುಲಿಗಳ ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣ ತಿಳಿದು ಬಂದಿಲ್ಲ ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Bandipur Tiger Reserve : ರಾಜ್ಯದಲ್ಲೇ ಬಂಡೀಪುರ ಉತ್ತಮ ಹುಲಿ ಸಂರಕ್ಷಿತ ವಲಯBandipur Tiger Reserve : ರಾಜ್ಯದಲ್ಲೇ ಬಂಡೀಪುರ ಉತ್ತಮ ಹುಲಿ ಸಂರಕ್ಷಿತ ವಲಯ

4 ವರ್ಷಗಳಿಗೊಮ್ಮೆ ಹುಲಿ ಗಣತಿ

4 ವರ್ಷಗಳಿಗೊಮ್ಮೆ ಹುಲಿ ಗಣತಿ

All India Tiger Estimation (AITE) ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಹುಲಿಗಳ ಗಣತಿ ನಡೆಸುತ್ತದೆ. 2018ರಲ್ಲಿ ಈ ಹಿಂದೆ ಹುಲಿ ಗಣತಿ ನಡೆದಿತ್ತು. 2022ರಲ್ಲಿ ಹುಲಿ ಗಣತಿ ನಡೆದಿದ್ದು, ಕೆಲವೇ ದಿನಗಳಲ್ಲಿ ಇದರ ವರದಿ ಬಿಡುಗಡೆಯಾಗುವ ನಿರೀಕ್ಷೆ ಇದೆ. ಯಾವ ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಅಧಿಕವಾಗಿದೆ ಎಂದು ತಿಳಿದುಕೊಳ್ಳಲು ಜನರು ಸಹ ಕುತೂಹಲದಿಂದ ಕಾಯುತ್ತಿದ್ದಾರೆ.

ಎನ್‌ಟಿಸಿಎ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿರುವ ಅಂಕಿ-ಸಂಖ್ಯೆಗಳ ಮಾಹಿತಿಯಂತೆ 2022ರಲ್ಲಿ ಮಧ್ಯ ಪ್ರದೇಶದಲ್ಲಿ 34, ಕರ್ನಾಟಕದಲ್ಲಿ 15 ಹುಲಿಗಳು ಮೃತಪಟ್ಟಿವೆ. ಈ ಎರಡೂ ರಾಜ್ಯಗಳಲ್ಲಿಯೇ ದೇಶದಲ್ಲಿ ಅತಿ ಹೆಚ್ಚು ಹುಲಿಗಳಿವೆ.

ಎಷ್ಟು ಹುಲಿಗಳು ಸಾವು?

ಎಷ್ಟು ಹುಲಿಗಳು ಸಾವು?

ಕಳೆದ ವರ್ಷ ದೇಶದಲ್ಲಿ ಒಟ್ಟು 117 ಹುಲಿಗಳು ಸಾವನ್ನಪ್ಪಿವೆ ಎಂದು ಎನ್‌ಟಿಸಿಎ ಅಂಕಿ-ಅಂಶಗಳು ಹೇಳಿವೆ. ಹುಲಿಗಳ ಸಾವಿಗೆ ವಿವಿಧ ಕಾರಣಗಳನ್ನು ಪಟ್ಟಿ ಮಾಡಲಾಗಿದೆ. ಗಣತಿ ವರದಿಯಲ್ಲಿ ಇವುಗಳನ್ನು ಸೇರಿಸಿರುವ ಸಾಧ್ಯತೆ ಇದೆ.

ಹುಲಿಗಳ ಸಾವಿನ ಸಂಖ್ಯೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಕೇಂದ್ರ ವನ್ಯಜೀವಿ ವಿಭಾಗದ ಮುಖ್ಯಸ್ಥ ಜೆ. ಎಸ್. ಚೌವ್ಹಾಣ್ ಪಿಟಿಐಗೆ ಉತ್ತರಿಸಿದ್ದಾರೆ, "ಕರ್ನಾಟಕ ಮತ್ತು ಮಧ್ಯ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ಸಮವಾಗಿದೆ. ಆದರೆ ಏಕೆ ಹೆಚ್ಚು ಹುಲಿಗಳು ಅಲ್ಲಿ ಸಾವನ್ನಪ್ಪಿವೆ ತಿಳಿದಿಲ್ಲ" ಎಂದು ಹೇಳಿದ್ದಾರೆ.

ವರ್ಷಕ್ಕೆ 40 ಸಾವುಗಳು

ವರ್ಷಕ್ಕೆ 40 ಸಾವುಗಳು

ಈ ಹಿಂದಿನ ವರ್ಷಗಳ ಅಂಕಿ ಸಂಖ್ಯೆಗಳನ್ನು ನೋಡಿದರೆ ವಾರ್ಷಿಕ 40 ಹುಲಿಗಳು ನೈಸರ್ಗಿಕವಾಗಿ ಸಾವನ್ನಪ್ಪುತ್ತವೆ ಎಂದು ಅಂದಾಜಿಸಲಾಗಿದೆ. 2021ರಲ್ಲಿ ಮಧ್ಯ ಪ್ರದೇಶದಲ್ಲಿ 42 ಹುಲಿಗಳು ಮೃತಪಟ್ಟಿದ್ದವು. ದೇಶದಲ್ಲಿ ಮೃತಪಟ್ಟ ಹುಲಿಗಳ ಸಂಖ್ಯೆ 127 ಆಗಿತ್ತು. ಬೇರೆ ರಾಜ್ಯಗಳ ಬಗ್ಗೆ ತಿಳಿದಿಲ್ಲ, ಆದರೆ ಮಧ್ಯ ಪ್ರದೇಶದಲ್ಲಿ ಪ್ರತಿ ಹುಲಿಯ ಸಾವಿನ ಸಂಖ್ಯೆಯನ್ನು ನಿಖರವಾಗಿ ಸಂಗ್ರಹ ಮಾಡಲಾಗಿದೆ, ಆ ಕುರಿತು ಪರಿಶೀಲನೆ ಸಹ ನಡೆಯಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಮಧ್ಯ ಪ್ರದೇಶದಲ್ಲಿ 6 ಹುಲಿ ಸಂರಕ್ಷಿತ ತಾಣಗಳಿದ್ದು, ವಾರ್ಷಿಕ ಸುಮಾರು 250 ಮರಿಗಳ ಜನನವಾಗುತ್ತದೆ.

ಕರ್ನಾಟಕ, ಮಧ್ಯ ಪ್ರದೇಶ ರಾಜ್ಯಗಳು

ಕರ್ನಾಟಕ, ಮಧ್ಯ ಪ್ರದೇಶ ರಾಜ್ಯಗಳು

2006ರಲ್ಲಿ ನಡೆದ ಹುಲಿ ಗಣತಿಯಲ್ಲಿ ಮಧ್ಯ ಪ್ರದೇಶ 300 ಹುಲಿಗಳೊಂದಿಗೆ ಮೊದಲ ಸ್ಥಾನ ಪಡೆದಿತ್ತು. ಕರ್ನಾಟಕದಲ್ಲಿ 290 ಹುಲಿಗಳಿದ್ದವು. 2010ರಲ್ಲಿ ನಡೆದ ಹುಲಿ ಗಣತಿಯಲ್ಲಿ ಮಧ್ಯ ಪ್ರದೇಶದಲ್ಲಿ 257 ಮತ್ತು ಕರ್ನಾಟಕದಲ್ಲಿ 300 ಹುಲಿಗಳಿದ್ದವು.

2014ರ ಹುಲಿ ಗಣತಿ ವರದಿಯಂತೆ ಮಧ್ಯ ಪ್ರದೇಶ ಮತ್ತೆ 526 ಹುಲಿಗಳೊಂದಿಗೆ ಮೊದಲ ಸ್ಥಾನ ಪಡೆದಿತ್ತು. ಕರ್ನಾಟಕ 524 ಮತ್ತು ಉತ್ತರಾಖಂಡ ರಾಜ್ಯ 442 ಹುಲಿಗಳಿಗೆ ಅವಾಸ ಸ್ಥಾನವಾಗಿತ್ತು. ದೇಶದಲ್ಲಿನ ಹುಲಿಗಳ ಸಂಖ್ಯೆ 2006ರಲ್ಲಿ 1,411 ಇತ್ತು ಮತ್ತು 2018ರಲ್ಲಿ 2,967ಕ್ಕೆ ಏರಿಕೆಯಾಗಿದೆ.

English summary
Madhya Pradesh lost 34 tigers in 2022. Karnataka may come up for top one post in ranking of tiger state after 2022 national tiger census report released.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X