Karnataka Bandh: 'ಕಮಲ್ ಹಾಸನ್ ವಿವಾದ: ಕರ್ನಾಟಕ ಬಂದ್ ಮಾಡುತ್ತೇವೆ'
ಮೈಸೂರು, ಜೂನ್ 02: ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವಂತ ನಟ ಕಮಲ್ ಹಾಸನ್ ಕನ್ನಡಿಗರ ಕ್ಷಮೆ ಕೇಳಬೇಕು. ಕನ್ನಡ ಭಾವನೆಗಳಿಗೆ ಧಕ್ಕೆ ತಂದು ಕ್ಷಮೆ ಕೇಳುವುದಿಲ್ಲ ಮುಖ ತಿರುಗಿಸಿ ಕೂತಿರುವ ಕಮಲ್ ಹಾಸನ್ ವಿರುದ್ಧ ಕನ್ನಡಿಗರು ತೀವ್ರ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ. ಕಮಲ್ ಹಾಸನ್ ಆ ಒಂದೇ ಒಂದು ಹೇಳಿಕೆ ಮೂಲಕ ಕನ್ನಡಿಗರ ಮನಸ್ಸಿಗೆ ನೋವುಂಟು ಮಾಡಿರುವುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಕರ್ನಾಟಕದಲ್ಲಿ ಅವರು ನಟಿಸಿದ ಸಿನಿಮಾ 'ಥಗ್ ಲೈಫ್' ರಿಲೀಸ್ ಮಾಡುವುದಕ್ಕೆ ಬಿಡುವುದಿಲ್ಲ ಎಂದು ಕನ್ನಡ ಪರ ಹೋರಾಟಗಾರರು ಪಟ್ಟು ಹಿಡಿದು ಕೂತಿದ್ದಾರೆ.
ಕಮಲ್ ಹಾಸನ್ ವಿವಾದದ ಕುರಿತು ಮೈಸೂರಿನಲ್ಲಿ ಮಾಧ್ಯಮಗಳ ಜೊತೆಗೆ ಕನ್ನಡ ಒಕ್ಕೂಟದ ವಾಟಾಳ್ ನಾಗರಾಜ್ ಅವರು ಮಾತನಾಡಿ, ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವಂತ ನಟ ಕಮಲ್ ಹಾಸನ್ ಕನ್ನಡಿಗರ ಕ್ಷಮೆ ಕೇಳಬೇಕು. ಇಲ್ಲದೇ ಹೋದರೇ ಕರ್ನಾಟಕ ಬಂದ್ ಮಾಡುತ್ತೇವೆ. ಅವರ ನಟನೆಯ ಥಗ್ ಲೈಫ್ ಬಿಡುಗಡೆಯಾದ್ರೆ ಕರ್ನಾಟಕ ರಣರಂಗ ಆಗಲಿದೆ ಎಂಬುದಾಗಿ ಎಚ್ಚರಿಕೆ ನೀಡಿದ್ದಾರೆ. ಕಮಲ್ ಹಾಸನ್ ಕ್ಷಮೆ ಕೇಳದಿದ್ರೆ ಕರ್ನಾಟಕ ಬಂದ್ ಗೆ ಕರೆ ನೀಡಲಾಗುತ್ತದೆ. ಈ ಬಗ್ಗೆ ಎಲ್ಲಾ ಸಂಘಟನೆಗಳ ಜೊತೆಗೆ ಮಾತನಾಡಿ ಬೆಂಬಲ ಕೇಳುತ್ತೇವೆ ಎಂದು ಹೇಳಿದ್ದಾರೆ.

ಕಮಲ್ ಹಾಸನ್ ಚಿತ್ರ ಬಿಡುಗಡೆ ಆದ್ರೇ ಕರ್ನಾಟಕ ರಣರಂಗವಾಗುತ್ತೆ. ಜಿಲ್ಲಾ, ತಾಲ್ಲೂಕುಗಳಲ್ಲಿಯೂ ಹೋರಾಟಗಾರರು ಸಜ್ಜಾಗಬೇಕು. ಜೈಲಿಗೆ ಹೋಗೋದಕ್ಕೂ ಎಲ್ಲಾ ಹೋರಾಟಗಾರರು ಸಜ್ಜಾಗಿದ್ದೇವೆ. ನಟ ಕಮಲ್ ಹಾಸನ್ ಒಬ್ಬ ಅವಿವೇಕಿ. ಅಯೋಗ್ಯ. ಮೂರ್ಖ. ರಾಜ್ಯ ಸರ್ಕಾರ ತುರ್ತಾಗಿ ವಿಶೇಷ ಅಧಿವೇಶನ ಕರೆಯಬೇಕು. ಕನ್ನಡಕ್ಕೆ ಆಗುತ್ತಿರುವ ಅವಮಾನದ ಬಗ್ಗೆ ಚರ್ಚೆಯಾಗಬೇಕು ಎಂದು ವಾಟಾಳ್ ನಾಗರಾಜ್ ಅವರು ಆಗ್ರಹಿಸಿದರು.
ಕರ್ನಾಟಕದಿಂದ ಕಮಲ್ ಹಾಸನ್ ಬಹಿಷ್ಕರಿಸಬೇಕು. ಈ ವಿಚಾರದಲ್ಲಿ ಕನ್ನಡ ಚಿತ್ರರಂಗ ಗಂಭೀರ ಚಿಂತನೆ ಮಾಡಬೇಕಿದೆ. ಕಮಲ ಹಾಸನ್ ಚಿತ್ರ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಬಿಡುಗಡೆಯಾಗಬಾರದು.ರಾಜ್ಯದ ಜನರು ಕ್ಷಮೆ ಕೇಳಬೇಕೆಂದು ಮೈಸೂರಿನಲ್ಲಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆಗ್ರಹಿಸುತ್ತಿದ್ದಾರೆ. ಕಮಲ್ ಹಾಸನ್ ಕ್ಷಮೆ ಕೇಳದೆ ಉದ್ದಟತನ ಮಾಡುತ್ತಿದ್ದಾರೆ. ಕಮಲ್ ಹಾನಸ್ ವಿರುದ್ಧ ಸಿಎಂ ಸಿದ್ದರಾಮಯ್ಯ ಅವರು ಮೊಕದ್ದಮೆ ಹಾಕಬೇಕು.
ಕರ್ನಾಟಕ ಹೈ ಕೋರ್ಟ್ ಗೆ ಕರೆದುಕೊಂಡು ಬಂದು ರಾಜ್ಯದ ಜೈಲಿನಲ್ಲಿ ಹಾಕಬೇಕು. ಈ ವಿಚಾರದಲ್ಲಿ ರಾಜಕಾರಣಿಗಳು ನಟರು ಬೀದಿಗೆ ಬರಬೇಕು. ಒಂದು ವೇಳೆ ಕಮಲ್ ಹಾಸನ್ ಸಿನಿಮಾ ಬಿಡುಗಡೆಯಾದರೆ ಭಾರೀ ಹೊರಟ ಮಾಡುತ್ತೇವೆ. ಎಲ್ಲಾ ಕನ್ನಡ ಪರ ಸಂಘಟನೆಗಳು ಸೇರಿ ಕರ್ನಾಟಕ ಬಂದ್ ಮಾಡುತ್ತೇವೆ. ತಮಿಳುನಾಡಿನ ಎಲ್ಲಾ ರಾಜಕೀಯ ಪಕ್ಷಗಳು ಇದನ್ನು ಖಂಡಿಸಬೇಕು. ಸಾಹಿತಿಗಳು, ಬರಹಗಾರರು ಈಗ ಕನ್ನಡದ ಪರ ನಿಲ್ಲಬೇಕು. ಕೇವಲ ಶಿವರಾಜ್ ಕುಮಾರ್ ಮಾತ್ರವಲ್ಲ, ಎಲ್ಲಾ ನಟರು ಕನ್ನಡದ ಪರ ನಿಲ್ಲಬೇಕು ಎಂದು ವಾಟಾಳ್ ನಾಗರಾಜ್ ಅವರು ಹೇಳಿದರು.












Click it and Unblock the Notifications